ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತ: 250ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ ಸೇನೆ

ಭಾರೀ ಹಿಮಪಾತದಿಂದಾಗಿ ಪೂಂಚ್ ಪ್ರದೇಶದಲ್ಲಿ ಬಫ್ಲಿಯಜ್‌ನಿಂದ ಶಫಿಯಾನ್‌ ಗೆ  ಸಂಪರ್ಕಿಸುವ ಮೊಘಲ್ ರಸ್ತೆಯಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ಜನ.

Last Updated : Apr 12, 2018, 05:30 PM IST
ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತ: 250ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ ಸೇನೆ title=
Pic: ANI video grab image

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಬುಧವಾರ(ಏಪ್ರಿಲ್ 11) ಭಾರೀ ಹಿಮಪಾತ ಉಂಟಾಗಿದ್ದು, ಸೇನೆ ಹಾಗೂ ಜಮ್ಮು ಕಾಶ್ಮೀರ ಪೋಲಿಸ್ ಜಂಟಿ ಕಾರ್ಯಾಚರಣೆ ನಡೆಸಿ ಅಪಾಯದಲ್ಲಿ ಸಿಲುಕಿದ್ದ 250ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದಾರೆ. 

ಪೂಂಚ್ ಪ್ರದೇಶದಲ್ಲಿ ಬಫ್ಲಿಯಜ್‌ನಿಂದ ಶಫಿಯಾನ್‌ ಗೆ  ಸಂಪರ್ಕಿಸುವ ಮೊಘಲ್ ರಸ್ತೆಯಲ್ಲಿ ಭಾರೀ ಹಿಮಪಾತದಿಂದಾಗಿ 250 ಕ್ಕೂ ಹೆಚ್ಚು ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿದ್ದರು. ಆ ಸಮಯದಲ್ಲಿ ಸೈನ್ಯ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸಂಕಷ್ಟದಲ್ಲಿದ್ದವರನ್ನು ಪಾರು ಮಾಡಿದರು.

Trending News