Arvind Kejriwal : ಮನೆ ಬಾಗಿಲಿಗೆ ಪಿಜ್ಜಾ, ಬರ್ಗರ್ ಡೆಲಿವರಿ ಮಾಡುವ ಹಾಗೆ ಪಡಿತರ ರೇಷನ್ ಯಾಕಾಗಬಾರದು?

ಇದೇ ಮೊದಲ ಬಾರಿಗೆ ರೇಷನ್​ ಮಾಫಿಯಾದ ಕೈಗೊಂಬೆಯಾಗಿ ಕೇಂದ್ರ ಸರ್ಕಾರ

Last Updated : Jun 6, 2021, 02:54 PM IST
  • ಮನೆ ಬಾಗಿಲಿಗೆ ಪಡಿತರ ತಲುಪಿಸುವುದನ್ನು ತಡೆಹಿಡಿದಿರುವ ಕೇಂದ್ರ ಸರ್ಕಾರ
  • ರಾಷ್ಟ್ರ ರಾಜಧಾನಿಯ 72 ಲಕ್ಷ ಕಾರ್ಡುದಾರರಿಗೆ ಅನುಕೂಲ
  • ಇದೇ ಮೊದಲ ಬಾರಿಗೆ ರೇಷನ್​ ಮಾಫಿಯಾದ ಕೈಗೊಂಬೆಯಾಗಿ ಕೇಂದ್ರ ಸರ್ಕಾರ
Arvind Kejriwal : ಮನೆ ಬಾಗಿಲಿಗೆ ಪಿಜ್ಜಾ, ಬರ್ಗರ್ ಡೆಲಿವರಿ ಮಾಡುವ ಹಾಗೆ ಪಡಿತರ ರೇಷನ್ ಯಾಕಾಗಬಾರದು? title=

ನವದೆಹಲಿ : ಮನೆ ಬಾಗಿಲಿಗೆ ಪಿಜ್ಜಾ-ಬರ್ಗರ್ ಡೆಲಿವರಿ ಮಾಡುತ್ತಿರುವಾಗ ಪಡಿತರ ರೇಷನ್ ಡೆಲಿವರಿ ಯಾಕಾಗಬಾರದು ಎಂದು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಅವರು ಮನೆ ಬಾಗಿಲಿಗೆ ಪಡಿತರ ತಲುಪಿಸುವುದನ್ನು ತಡೆಹಿಡಿದಿರುವ ಕೇಂದ್ರ ಸರ್ಕಾರವನ್ನ  ಪ್ರಶ್ನಿಸಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಕೇಜ್ರಿವಾಲ್(Arvind Kejriwal), ಮನೆ ಬಾಗಿಲಿಗೆ ಪಡಿತರ ತಲುಪಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಎರಡು ದಿನಗಳ ಮುಂಚಿತವಾಗಿಯೇ ಕೇಂದ್ರ ಸರ್ಕಾರ ಯೋಜನೆಯನ್ನು ತಡೆಹಿಡಿದಿದೆ. ರೇಷನ್​ ಮಾಫಿಯಾದ ಪ್ರಭಾವಕ್ಕೆ ಒಳಗಾಗಿ ಬಡವರ ಪರವಾದ ಕ್ರಾಂತಿಕಾರಿ ಯೋಜನೆಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದು​ ಆರೋಪಿಸಿದ್ದಾರೆ.

ಇದನ್ನೂ ಓದಿ : ಮಲೆಯಾಳಂ ಬ್ಯಾನ್..! ಕೆಟ್ಟು ಬುದ್ದಿ ಕಲಿತ ದೆಹಲಿಯ ಆಸ್ಪತ್ರೆ

ಪಿಜ್ಜಾ(Pizza Delivery)ವನ್ನೇ ಮನೆಗೆ ತಲುಪಿಸುತ್ತಿರುವಾಗ ಪಡಿತರ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿರುವ ಕೇಜ್ರಿವಾಲ್​, ಇದೇ ಮೊದಲ ಬಾರಿಗೆ ರೇಷನ್​ ಮಾಫಿಯಾದ ಕೈಗೊಂಬೆಯಾಗಿ ಕೇಂದ್ರ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ. ನೋಡಿ ರೇಷನ್​ ಮಾಫಿಯಾ ಎಷ್ಟು ಪ್ರಭಾವಶಾಲಿಯಾಗಿದೆ. ಯೋಜನೆ ಅನುಷ್ಠಾನಗೊಳ್ಳುವ ಒಂದು ವಾರಕ್ಕೂ ಮುಂಚೆಯೇ ಅದನ್ನು ನಿಲ್ಲಿಸಿದೆ ಎಂದರು.

ಇದನ್ನೂ ಓದಿ : Labour Codes : 'ಈ 4 ಹೊಸ ವೇತನ ಸಂಹಿತೆ'ಯಿಂದ ನೌಕರರ ಸಂಬಳ ಕಡಿಮೆ, PF ಜಾಸ್ತಿ!

ಯೋಜನೆ ಅನುಷ್ಠಾನಗೊಳಿಸಲು ಅನುಮತಿ ತೆಗೆದುಕೊಂಡಿಲ್ಲ ಎಂಬ ಕೇಂದ್ರ ಸರ್ಕಾರ(Central Government)ದ ವಾದವನ್ನು ತಳ್ಳಿ ಹಾಕಿದ್ದಾರೆ. ಒಂದು ಬಾರಿಯಲ್ಲ, ಐದು ಬಾರಿ ಅನುಮತಿಯನ್ನು ಪಡೆದುಕೊಂಡಿದ್ದೇವೆ. ಕಾನೂನಾತ್ಮಕವಾಗಿ ನಮಗೆ ಕೇಂದ್ರ ಅನುಮೋದನೆ ಬೇಕಿಲ್ಲ. ಆದರೂ ಸೌಜನ್ಯದಿಂದ ಅದನ್ನು ಮಾಡಿದ್ದೇವೆಂದು ತಿಳಿಸಿದರು.

ಇದನ್ನೂ ಓದಿ : Driving license link aadhar card online : ಡ್ರೈವಿಂಗ್ ಲೈಸೆನ್ಸ್‍ಗೆ ಆಧಾರ್ ಲಿಂಕ್ ಮಾಡುವುದು ಇನ್ನು ಅನಿವಾರ್ಯ.! ಹೀಗೆ ಮಾಡಿ

ಮನೆ ಬಾಗಿಲಿಗೆ ಪಡಿತರ(Ration) ತಲುಪಿಸುವ ವ್ಯವಸ್ಥೆಯಿಂದ ರಾಷ್ಟ್ರ ರಾಜಧಾನಿಯ 72 ಲಕ್ಷ ಕಾರ್ಡುದಾರರಿಗೆ ಅನುಕೂಲವಾಗಲಿದೆ ಎಂದರು. ಕರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರ ನೆರವಿಗೆ ನಿಲ್ಲದೇ ಕೇಂದ್ರ ಸರ್ಕಾರ ರಾಜಕಾರಣ ಮಾಡಿಕೊಂಡು ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ : Earthquake Hits Jammu and Kashmir : ಕಾಶ್ಮೀರದಲ್ಲಿ ಭೂಕಂಪ , ಹಿಮಾಲಯದ ಮಡಿಲಲ್ಲೇಕೆ ಭೂಮಿ ಕಂಪಿಸುತ್ತಿದೆ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News