ನವದೆಹಲಿ: ಪಾಕಿಸ್ತಾನದ ಬಾಲಕೋಟ್ ನ ಉಗ್ರರ ನೆಲೆಯ ಮೇಲೆ ಭಾರತೀಯ ವಾಯುಸೇನೆ ದಾಳಿ ಹತ್ಯೆಯಾಗಿರುವ ಉಗ್ರರ ಸಂಖ್ಯೆ ವಿಚಾರ ಈಗ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಒಂದು ಕಡೆ ಕೇಂದ್ರ ಸಚಿವ ಎಸ್.ಎಸ್. ಅಹ್ಲುವಾಲಿಯಾ ವಾಯುಸೇನೆ ದಾಳಿಯಲ್ಲಿ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಹೇಳಿದ್ದರು ಇದಾದ ಬೆನ್ನಲ್ಲೇ ಅಮಿತ್ ಷಾ ಗುಜಾರಾತಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಸುಮಾರು 250 ಕ್ಕೂ ಅಧಿಕ ಉಗ್ರರು ವಾಯುಸೇನೆಯ ದಾಳಿಯಲ್ಲಿ ಹತ್ಯೆಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಈಗ ಬಾಲಕೋಟ ಉಗ್ರರ ನೆಲೆಯಲ್ಲಿ ಹತ್ಯೆಯಾಗಿರುವ ಉಗ್ರರ ಸಂಖ್ಯೆ ವಿಚಾರವಾಗಿ ಪ್ರತಿಕ್ರಿಯಿಸಿರುವ ವಾಯುಸೇನೆ ಮುಖ್ಯಸ್ಥ ಬಿ ಎಸ್ ಧನೋನಾ " ಭಾರತೀಯ ವಾಯುಸೇನೆಯು ಗಾಯಗೊಂಡವರ ಸಂಖ್ಯೆಯನ್ನು ತಿಳಿಸುವ ಸ್ಥಿತಿಯಲ್ಲಿಲ್ಲ. ಅದನ್ನು ಸರ್ಕಾರ ತಿಳಿಸುತ್ತದೆ, ನಾವು ಮೃತಪಟ್ಟವರ ಸಂಖ್ಯೆಯನ್ನು ಎಣಿಸುವುದಿಲ್ಲ.ನಾವು ಯಾವ ಟಾರ್ಗೆಟ್ ನ್ನು ಮುಟ್ಟಿದ್ದೇವೆ ಅಥವಾ ಇಲ್ಲ ಎನ್ನುವುದನ್ನು ಮಾತ್ರ ಪರಿಗಣಿಸುತ್ತೇವೆ "ಎಂದರು.
Air Chief Marshal BS Dhanoa on air strikes: IAF is not in a postilion to clarify the number of casualties. The government will clarify that. We don't count human casualties, we count what targets we have hit or not. pic.twitter.com/Ji3Z6JqReB
— ANI (@ANI) March 4, 2019
ಅಮಿತ್ ಷಾ ಅಹ್ಮದಾಬಾದ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಉರಿ ನಂತರ, ನಮ್ಮ ಪಡೆಗಳು ಪಾಕಿಸ್ತಾನಕ್ಕೆ ಹೋಗಿ ಸರ್ಜಿಕಲ್ ಸ್ಟ್ರೈಕ್ ಕೈಗೊಂಡು ಸೈನಿಕರ ಸಾವಿಗೆ ಪ್ರತೀಕಾರ ತೆಗೆದುಕೊಂಡರು. ಪುಲ್ವಾಮಾದ ನಂತರ, ಯಾವುದೇ ಸರ್ಜಿಕಲ್ ಸ್ಟ್ರೈಕ್ಗಳಿಲ್ಲ ಎಂದು ಪ್ರತಿಯೊಬ್ಬರೂ ಭಾವಿಸಿದರು, ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದಾಳಿಯ 13 ನೇ ದಿನದ ನಂತರ ಸರಕಾರ ವಾಯುದಾಳಿ ನಡೆಸಿ 250 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ "ಎಂದು ಹೇಳಿದರು.
ಇದಕ್ಕೂ ಮೊದಲು ಕೇಂದ್ರ ಸಚಿವ ಅಹ್ಲುವಾಲಿಯಾ ಮಾತನಾಡುತ್ತಾ "ನಾನು ಭಾರತೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳನ್ನು ಫಾಲೋ ಮಾಡಿದ್ದೇನೆ. ವಾಯು ಪಡೆಗಳ ದಾಳಿ ನಂತರ ಪ್ರಧಾನಿ ಮೋದಿ ಅವರ ಭಾಷಣವನ್ನು ಸಹ ಕೇಳಿದ್ದೇನೆ. ಅವರು ಎಂದಾದರೂ 300 ಉಗ್ರರು ಹತ್ಯೆಯಾಗಿದ್ದಾರೆ ಎಂದು ಹೇಳಿದ್ದಾರಾ? ಬಿಜೆಪಿ ಯಾವುದೇ ವಕ್ತಾರರು ಇದನ್ನು ದೃಢೀಕರಿಸಿದ್ದಾರಾ? ಅಮಿತ್ ಷಾ ರಂತವರು ಅಂತಹ ವಿಷಯ ಹೇಳಿದ್ದಾರಾ? ಅವರ ಬಾಗಿಲಿನಲ್ಲಿ ಬಾಂಬ್ ಹಾಕುವುದರ ಮೂಲಕ ಅವರನ್ನು ನಾಶ ಪಡಿಸುವ ಸಾಮರ್ಥ್ಯವಿರುವ ಸಂದೇಶವೊಂದನ್ನು ಕಳುಹಿಸಲು ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದ್ದರು.
.