IIM, GOOGLE ಹಾಗೂ ಟಾಪ್ ವಿಶ್ವವಿದ್ಯಾಲಯಗಳ ಉಚಿತ ಆನ್ಲೈನ್ ಕೋರ್ಸ್ ಗಳ ಮೂಲಕ ನಿಮ್ಮ ವೃತ್ತಿಜೀವನಕ್ಕೆ ನೀಡಿ ಮೆರಗು

ಕೊರೊನಾ ಕಾಲದಲ್ಲಿ ಏನಾದರು ಹೆಚ್ಚಿನ ಅಗತ್ಯತೆ ಇದೆ ಎಂದರೆ ಅದು ಕೌಶಲ್ಯಾಭಿವೃದ್ಧಿ. ಪ್ರಸ್ತುತ ಸಮಯದಲ್ಲಿ ಉದ್ಯೋಗಗಳು ಮತ್ತು ಆಯ್ಕೆಗಳು ಸೀಮಿತವಾಗಿವೆ ಎಂದು ತೋರುತ್ತಿದ್ದರೂ ಕೂಡ, ನಿಮಗೆ ಅಗತ್ಯವಾದ ಅರ್ಹತೆಗಳಿದ್ದರೆ ಅವಕಾಶಗಳ ಕೊರತೆಯಿಲ್ಲ.

Updated: Jun 30, 2020 , 02:23 PM IST
IIM, GOOGLE ಹಾಗೂ ಟಾಪ್ ವಿಶ್ವವಿದ್ಯಾಲಯಗಳ ಉಚಿತ ಆನ್ಲೈನ್ ಕೋರ್ಸ್ ಗಳ ಮೂಲಕ ನಿಮ್ಮ ವೃತ್ತಿಜೀವನಕ್ಕೆ ನೀಡಿ ಮೆರಗು

ನವದೆಹಲಿ: ಕೊರೊನಾ ಕಾಲದಲ್ಲಿ ಏನಾದರು ಹೆಚ್ಚಿನ ಅಗತ್ಯತೆ ಇದೆ ಎಂದರೆ ಅದು ಕೌಶಲ್ಯಾಭಿವೃದ್ಧಿ. ಪ್ರಸ್ತುತ ಸಮಯದಲ್ಲಿ ಉದ್ಯೋಗಗಳು ಮತ್ತು ಆಯ್ಕೆಗಳು ಸೀಮಿತವಾಗಿವೆ ಎಂದು ತೋರುತ್ತಿದ್ದರೂ ಕೂಡ, ನಿಮಗೆ ಅಗತ್ಯವಾದ ಅರ್ಹತೆಗಳಿದ್ದರೆ ಅವಕಾಶಗಳ ಕೊರತೆಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನೀವ್ವು ನಿಮ್ಮ ಮನೆಯಲ್ಲಿಯೇ ಕುಳಿತು ನಿಮ್ಮ ಆಸಕ್ತಿಗೆ ಸಂಬಂಧಿಸಿದ ಕೋರ್ಸ್ ಮಾಡುವ ಮೂಲಕ ನಿಮ್ಮ ಅರ್ಹತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು. ಇಲ್ಲಿ ವಿಶೇಷ ಎಂದರೆ ಐಐಎಂ, ಗೂಗಲ್, ಕ್ವೆಸೆರಾ ಗಳಂತಹ ಸಂಸ್ಥೆಗಳು ಹಾಗೂ ಸಂಘಟನೆಗಳು ಹಲವು ಕೋರ್ಸ್ ಗಳನ್ನು ಉಚಿತವಾಗಿ ನೀಡುತ್ತಿವೆ. ಹಾಗಾದರೆ ಬನ್ನಿ ಇಂತಹುದೇ ಕೆಲ ಕೋರ್ಸ್ ಗಳ ಬಗ್ಗೆ ಅರಿಯೋಣ,

