Haunted village! ಈ ಊರಿನ ಹೆಸರಲ್ಲಿ ಅಂತದ್ದೇನಿದೆ? ಹೆಸರು ಕೇಳಿದ್ರೆನೇ ಜನ ಭಯ ಬೀಳ್ತಾರೆ

Viral News - ಲಖನೌ (Lucknow) ಬಳಿ ಇರುವ ಹಳ್ಳಿಯೊಂದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ. ಈ ಗ್ರಾಮದ ಹೆಸರು ಕೊರೌನಾ (Corona Village). ಕೊರೊನಾ ವೈರಸ್ (Coronavirus) ಅನ್ನು ಹೋಲುವ ಹೆಸರಿನಿಂದಾಗಿ, ಈ ಗ್ರಾಮದ ಬಗ್ಗೆ ಜನರ ಮನದಲ್ಲಿ ಭೀತಿ ಮನೆಮಾಡಿದೆ  ಇದು ದೊಡ್ಡ ವರ್ಗಕ್ಕೆ ತಮಾಷೆಯ ವಿಷಯವಾಗಿದೆ. ಜನರು ಇಲ್ಲಿಗೆ ತಲುಪಿ ವೀಡಿಯೊ ಮತ್ತು ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

Written by - Nitin Tabib | Last Updated : Dec 21, 2021, 08:39 PM IST
  • ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಳ್ಳಿಯೊಂದು ಸಾಕಷ್ಟು ಸುದ್ದಿಮಾಡುತ್ತಿದೆ.
  • ಉತ್ತರ ಪ್ರದೇಶದ ರಾಜಧಾನಿ ಲಖನೌನಿಂದ ಸುಮಾರು 90 ಕೀ.ಮೀ ಅಂತರದಲ್ಲಿದೆ ಈ ಗ್ರಾಮ.
  • ಈ ಗ್ರಾಮ ಯಾಕೆ ಇಷ್ಟೊಂದು ಸುದ್ದಿಯಲ್ಲಿದೆ ತಿಳಿಯೋಣ ಬನ್ನಿ.
Haunted village! ಈ ಊರಿನ ಹೆಸರಲ್ಲಿ ಅಂತದ್ದೇನಿದೆ? ಹೆಸರು ಕೇಳಿದ್ರೆನೇ ಜನ ಭಯ ಬೀಳ್ತಾರೆ  title=
Haunted Village! (Photo Courtesy: ANI)

ಲಖನೌ: Trending News - 2 ವರ್ಷಗಳಿಂದ ಕೊರೊನಾ ಹಾವಳಿಯಿಂದ (Corona Pandemic) ಜನಸಾಮಾನ್ಯರು ಸಾಕಷ್ಟು ತೊದರೆ ಅನುಭವಿಸಿದ್ದಾರೆ. ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದರೆ, ಸಾವಿರಾರು ಕುಟುಂಬಗಳು ನಾಶವಾಗಿವೆ. ಲಕ್ಷಗಟ್ಟಲೆ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ ಇದೀಗ  Omicron ಮತ್ತೊಮ್ಮೆ ವಿಶ್ವದಾದ್ಯಂತ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ. ಇದರ ಪರಿಣಾಮ ಇದೀಗ ಭಾರತದಲ್ಲೂ ಕಾಣುತ್ತಿದೆ. ಆದರೆ ಈ ಕೊರೊನಾ ಹಾವಳಿಯ ನಡುವೆ ಕಳೆದ ಎರಡು ವರ್ಷಗಳಿಂದ ಒಂದು ಹಳ್ಳಿಯ ಹೆಸರು ವ್ಯಾಪಕ ಚರ್ಚೆಯಲ್ಲಿದೆ. ಪರಿಸ್ಥಿತಿ ಯಾವ ರೀತಿ ಇದೆ ಎಂದರೆ, ಈ ಗ್ರಾಮದ ಹೆಸರು ಕೇಳಿ ಜನ ಯಾವ ರೀತಿ ಹೆದರಿದ್ದಾರೆ ಎಂದರೆ, ಈ ಗ್ರಾಮಕ್ಕೆ ಹೋಗುವುದು ಬಿಡಿ, ಆ ಗ್ರಾಮದ ಹೆಸರನ್ನು ಸಹ ಹೇಳಲು ಜನ ಹಿಂಜರಿಯುತ್ತಾರಂತೆ. ಅಂದ ಹಾಗೆ ಈ ಗ್ರಾಮದ ಹೆಸರು ಕೊರೌನಾ. ಲಕ್ನೋದಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಕೊರೌನಾ ಗ್ರಾಮದಲ್ಲಿ ಹೆಚ್ಚು ಕರೋನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ, ಆದರೂ ಕೂಡ ಈ ಗ್ರಾಮದಿಂದ ಜನರು ಅಂತರ ಕಾಯ್ದುಕೊಂಡಿದ್ದಾರೆ. 

