Punjab polls: ಫೆಬ್ರವರಿ 6 ಕ್ಕೆ ಪಂಜಾಬ್ ಸಿಎಂ ಅಭ್ಯರ್ಥಿ ಘೋಷಿಸಲಿರುವ ಕಾಂಗ್ರೆಸ್

ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯ ನಿರೀಕ್ಷೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ.ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಹೆಸರನ್ನು ಫೆಬ್ರವರಿ 6 ರಂದು ಪ್ರಕಟಿಸಲಾಗುವುದು ಎಂದು ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಗುರುವಾರದಂದು ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

Written by - Zee Kannada News Desk | Last Updated : Feb 3, 2022, 10:39 PM IST
  • ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯ ನಿರೀಕ್ಷೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ.
  • ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಹೆಸರನ್ನು ಫೆಬ್ರವರಿ 6 ರಂದು ಪ್ರಕಟಿಸಲಾಗುವುದು ಎಂದು ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಗುರುವಾರದಂದು ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
 Punjab polls: ಫೆಬ್ರವರಿ 6 ಕ್ಕೆ ಪಂಜಾಬ್ ಸಿಎಂ ಅಭ್ಯರ್ಥಿ ಘೋಷಿಸಲಿರುವ ಕಾಂಗ್ರೆಸ್ title=

ನವದೆಹಲಿ: ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯ ನಿರೀಕ್ಷೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ.ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಹೆಸರನ್ನು ಫೆಬ್ರವರಿ 6 ರಂದು ಪ್ರಕಟಿಸಲಾಗುವುದು ಎಂದು ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಗುರುವಾರದಂದು ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಶ್ರೀ ಚಮಕೌರ್ ಸಾಹಿಬ್‌ನಲ್ಲಿ ತಮ್ಮ ರಾಜಕೀಯ ಕಾರ್ಯಕ್ರಮದ ಸಂದರ್ಭದಲ್ಲಿ, ಚನ್ನಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , "ಫೆಬ್ರವರಿ 6 ರಂದು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಾಗುವುದು. ಅಂದು ನಾನು ರಾಹುಲ್ ಗಾಂಧಿಯೊಂದಿಗೆ ಇರುತ್ತೇನೆ." ಎಂದು ಅವರು ಹೇಳಿದರು.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಜನವರಿ 27 ರಂದು ಪಂಜಾಬ್‌ನಲ್ಲಿ ನಡೆದ ವರ್ಚುವಲ್ ರ್ಯಾಲಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದ ನಂತರ ರಾಜ್ಯ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯನ್ನು ಪಕ್ಷ ಘೋಷಿಸಲಿದೆ ಎಂದು ಹೇಳಿದ್ದರು.ಚನ್ನಿ ಮತ್ತು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಇಬ್ಬರೂ ಯಾರನ್ನು ಆಯ್ಕೆ ಮಾಡಿದರೂ ಇನ್ನೊಬ್ಬರು ಬೆಂಬಲಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಇದನ್ನೂ ಓದಿ: Guest Lecturers : ಅತಿಥಿ ಉಪನ್ಯಾಸಕರ ನೇಮಕ ; ಹಿರಿತನ, ಅರ್ಹತೆಗೆ ಆದ್ಯತೆ 

ಇನ್ನೊಂದೆಡೆಗೆ ಪಂಜಾಬ್ ಹಿರಿಯ ಕಾಂಗ್ರೆಸ್ ನಾಯಕ ಸುನೀಲ್ ಜಾಖರ್ ಗುರುವಾರದಂದು ಚನ್ನಿ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದರು "ಅವರು ಏನು ನಿರ್ಧರಿಸುತ್ತಾರೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಆದರೆ ಚನ್ನಿ ಅವರಿಗೆ ಅವಕಾಶ ನೀಡಲಾಗಿದೆ ಎಂದು ನಾನು ಅಭಿಪ್ರಾಯಪಟ್ಟಿದ್ದೇನೆ, ಅವರು ಕೆಲಸ ಮುಂದುವರೆಸಲು ಅವರಿಗೆ ಸಮಯ ನೀಡಬೇಕು.ನಾಲ್ಕು ತಿಂಗಳಲ್ಲಿ ಅವರ ಒಳ್ಳೆಯ ಕೆಲಸವನ್ನು ಜನರು ನೋಡಿದ್ದಾರೆ" ಎಂದು ಜಾಖರ್ ಹೇಳಿದರು.

ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸಿದ್ಧು “ಸುನೀಲ್ ಜಾಖರ್ ಅವರು ಏನು ಹೇಳಿದರೂ ಅದು ಅವರ ಕೈಯಲ್ಲಿಲ್ಲ, ಆದರೆ ನನ್ನ ಕೈಯಲ್ಲಿಲ್ಲ. ಜನರು ಶಾಸಕರನ್ನು ಆಯ್ಕೆ ಮಾಡುತ್ತಾರೆ ಮತ್ತು ನಂತರ ಸಿಎಂ ಆಯ್ಕೆ ಮಾಡುತ್ತಾರೆ. ನಾವು ಜನರಿಗೆ ಅಜೆಂಡಾ, ಮಾದರಿಯನ್ನು ನೀಡಬೇಕು ಎಂದು ಹೇಳಿದರು.

ಇದನ್ನೂ ಓದಿ: Siddaramaiah : 'ಸಿಎಂ ಇಬ್ರಾಹಿಂ ಇಲ್ಲೇ ಇದ್ರೂ ನನ್ನ ಸ್ನೇಹಿತ, ಪಕ್ಷ ಬಿಟ್ಟರೂ ನನ್ನ ಸ್ನೇಹಿತ'

ಕಾಂಗ್ರೆಸ್ ಚನ್ನಿ ಅವರನ್ನು ಬದೌರ್ ಮತ್ತು ಚಮ್ಕೌರ್ ಸಾಹಿಬ್ ಎಸ್‌ಸಿ ಎರಡು ಸ್ಥಾನಗಳಿಂದ ಕಣಕ್ಕಿಳಿಸಿದ್ದು, ಸಿಎಂ ಆಕಾಂಕ್ಷಿಯಾಗಿರುವ ಸಿಧು ಅಮೃತಸರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.117 ಸದಸ್ಯರನ್ನು ಆಯ್ಕೆ ಮಾಡಲು ಪಂಜಾಬ್ ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News