ನವದೆಹಲಿ : ಕೌನ್ಸಿಲ್ ಐಸಿಎಸ್‌ಇ, ಐಎಸ್‌ಸಿ ಮಂಡಳಿಯ ಫಲಿತಾಂಶಗಳನ್ನು ನಾಳೆ ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲು ತೀರ್ಮಾನಿಸಿದೆ. ಸುಮಾರು 3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಮತ್ತು ಅವರ ಐಸಿಎಸ್ಇ, ಐಎಸ್‌ಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ, ಇದು ಜುಲೈ 24 ರ ಶನಿವಾರ ಕೌನ್ಸಿಲ್ನ ಅಧಿಕೃತ ವೆಬ್ ಸೈಟ್ ಗಳಾದ cisce.org ಮತ್ತು results.cisce.org. ಲಭ್ಯವಾಗಲಿದೆ.
ದಿನಾಂಕವನ್ನು ಮಂಡಳಿಯ ಕಾರ್ಯದರ್ಶಿ ಗೆರ್ರಿ ಅರಾಥೂನ್(Gerry Arathoon) ಅವರು ಶುಕ್ರವಾರ ಪ್ರಕಟಿಸಿದ್ದಾರೆ. 10 ನೇ ತರಗತಿ ಮತ್ತು 12 ನೇ ತರಗತಿ ಪರೀಕ್ಷೆಗಳ ಫಲಿತಾಂಶವನ್ನು ಜುಲೈ 24 ರ (ಶನಿವಾರ) ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : Maharashtra Rain: ಮಹಾರಾಷ್ಟ್ರದಲ್ಲಿ ಮುಂದುವರೆದ ವರುಣನ ಆರ್ಭಟ, ಹಲವು ಜಿಲ್ಲೆಗಳು ಜಲಾವೃತ್ತ, ರಕ್ಷಣಾ ಕಾರ್ಯಾಚರಣೆಗಿಳಿದ Army, NDRF
ಐಸಿಎಸ್‌ಇ (10 ನೇ ತರಗತಿ) ಮತ್ತು ಐಎಸ್‌ಸಿ (12 ನೇ ತರಗತಿ) ಫಲಿತಾಂಶ: ಯಾವಾಗ ಪರಿಶೀಲಿಸಬೇಕು?
ಐಸಿಎಸ್‌ಇ (10 ನೇ ತರಗತಿ) ಮತ್ತು ಐಎಸ್‌ಸಿ (12 ನೇ ತರಗತಿ) ಫಲಿತಾಂಶಗಳು(Results) ಜುಲೈ 24 ರ ಶನಿವಾರ ಲಭ್ಯವಾಗಲಿದೆ
ಐಸಿಎಸ್‌ಇ (10 ನೇ ತರಗತಿ) ಮತ್ತು ಐಎಸ್‌ಸಿ (12 ನೇ ತರಗತಿ) ಫಲಿತಾಂಶ: ಎಲ್ಲಿ ಪರಿಶೀಲಿಸಬೇಕು?
ಕೌನ್ಸಿಲ್ ನ ಅಧಿಕೃತ ವೆಬ್‌ಸೈಟ್(Website)ಗಳಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು cisce.org ಮತ್ತು results.cisce.org ನಲ್ಲಿ ಪರಿಶೀಲಿಸಬಹುದು.
ಇದನ್ನೂ ಓದಿ : 7th Pay Commission : ಕೇಂದ್ರ ನೌಕರರ ವೇತನದಲ್ಲಿ ₹23760 ಮತ್ತೆ DA ಯಲ್ಲಿ ₹60,480 ಹೆಚ್ಚಳ! ಇಲ್ಲಿದೆ ನೋಡಿ ಲೆಕ್ಕಾಚಾರ
ಐಸಿಎಸ್‌ಇ (10 ನೇ ತರಗತಿ) ಮತ್ತು ಐಎಸ್‌ಸಿ (12 ನೇ ತರಗತಿ) ಫಲಿತಾಂಶ: ಪರಿಶೀಲಿಸುವುದು ಹೇಗೆ?
* 'Results 2021'' ನೋಡಿ
* unique ID, Index No ಮತ್ತು CAPTCHA ಸೇರಿದಂತೆ ಅಗತ್ಯ ಮಾಹಿತಿಯನ್ನು ನಮೂದಿಸಬೇಕು
* ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, submit ಬಟನ್ ಕ್ಲಿಕ್ ಮಾಡಿ
* ಆಗ ನಿಮ್ಮ ಫಲಿತಾಂಶವನ್ನು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ.
* ಉಪಯೋಗಕ್ಕಾಗಿ ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
ಫಲಿತಾಂಶಗಳನ್ನು ಘೋಷಣೆ ನಂತರ ವಿದ್ಯಾರ್ಥಿಗಳು ಅದನ್ನು ವೆಬ್‌ಸೈಟ್ ಮೂಲಕ ಪರಿಶೀಲಿಸಬಹುದು - cisce.org, ಇದರ ಹೊರತಾಗಿ, ಫಲಿತಾಂಶಗಳು SMS ಮತ್ತು ಅಪ್ಲಿಕೇಶನ್ ಮೂಲಕ ಲಭ್ಯವಿರುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