ಕಾರ್ಪೋರೆಟ್ ಫೈನಾನ್ಸ್ 
ಈ ಕೋರ್ಸ್ ನಲ್ಲಿ ನೀವು ಸಂಸ್ಥೆಯೊಂದರ ಕಾರ್ಪೋರೆಟ್ ಫೈನಾಸ್ ಬಗ್ಗೆ ತರಬೇತಿ ಪಡೆಯಬಹುದು. ಹಣಕಾಸು ಸಂಸ್ಥೆಯಲ್ಲಿ ನೀವು ಹಣಕಾಸು ಮಾರುಕಟ್ಟೆ ಮತ್ತು ಫಂಡ್ ಗಾಗಿ ವೈಯಕ್ತಿಕ ಅಗತ್ಯಗಳ ಬಗ್ಗೆ ಕಲಿಯಬಹುದು. ಪೇ-ಬ್ಯಾಕ್ ಅವಧಿ, ಆಂತರಿಕ ಲಾಭದ ದರ ಮತ್ತು ನಿವ್ವಳ ಪ್ರಸ್ತುತ ಮೌಲ್ಯ ಮುಂತಾದ ಬಂಡವಾಳ ಬಜೆಟ್ ಸಾಧನಗಳ ಬಗ್ಗೆ ನಿಮಗೆ ಇದರಲ್ಲಿ ಈ ಕೋರ್ಸ್ನಲ್ಲಿ ತರಬೇತಿ ನೀಡಲಾಗುತ್ತದೆ. ಈ ಕೋರ್ಸ್ ಅವಧಿ ಐದು ವಾರಗಳದ್ದಾಗಿರುತ್ತದೆ.

ಅಕೌಂಟಿಂಗ್ ಹಾಗೂ ಫೈನಾನ್ಸ್
ಈ ಕೋರ್ಸ್ ನಲ್ಲಿ ಫೈನಾನ್ಸಿಯಲ್ ಸ್ಟೇಟ್ಮೆಂಟ್ ಎನಾಲಿಸ್ಟ್ಸ್, ಕಾಸ್ಟ್ ಮ್ಯಾನೇಜ್ಮೆಂಟ್ ಹಾಗೂ ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಇತ್ಯಾದಿಗಳ ಬಗ್ಗೆ ತರಬೇತಿ ಪಡೆಯಬಹುದು. ಫೈನಾನ್ಸಿಯಲ್ ಸ್ಟೇಟ್ಮೆಂಟ್ ಅರಿಯುವುದು, ಬಿಸಿನೆಸ್ ಪರ್ಫಾರ್ಮೆನ್ಸ್ ತಿಳಿಯುವುದು, ಟ್ಯಾಕ್ಸ್ ಮ್ಯಾನೇಜ್ಮೆಂಟ್, ಲೆವರೆಜ್ ಮ್ಯಾನೇಜ್ಮೆಂಟ್ ಇತ್ಯಾದಿಗಳನ್ನು ತಿಳಿದುಕೊಳ್ಳಲು ಸಹಾಯಕಾರಿಯಾಗಿದೆ. ಈ ಕೋರ್ಸ್ ಅವಧಿ 12 ವಾರಗಳದ್ದಾಗಿರುತ್ತದೆ ಹಾಗೂ ಇದನ್ನು ನೀವು ಉಚಿತವಾಗಿ ಕಲಿಯಬಹುದು.

ಕಸ್ಟಮರ್ ರಿಲೇಶನ್ ಶಿಪ್ ಮ್ಯಾನೇಜ್ಮೆಂಟ್ 
ಕಸ್ಟಮರ್ ರಿಲೇಶನ್ ಶಿಪ್ ಮ್ಯಾನೇಜ್ಮೆಂಟ್ ವ್ಯವಹಾರ ತಂತ್ರಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು, ಹೊಸ ವಿಧಾನಗಳು ಮತ್ತು ತಂತ್ರಗಳನ್ನು ಅಳವಡಿಸಿಕೊಳ್ಳುವುದು ಮತ್ತು ಗ್ರಾಹಕರ ಲಾಭದಾಯಕತೆ ಇತ್ಯಾದಿಗಳ ಬಗ್ಗೆ ಕಲಿಸುತ್ತದೆ. ಈ ಪಠ್ಯದಲ್ಲಿ ಸಿಆರ್‌ಎಂನ ಉತ್ತಮ ಅಭ್ಯಾಸಗಳನ್ನು ಅನುಷ್ಠಾನಗೊಳಿಸುವುದು, ಸಿಆರ್‌ಎಂನ ಲಾಭ ಪಡೆಯಲು ಗ್ರಾಹಕ, ಕಂಪನಿ ಮತ್ತು ಗ್ರಾಹಕರೊಂದಿಗೆ ದೀರ್ಘಾವಧಿಯ ಗ್ರಾಹಕ ಸಂಬಂಧವನ್ನು ಬೆಳೆಸುವ ಬಗ್ಗೆ ನಿಮಗೆ ಹೇಳಿಕೊಡುತ್ತದೆ.

