ಅಯೋಧ್ಯೆ ರಾಮಮಂದಿರದಲ್ಲಿ ನರ್ತಿಸಲಿದ್ದಾರೆ ಖ್ಯಾತ ನಟಿ: ನೃತ್ಯ ರೂಪಕದಲ್ಲಿ ದರ್ಶನವಾಗಲಿದೆ ‘ರಾಮಾಯಣ’

Hema Malini Dance in Ayodhya: ಹೇಮಾ ಮಾಲಿನಿ ಅನೇಕ ಕ್ಲಾಸಿಕ್ ಚಿತ್ರಗಳಲ್ಲಿನ ಅಭಿನಯಿಸಿ ಪ್ರಖ್ಯಾತಿ ಗಳಿಸಿದವರು. ಈಗ ಬಿಜೆಪಿ ನಾಯಕಿಯಾಗಿರುವ ನಟಿ-ರಾಜಕಾರಣಿ ಹೇಮಾ ಮಾಲಿನಿ ಅವರು ತಮ್ಮ ಕಚೇರಿಯಿಂದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

Written by - Bhavishya Shetty | Last Updated : Jan 15, 2024, 07:22 AM IST
    • ಬಾಲಿವುಡ್‌’ನ ಡ್ರೀಮ್ ಗರ್ಲ್ ಹೇಮಾ ಮಾಲಿನಿ
    • ರಾಮಾಯಣ ಆಧಾರಿತ ನೃತ್ಯ ನಾಟಕವನ್ನು ಪ್ರಸ್ತುತಪಡಿಸಲಿದ್ದಾರೆ ಬಾಲಿವುಡ್‌’ನ ಡ್ರೀಮ್ ಗರ್ಲ್
    • ಹೇಮಾ ಮಾಲಿನಿ ಅನೇಕ ಕ್ಲಾಸಿಕ್ ಚಿತ್ರಗಳಲ್ಲಿನ ಅಭಿನಯಿಸಿ ಪ್ರಖ್ಯಾತಿ ಗಳಿಸಿದವರು
ಅಯೋಧ್ಯೆ ರಾಮಮಂದಿರದಲ್ಲಿ ನರ್ತಿಸಲಿದ್ದಾರೆ ಖ್ಯಾತ ನಟಿ: ನೃತ್ಯ ರೂಪಕದಲ್ಲಿ ದರ್ಶನವಾಗಲಿದೆ ‘ರಾಮಾಯಣ’ title=
Hema Malini Dance in Ayodhya

Hema Malini Dance in Ayodhya: ಬಾಲಿವುಡ್‌’ನ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಅದ್ಭುತವಾಗಿ ನಟಿಸುವುದು ಮಾತ್ರವಲ್ಲದೆ ತುಂಬಾ ಚೆನ್ನಾಗಿ ನೃತ್ಯ ಮಾಡುತ್ತಾರೆ. ಅಂದಹಾಗೆ ಬಿಜೆಪಿ ನಾಯಕಿ ಹೇಮಾ ಮಾಲಿನಿ ಅವರು ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾ ದಿವಸ್‌’ನಲ್ಲಿ ರಾಮಾಯಣ ಆಧಾರಿತ ನೃತ್ಯ ನಾಟಕವನ್ನು ಪ್ರಸ್ತುತಪಡಿಸಲಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್’ನಲ್ಲಿ ಈ ಇಬ್ಬರು ಆಟಗಾರರಿಗೆ ಸ್ಥಾನ!

ಹೇಮಾ ಮಾಲಿನಿ ಅನೇಕ ಕ್ಲಾಸಿಕ್ ಚಿತ್ರಗಳಲ್ಲಿನ ಅಭಿನಯಿಸಿ ಪ್ರಖ್ಯಾತಿ ಗಳಿಸಿದವರು. ಈಗ ಬಿಜೆಪಿ ನಾಯಕಿಯಾಗಿರುವ ನಟಿ-ರಾಜಕಾರಣಿ ಹೇಮಾ ಮಾಲಿನಿ ಅವರು ತಮ್ಮ ಕಚೇರಿಯಿಂದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ರಾಮಮಂದಿರದ ಪ್ರತಿಷ್ಠಾಪನೆ ದಿನ ಅಯೋಧ್ಯೆಗೆ ಹೋಗಿ ಅಲ್ಲಿ ನೃತ್ಯ ರೂಪಕವನ್ನು ಪ್ರಸ್ತುತಪಡಿಸುವ ಬಗ್ಗೆ ಮಾತನಾಡುತ್ತಿದ್ದಾರೆ.

ಜಗತ್ ಗುರು ಪದ್ಮವಿಭೂಷಣ ರಾಮಭದ್ರಾಚಾರ್ಯರ 75ನೇ ಜನ್ಮದಿನದಂದು ಅಯೋಧ್ಯೆಯಲ್ಲಿ ಅಮೃತ ಮಹೋತ್ಸವವನ್ನು ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ನಟಿ ಹೇಮಾ ಮಾಲಿನಿ ವಿಶೇಷ ಪ್ರದರ್ಶನ ನೀಡಲಿದ್ದಾರೆ. ಜನವರಿ 17 ರಂದು ನಡೆಯಲಿರುವ ಈ ಪ್ರಸ್ತುತಿ ರಾಮಾಯಣ ಮತ್ತು ಮಾ ದುರ್ಗದ ವಿಶೇಷ ಸಂಚಿಕೆಯನ್ನು ಆಧರಿಸಿದೆ. ಈವೆಂಟ್ ಜನವರಿ 14 ರಿಂದ ಪ್ರಾರಂಭವಾಗಿ ಜನವರಿ 22 ರವರೆಗೆ ಮುಂದುವರಿಯುತ್ತದೆ. ರಾಮಮಂದಿರದ ಪ್ರತಿಷ್ಠಾಪನೆಯ ಕಾರ್ಯಕ್ರಮವಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ. ಹೀಗೆಂದು ಸ್ವತಃ ಹೇಮಾ ಮಾಲಿನಿ ಅವರೇ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಸುವಿನ ಸಗಣಿಯಿಂದ ತಯಾರಿಸಿದ 21 ಸಾವಿರ ದೀಪಗಳು ಅಯೋಧ್ಯೆಗೆ ರವಾನೆ: ‘ಪವಿತ್ರ ದೀಪಾವಳಿ’ ಆಚರಣೆ

ಕಳೆದ ವರ್ಷ ನವೆಂಬರ್‌’ನಲ್ಲಿ ಹೇಮಾ ಮಾಲಿನಿ ಅವರು ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಸಂತ ಮೀರಾಬಾಯಿ ಅವರ 525 ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೃತ್ಯ ನಾಟಕವನ್ನು ಪ್ರಸ್ತುತಪಡಿಸಿದ್ದರು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News