ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ದೇಶದಲ್ಲಿ ಈ ಬಾರಿಯ ಫಲಿತಾಂಶವು ವಿಶೇಷವಾಗಿದೆ. ಬಾಲಕಿಯರು ಆರಂಭದ ಟಾಪ್-4 ಶ್ರೇಣಿಯನ್ನು ಆಕ್ರಮಿಸಿಕೊಂಡಿದ್ದು, ದೇಶದೆಲ್ಲೆಡೆ ಸಂತಸ, ಖುಷಿ ವ್ಯಕ್ತವಾಗುತ್ತಿದೆ. ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಇದೊಂದು ಉತ್ತಮ ಪ್ರಯತ್ನ ಎಂದು ಹೇಳಲಾಗುತ್ತಿದೆ. ಇಂತಹ ಸ್ಪೂರ್ತಿದಾಯಕ ಕಥೆಯೆಂದರೆ ಕರ್ನಾಟಕದ ಕುವರಿ ಎಂ.ಅರುಣಾ. ಸಾಲ ತೀರಿಸಲಾಗದೆ ರೈತರಾಗಿದ್ದ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅರುಣಾ ಸ್ವತಃ UPSC ಪರೀಕ್ಷೆಯಲ್ಲಿ 5 ಬಾರಿ ಅನುತ್ತೀರ್ಣರಾಗಿದ್ದರು. ಆದರೆ, ಈ ಬಾರಿ ತಮ್ಮ 6ನೇ ಪ್ರಯತ್ನದಲ್ಲಿ 308ನೇ ರ್ಯಾಂಕ್‌ನೊಂದಿಗೆ ಪ್ರತಿಷ್ಠಿತ ಪರೀಕ್ಷೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಲ ಬಾಧೆ ತಾಳಲಾರದೆ ತಂದೆ ಆತ್ಮಹತ್ಯೆ
ತುಮಕೂರು ಜಿಲ್ಲೆ ಶಿರಾ ತಾಲೂಕಿನ ತಡಕಲೂರಿನ ಎಂ.ಅರುಣಾ ಅವರು ಕರ್ನಾಟಕದ ಹಿಂದುಳಿದ ವರ್ಗಗಳ ಸಮಾಜದಿಂದ ಬಂದವರು. ಇವರ ತಂದೆಗೆ ಅರುಣಾ ಸೇರಿ ಐವರು ಮಕ್ಕಳು. ತಂದೆ ಕೃಷಿಕರಾಗಿದ್ದು, ತಮ್ಮ ಮಕ್ಕಳು ಓದು-ಬರಹದ ಮೂಲಕ ಜೀವನದಲ್ಲಿ ಮುಂದೆ ಸಾಗಬೇಕೆಂಬುದು ಅವರ ಏಕೈಕ ಕನಸಾಗಿತ್ತು. ಇದಕ್ಕಾಗಿ ಬ್ಯಾಂಕಿನಲ್ಲಿ ಸಾಲ ಮಾಡಿ ಮಕ್ಕಳಿಗೆ ಪಾಠ ಮಾಡಿದರು. ಕ್ರಮೇಣ ಸಾಲ ಹೆಚ್ಚುತ್ತಲೇ ಹೋಯಿತು, ಅದನ್ನು ತೀರಿಸಲು ಸಾಧ್ಯವಾಗಲಿಲ್ಲ. ಬ್ಯಾಂಕರ್‌ಗಳ ನಿರಂತರ ದೂಷಣೆ ಮತ್ತು ಮನೆ ಹರಾಜಿನ ಎಚ್ಚರಿಕೆಗೆ ಹೆದರಿ ಅವರು 2009ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಈ ಘಟನೆ ನಡೆದಾಗ ಅರುಣಾ ಇಂಜಿನಿಯರಿಂಗ್ ಓದುತ್ತಿದ್ದರು.