ಪೀಪಲ್ ಮ್ಯಾನೇಜ್ಮೆಂಟ್
ಈ ಕೋರ್ಸ್‌ನಲ್ಲಿ, ಉದ್ಯೋಗಿಗಳನ್ನು ನಿರ್ವಹಿಸುವುದು, ಸಂಭಾವ್ಯ ಮೌಲ್ಯಮಾಪನಗಳನ್ನು ಮಾಡುವುದು, ವರದಿ ಮಾಡುವ ಜನರನ್ನು ಪ್ರೋತ್ಸಾಹಿಸುವುದು ಇತ್ಯಾದಿಗಳ ಬಗ್ಗೆ ನೀವು ಕಲಿಯಲು ಸಾಧ್ಯವಾಗುತ್ತದೆ. ಈ ಕೋರ್ಸ್ ಆರು ವಾರಗಳಿರುತ್ತದೆ. ಕೋರ್ಸ್ ಮೂಲಕ, ಸಂಸ್ಥೆಯಲ್ಲಿ ಉದ್ಯೋಗಿಗಳ ನಿರ್ವಹಣೆಯ ಪಾತ್ರವನ್ನು ನಿರ್ವಹಿಸಲು ನೀವು ಸಕ್ಷಮರಗಿದ್ದೀರಿ ಎಂದು ಸಾಬೀತುಪಡಿಸಬಹುದು.

ಆಪರೇಶನ್ ಮ್ಯಾನೇಜ್ಮೆಂಟ್ 
ಈ ಕೋರ್ಸ್ ಮೂಲಕ, ನೀವು ವ್ಯವಹಾರ ಕಾರ್ಯಾಚರಣೆ ಮತ್ತು ನೇರ ನಿರ್ವಹಣೆಯನ್ನು ಕಲಿಯುವಿರಿ. ಇದರಲ್ಲಿ, ಸಾಮರ್ಥ್ಯ, ಉತ್ಪಾದಕತೆ, ಗುಣಮಟ್ಟ ಮತ್ತು ಪೂರೈಕೆ ಸರಪಳಿ ಇತ್ಯಾದಿಗಳ ಬಗ್ಗೆ ನಿಮಗೆ ತಿಳಿಯಲು ಸಾಧ್ಯವಾಗುತ್ತದೆ. ಪೂರೈಕೆ ಸರಪಳಿಯಲ್ಲಿನ ಬ್ಲೂವಿಪ್ ಪರಿಣಾಮವನ್ನು ಕಡಿಮೆ ಮಾಡುವುದು, ಪೂರೈಕೆ ಸರಪಳಿಯ ವಿಭಿನ್ನ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಇತ್ಯಾದಿಗಳ ಬಗ್ಗೆ ನೀವು ಆಳವಾದ ಜ್ಞಾನವನ್ನು ಪಡೆಯಬಹುದು.

