ಆರ್ಥಿಕತೆಗೆ ಮತ್ತೊಂದು ಶಾಕ್, 19 ತಿಂಗಳಲ್ಲಿ ಕನಿಷ್ಠ ಮಟ್ಟಕ್ಕಿಳಿದ ಜಿಎಸ್ಟಿ ಸಂಗ್ರಹ...!

ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಸೆಪ್ಟಂಬರ್ ತಿಂಗಳ ಅಂಕಿ ಅಂಶಗಳ ಪ್ರಕಾರ ಜಿಎಸ್ಟಿ 91,916 ಕೋಟಿ ರೂ.ಆಗಿದ್ದು, ಆ ಮೂಲಕ ಜಿಎಸ್ಟಿ ಸಂಗ್ರಹವು 19 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇದರ ಹಿಂದಿನ ತಿಂಗಳಲ್ಲಿ 98,202 ಕೋಟಿ ರೂ ಎನ್ನಲಾಗಿದೆ.

Last Updated : Oct 1, 2019, 07:23 PM IST
ಆರ್ಥಿಕತೆಗೆ ಮತ್ತೊಂದು ಶಾಕ್, 19 ತಿಂಗಳಲ್ಲಿ ಕನಿಷ್ಠ ಮಟ್ಟಕ್ಕಿಳಿದ ಜಿಎಸ್ಟಿ ಸಂಗ್ರಹ...!    title=
ಸಾಂದರ್ಭಿಕ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಸೆಪ್ಟಂಬರ್ ತಿಂಗಳ ಅಂಕಿ ಅಂಶಗಳ ಪ್ರಕಾರ ಜಿಎಸ್ಟಿ 91,916 ಕೋಟಿ ರೂ.ಆಗಿದ್ದು, ಆ ಮೂಲಕ ಜಿಎಸ್ಟಿ ಸಂಗ್ರಹವು 19 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇದರ ಹಿಂದಿನ ತಿಂಗಳಲ್ಲಿ 98,202 ಕೋಟಿ ರೂ ಎನ್ನಲಾಗಿದೆ.

ಕಳೆದ ವರ್ಷ ಇದೇ ತಿಂಗಳಲ್ಲಿ ಇದೇ ತಿಂಗಳಲ್ಲಿ ಆದಾಯ ಸಂಗ್ರಹ ರೂ. 94,442 ಕೋಟಿ, ಶೇ 2.67 ರಷ್ಟು ಇತ್ತು ಎಂದು ತಿಳಿದುಬಂದಿದೆ.

ಹಣಕಾಸು ಸಚಿವಾಲಯ ಈಗ ಜಿಎಸ್ಟಿ ಸಂಗ್ರಹದ ಕುರಿತಾಗಿ ಪ್ರಕಟಣೆ ಬಿಡುಗಡೆ ಮಾಡಿ ' 2019 ರ ಸೆಪ್ಟೆಂಬರ್ ತಿಂಗಳಲ್ಲಿ ಸಂಗ್ರಹಿಸಲಾದ ಒಟ್ಟು ಒಟ್ಟು ಜಿಎಸ್ಟಿ ಆದಾಯ 91,916 ಕೋಟಿ ರೂ. ಇದರಲ್ಲಿ ಸಿಜಿಎಸ್ಟಿ 16,630 ಕೋಟಿ ರೂ., ಎಸ್ಜಿಎಸ್ಟಿ 22,598 ಕೋಟಿ ರೂ., ಐಜಿಎಸ್ಟಿ 45,069 ಕೋಟಿ ರೂ. (ಆಮದುಗಳಲ್ಲಿ ಸಂಗ್ರಹಿಸಿದ ರೂ. 22,097 ಕೋಟಿ ಸೇರಿದಂತೆ) ) ಮತ್ತು ಮೇಲ್ತೆರಿಗೆ 7,620 ಕೋಟಿ ರೂ. (ಆಮದಿನ ಮೇಲೆ ಸಂಗ್ರಹಿಸಿದ 728 ಕೋಟಿ ರೂ. ಸೇರಿದಂತೆ) ಎಂದು ಹೇಳಿದೆ.

ಆಗಸ್ಟ್ ತಿಂಗಳಿಗೆ (ಸೆಪ್ಟೆಂಬರ್ 30 ರವರೆಗೆ) ಸಲ್ಲಿಸಲಾದ ಒಟ್ಟು ಜಿಎಸ್‌ಟಿಆರ್ 3 ಬಿ ರಿಟರ್ನ್ಸ್ (ಸ್ವಯಂ ಮೌಲ್ಯಮಾಪನ ರಿಟರ್ನ್‌ನ ಸಾರಾಂಶ) 75.94 ಲಕ್ಷ ಎಂದು ಹೇಳಿದೆ. ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ, ದೇಶೀಯ ಘಟಕವು ಶೇಕಡಾ 7.82 ರಷ್ಟು ಏರಿಕೆಯಾಗಿದೆ, ಆದರೆ ಆಮದಿನ ಮೇಲಿನ ಜಿಎಸ್ಟಿ ಋಣಾತ್ಮಕ ಬೆಳವಣಿಗೆಯನ್ನು ತೋರಿಸಿದೆ ಮತ್ತು ಒಟ್ಟು ಸಂಗ್ರಹವು ಶೇಕಡಾ 4.90 ರಷ್ಟು ಹೆಚ್ಚಾಗಿದೆ. ಈಗ ಕಡಿಮೆ ಪರೋಕ್ಷ ತೆರಿಗೆ ಸಂಗ್ರಹವು ಸರ್ಕಾರದ ಹಣಕಾಸಿನ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ ಎನ್ನಲಾಗಿದೆ.
 

Trending News