ಇದನ್ನೂ ಓದಿ: ಭಾರತದಲ್ಲಿ 16 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದ ವಾಟ್ಸಪ್
UPSC ಪರೀಕ್ಷೆಯಲ್ಲಿ ಸತತ 5 ಬಾರಿ ಅನುತ್ತೀರ್ಣ
ಈ ಘಟನೆಯು ಅರುಣಾರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿತು. ಅವರು ತಮ್ಮ ತಂದೆಯ ಕನಸುಗಳನ್ನು ನನಸಾಗಿಸಲು ದೃಢ ಮನಸ್ಸು ಮಾಡಿದರು. 2014ರಿಂದ ಪ್ರಾರಂಭಿಸಿ ಸತತವಾಗಿ 5 ಬಾರಿ ಯುಪಿಎಸ್ಸಿ ಪರೀಕ್ಷೆಯನ್ನು ಒಂದರ ನಂತರ ಒಂದರಂತೆ ತೆಗೆದುಕೊಂಡರು. ಆದರೆ, ಪರೀಕ್ಷೆಯುಲ್ಲಿ ಯಶಸ್ಸು ಸಾಧಿಸಲು ಸಾಧ‍್ಯವಾಗಲಿಲ್ಲ. ಕರ್ನಾಟಕ ಸೇರಿದಂತೆ ದೇಶದಾದ್ಯಂತ ಹಿಂದುಳಿದ ವರ್ಗಗಳಿಗೆ ಒಬಿಸಿ ಕೋಟಾ ಅನ್ವಯಿಸುತ್ತದೆ. ಆದರೆ, ಅರುಣಾ UPSC ಪರೀಕ್ಷೆಯಲ್ಲಿ ಮೀಸಲಾತಿ ಬಳಸಿಕೊಳ್ಳದೆ ಕೇವಲ ಅಧ್ಯಯನದಿಂದಲೇ ಸಿದ್ಧತೆ ನಡೆಸಿದ್ದರು.
6ನೇ ಬಾರಿ UPSC ಪರೀಕ್ಷೆಯಲ್ಲಿ ತೇರ್ಗಡೆ
ಅಂತಿಮವಾಗಿ ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಈ ವರ್ಷ ಬಿಡುಗಡೆಯಾದ UPSC ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ. ಇದು ಈ ಬಾರಿ ಅವರ 6ನೇ ಪ್ರಯತ್ನವಾಗಿತ್ತು. ಈ ಪರೀಕ್ಷೆಯಲ್ಲಿ 308ನೇ ರ್ಯಾಂಕ್ ಪಡೆದಿದ್ದು, ಐಪಿಎಸ್ ಕೇಡರ್ ಸಿಗುತ್ತದೆ ಎಂಬ ನಂಬಿಕೆ ಇದೆ. ತಮ್ಮ ತಂದೆಯ ಪರಿಶ್ರಮವೇ ತನ್ನ ಸಾಧನೆಗೆ ಕಾರಣವೆಂದು ಅರುಣಾ ಹೇಳುತ್ತಾರೆ. ಈ ದಿನ ತನ್ನ ತಂದೆ-ತಾಯಿ ಮಾಡಿದ್ದನ್ನು ಯಾರೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಅತ್ಯುತ್ತಮ ಇಂಜಿನಿಯರ್ ಒಸಾಮಾ ಬಿನ್ ಲಾಡೆನ್ ಎಂದು ಕಚೇರಿಯಲ್ಲಿ ಬರೆದುಕೊಂಡಿದ್ದ ನೌಕರ ಸಸ್ಪೆಂಡ್
ಬೆಂಗಳೂರಿನಲ್ಲಿ ಸ್ವಂತ ಕೋಚಿಂಗ್ ಅಕಾಡೆಮಿ
ದೇಶದ ಯಾವ ರೈತನೂ ತನ್ನ ತಂದೆಯಂತೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ ಎನ್ನುತ್ತಾರೆ ಅರುಣಾ. ಇದಕ್ಕಾಗಿ ಕೆಲಸಕ್ಕೆ ಸೇರಿದ ನಂತರ ರೈತರಿಗೆ ಮನವರಿಕೆ ಮಾಡಿ ಹೊಸ ಆರ್ಥಿಕ ಮಾರ್ಗಗಳನ್ನು ಹೇಳುವ ಕೆಲಸ ಮಾಡುತ್ತಾರಂತೆ. ಅವರು ಬೆಂಗಳೂರಿನಲ್ಲಿ ತಮ್ಮ ಹೆಸರಿನಲ್ಲಿ ‘ಅರುಣಾ ಅಕಾಡೆಮಿ’ಯನ್ನು ಪ್ರಾರಂಭಿಸಿದ್ದು, ಇಲ್ಲಿ ಗ್ರಾಮೀಣ ಯುವಕರಿಗೆ UPSC ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಹಕಾರಿಯಾಗುವಂತೆ ತರಬೇತಿ ನೀಡಲಿದ್ದಾರಂತೆ. ಗ್ರಾಮೀಣ ಯುವಕರಿಗೆ ನೆರವಾಗುವುದು ಈ ಅಕಾಡೆಮಿ ತೆರೆಯುವ ಉದ್ದೇಶ ಎಂದು ಅರುಣಾ ಹೇಳಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.