ಇಫೆಕ್ಟಿವ್ ಬುಸಿನೆಸ್ ಕಮ್ಯೂನಿಕೇಶನ್ 
ಈ ಪಠ್ಯದಲ್ಲಿ ಸಂವಹನ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದು ಏಕೆ ಮುಖ್ಯವಾಗಿದೆ ಎಂಬುದನ್ನು ನೀವು ಕಲಿಯಬಹುದು. ಈ ಪಠ್ಯದಲ್ಲಿ ನೀವು ಸವಾಲುಗಳು, ಅಡೆತಡೆಗಳು, ವ್ಯವಹಾರ ಸಂವಹನದ ಚೌಕಟ್ಟು, ವೃತ್ತಿಪರ ನೆಲೆಯಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು, ಅತ್ಯುತ್ತಮ ಬರವಣಿಗೆಯ ತಂತ್ರಗಳು ಮತ್ತು ವೃತ್ತಿಪರ ವ್ಯವಹಾರ ದಾಖಲಾತಿಗಳ ಬಗ್ಗೆ ಕಲಿಯಬಹುದು.

ಗೂಗಲ್ ಕೋರ್ಸ್ ಗಳು
ಕನೆಕ್ಟ್ ವಿಥ್ ಕಸ್ಟಮರ್ ಓವರ್ ಮೊಬೈಲ್ 
ಈ ಉಚಿತ ಕೋರ್ಸ್ ಅನ್ನು ಗೂಗಲ್ ಒದಗಿಸುತ್ತಿದೆ. ಈ ಪಠ್ಯದಲ್ಲಿ ನಿಮ್ಮ ಡಿಜಿಟಲ್ ಉಪಸ್ಥಿತಿಯನ್ನು ಹೇಗೆ ಬೆಳೆಸಬೇಕು ಎಂಬುದನ್ನು ಹೇಳಿಕೊಡಲಾಗುತ್ತದೆ. ಜೊತೆಗೆ ಮೊಬೈಲ್ ಮೂಲಕ ಹೊಸ ಗ್ರಾಹಕರನ್ನು ಹೇಗೆ ತಲುಪುವುದು ಹೇಳಿಕೊಡಲಾಗುತ್ತದೆ. ಈ ಕೋರ್ಸ್ ಒಂದು ಆರಂಭಿಕ ಮಟ್ಟದ ಕೋರ್ಸ್ ಆಗಿದೆ ಮತ್ತು ಎರಡು ಮಾಡ್ಯೂಲ್‌ಗಳನ್ನು ಹೊಂದಿದೆ. ಇದು ಒಟ್ಟು ಎರಡು ಗಂಟೆಗಳ ಕೋರ್ಸ್ ಆಗಿದೆ.

ಇನ್ಫ್ಳುಯೆನ್ಸಿಂಗ್ ಪೀಪಲ್ 
ಈ ಕೋರ್ಸ್ ಅನ್ನು ಮಿಚಿಗನ್ ವಿಶ್ವವಿದ್ಯಾಲಯ ವಿನ್ಯಾಸಗೊಳಿಸಿದೆ. ಇದರಲ್ಲಿ, ಭಾಷಣ ಶೈಲಿ ಮತ್ತು ವ್ಯಕ್ತಿತ್ವದಿಂದ ಜನರು ಹೇಗೆ ಪ್ರಭಾವಿತರಾಗಬಹುದು ಎಂಬುದರ ಬಗ್ಗೆ ಕಲಿಸಲಾಗುತ್ತದೆ. ಉತ್ತಮ ಭಾಷಣಕಾರ ಮತ್ತು ನಾಯಕನಾಗಲು ಇದು ನಿಮಗೆ ಸಹಾಯ ಮಾಡುತ್ತದೆ. ಇದಲ್ಲದೆ, ವ್ಯವಹಾರದ ಕಲ್ಪನೆಯನ್ನು ಉಳಿಸಿಕೊಳ್ಳಲು, ಮಧ್ಯಸ್ಥಗಾರರೊಂದಿಗೆ ಹೊಂದಾಣಿಕೆ ಮಾಡಲು ಸಹ ಇದು ಸಹಾಯ ಮಾಡುತ್ತದೆ.