ಇದನ್ನೂ ಓದಿ-ಖಾಸಗಿ ಚಿತ್ರ ತೆಗೆದು Blackmail: ಹಣಕ್ಕೆ ಬೇಡಿಕೆಯಿಟ್ಟವನ ಹೆಣ ಉರುಳಿಸಿದ ವಿದ್ಯಾರ್ಥಿನಿಯರು.!

ತಮಾಷೆಯ ವಿಷಯ ಕೂಡ ಹೌದು
ಇನ್ನೊಂದೆಡೆ ಕೊರೌನಾ ಗ್ರಾಮವು ಜನರ ಹಾಸ್ಯಕ್ಕೆ ಕೂಡ ಕಾರಣವಾಗಿದೆ. ಸುತ್ತಲಿನ ಗ್ರಾಮಸ್ಥರು ಇಲ್ಲಿ ವಾಸಿಸುವವರನ್ನು ಗೇಲಿ ಮಾಡುತ್ತಾರೆ. ನಮ್ಮ ಗ್ರಾಮದ ಹೆಸರು ಹೇಳಿದರೆ ಜನ ಗೇಲಿ ಮಾಡುತ್ತಾರೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ನೀವೂ ಇನೂ ಬದುಕಿದ್ದೀರಾ?  ಅಥವಾ ಕರೋನಾ ವೈರಸ್ ಎಷ್ಟು ಕಾಲ ಉಳಿಯುತ್ತದೆ? ಅಥವಾ ಕೊರೊನಾ ಹುಟ್ಟಿದ್ದು ಈ ಗ್ರಾಮದಲ್ಲಿಯೇನಾ? ಅಂತ ಪ್ರಶ್ನೆಗಳನ್ನು ಈ ಊರಿನ ಗ್ರಾಮಸ್ತರಿಗೆ ಕೇಳಿ ಜನ ಗೇಲಿ ಮಾಡುತ್ತಿದ್ದಾರೆ. 

ಇದನ್ನೂ ಓದಿ-ಹೆತ್ತವರೇ ತಮ್ಮನನ್ನು ಕೊಂದಿದ್ದಾರೆ ಎಂದು ಠಾಣೆಗೆ ಕರೆ ಮಾಡಿದ ಅಣ್ಣ.. ಸತ್ಯ ತಿಳಿದು ಶಾಕ್‌ ಆದ ಪೊಲೀಸರು.!

ಜನರೂ ನೋಡಲು ಬರುತ್ತಾರೆ
ಈ ಗ್ರಾಮದ ಹೆಸರಿನ ಚರ್ಚೆಯ ಜೊತೆಗೆ, ಕೆಲ ಜನರು ಲಾಕ್‌ಡೌನ್ ತೆರವಿನ ನಂತರ ಈ ಗ್ರಾಮವನ್ನು ತಲುಪಿದ್ದಾರೆ. ಇವರಲ್ಲಿ ಕೆಲವರಿಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಮಸಾಲೆ ಸಿಕ್ಕಂತಾಗಿದೆ. ಹೆಚ್ಚಿನ ಸಂಖ್ಯೆಯ ಜನರು ಇಲ್ಲಿಗೆ ತಲುಪುತ್ತಾರೆ ಮತ್ತು ಕೊರೌನಾ ಗ್ರಾಮದ  ಮೈಲಿಗಲ್ಲು ಬಳಿ ತಮ್ಮ ಫೋಟೋ ಕ್ಲಿಕಿಸಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಗ್ರಾಮವನ್ನು ತಲುಪಿದ ನಂತರ ಅನೇಕ ಜನರು ವೀಡಿಯೊಗಳನ್ನು ಸಹ ಮಾಡಿದ್ದಾರೆ ಮತ್ತು ಸ್ಥಳೀಯ ಜನರೊಂದಿಗೆ ಸಂವಹನ ನಡೆಸಿದ ನಂತರ ತಮ್ಮ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ-ಫೋನ್ ಟ್ಯಾಪಿಂಗ್ ಬಿಡಿ, ನನ್ನ ಮಕ್ಕಳ ಇನ್‌ಸ್ಟಾಗ್ರಾಮ್ ಕೂಡ ಹ್ಯಾಕ್ ಮಾಡಲಾಗಿದೆ: ಪ್ರಿಯಾಂಕಾ ಗಾಂಧಿ ವಾದ್ರಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News