ಸೆಪ್ಟೆಂಬರ್ 25 ರೊಳಗೆ ಒಮಾನ್ ಕರಾವಳಿ ಪ್ರವೇಶಿಸಲಿದೆ 'ಹಿಕ್ಕಾ' ಚಂಡಮಾರುತ; ಐಎಂಡಿ

ಸೆಪ್ಟೆಂಬರ್ 25 ರ ಮುಂಜಾನೆ ಸೈಕ್ಲೋನಿಕ್ ಬಿರುಗಾಳಿ `ಹಿಕ್ಕಾ' ಒಮಾನ್ ಕರಾವಳಿಯನ್ನು ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ತಿಳಿಸಿದೆ.

Last Updated : Sep 24, 2019, 01:10 PM IST
ಸೆಪ್ಟೆಂಬರ್ 25 ರೊಳಗೆ ಒಮಾನ್ ಕರಾವಳಿ ಪ್ರವೇಶಿಸಲಿದೆ 'ಹಿಕ್ಕಾ' ಚಂಡಮಾರುತ; ಐಎಂಡಿ title=
Representational Image

ನವದೆಹಲಿ: ಸೆಪ್ಟೆಂಬರ್ 25 ರೊಳಗೆ 'ಹಿಕ್ಕಾ' ಚಂಡಮಾರುತ ಒಮಾನ್ ಕರಾವಳಿಯನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ತಿಳಿಸಿದೆ.

"ಅರೇಬಿಯನ್ ಸಮುದ್ರದಲ್ಲಿ ಸೆಪ್ಟೆಂಬರ್ 23 ರಂದು 20.5 ° ಉತ್ತರ ಅಕ್ಷಾಂಶ ಮತ್ತು 66.2 ° ಪೂರ್ವ ರೇಖಾಂಶದ ಬಳಿ ರೂಪುಗೊಂಡಿರುವ 'ಹಿಕ್ಕಾ' ಚಂಡಮಾರುತ ಮಾಸಿರಾ (ಒಮಾನ್) ನ ಪೂರ್ವ-ಆಗ್ನೇಯಕ್ಕೆ 760 ಕಿ.ಮೀ ದೂರದಲ್ಲಿ ತೀವ್ರಗೊಂಡಿದೆ. ಇದು ಸೆಪ್ಟೆಂಬರ್ 25 ರ ಹೊತ್ತಿಗೆ ಓಮನ್ ಕರಾವಳಿಯನ್ನು ತಲುಪಲಿದೆ ಎಂದು ಐಎಂಡಿ ಟ್ವೀಟ್ ಮಾಡಿದೆ.

ಈಶಾನ್ಯ ಅರೇಬಿಯನ್ ಸಮುದ್ರದಲ್ಲಿ ಉಂಟಾಗಿರುವ 'ಹಿಕ್ಕಾ' ಚಂಡಮಾರುತದಿಂದಾಗಿ ಸೌರಾಷ್ಟ್ರ ಮತ್ತು ಕಚ್‌ನ ಕರಾವಳಿ ಭಾಗದ ಹಲವೆಡೆ ಸಾಧಾರಣ ಮಳೆಯಾಗಬಹುದು. ಗುಜರಾತ್ ಕರಾವಳಿಯ ಕೆಲವು ಭಾಗಗಳಲ್ಲಿ ಭಾರಿ ಮಳೆ ಆಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ 24 ಗಂಟೆಗಳ ಕಾಲ ಸಮುದ್ರಕ್ಕೆ ಹೋಗದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

Trending News