ಇಂಗ್ಲಿಷ್ ಫಾರ್ ಕರೀಯರ್ ಡೆವಲಪ್ಮೆಂಟ್
ಈ ಕೋರ್ಸ್ ಅನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯವು ವಿನ್ಯಾಸಗೊಳಿಸಿದೆ. ಇಂಗ್ಲಿಷ್ ಬಗ್ಗೆ ಹೆಚ್ಚು ಗೊತ್ತಿಲ್ಲದವರನ್ನು ಗಮನದಲ್ಲಿಟ್ಟುಕೊಂಡು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್ ವೃತ್ತಿಪರ ರೆಸ್ಯೂಮ್ ತಯಾರಿಕೆ, ಕವರ್ ಲೆಟರ್ಸ್, ನೆಟ್‌ವರ್ಕಿಂಗ್ ಮತ್ತು ಸಂದರ್ಶನ ಕೌಶಲ್ಯಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

ಸೋಸಿಯಲ್ ಸೈಕಾಲಾಜಿ
ವೆಸ್ಲಿಯನ್ ವಿಶ್ವವಿದ್ಯಾಲಯವತಿಯಿಂದ ನಡೆಸಲಾಗುತ್ತಿರುವ ಮತ್ತು ವಿವಿಧ ಕೋರ್ಸ್ ಗಳ ಮಾದರಿಯಲ್ಲಿ ಇದರಲ್ಲಿಯೂ ಕೂಡ ನೀವು ಪ್ರಮಾಣಪತ್ರ ಪಡೆಯಬಹುದು. ಇದರಲ್ಲಿ, ಸಾಮಾಜಿಕ ಮನೋವಿಜ್ಞಾನದ ಕೆಲವು ಸಂಶೋಧನೆಗಳ ಬಗ್ಗೆ ನಿಮಗೆ ತಿಳಿಸಲಾಗುವುದು. ಇದರಲ್ಲಿ, ಗುಂಪು ನಡವಳಿಕೆ, ವೈಯಕ್ತಿಕ ಆಕರ್ಷಣೆ, ಯಾರನ್ನಾದರೂ ತಿಳಿದುಕೊಳ್ಳುವುದು ಇತ್ಯಾದಿಗಳನ್ನು ಹೇಳಿಕೊಡಲಾಗುತ್ತದೆ. ಈ ಕೋರ್ಸ್ ಇನ್ನೂ ಬೇಸಿಕ್ ಮಟ್ಟದಲ್ಲಿದೆ.

ಪ್ರಮೋಟ್ ಎ ಬಿಸಿನೆಸ್ ವಿಥ್ ಕಂಟೆಂಟ್
ಗೂಗಲ್‌ನಲ್ಲಿನ ಈ ಕೋರ್ಸ್ ಮೂಲಕ, ನೀವು ಸಾರ್ವಜನಿಕರ ಗಮನಕ್ಕೆ ಬರಬಹುದು. ಈ ಪಠ್ಯದಲ್ಲಿ ಸಾಮಾಜಿಕ ಮಾಧ್ಯಮ, ವಿಡಿಯೋ ಮತ್ತು ಸಬ್ಜೆಕ್ಟ್ ಮಾರ್ಕೆಟಿಂಗ್ ಅನ್ನು ಹೇಗೆ ಉತ್ತಮವಾಗಿ ಬಳಸಿಕೊಳ್ಳಬೇಕೆಂದು ನಿಮಗೆ ಕಲಿಸಲಾಗುತ್ತದೆ. ಕೋರ್ಸ್‌ನಲ್ಲಿ, ನಿಮಗೆ ಸಾಮಾಜಿಕ ಮಾಧ್ಯಮ ಮೂಲಗಳು, ದೀರ್ಘಾವಧಿಯ ಸಾಮಾಜಿಕ ಮಾಧ್ಯಮ ಯೋಜನೆ, ಆನ್‌ಲೈನ್ ವೀಡಿಯೊದ ರೈಜ್, ವೀಡಿಯೊ ಕಾರ್ಯಕ್ಷಮತೆಯ ಮೌಲ್ಯಮಾಪನ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು.

ಇಂಟ್ರೊಡಕ್ಷನ್ ಟು ಸೈಬರ್ ಸೆಕ್ಯೂರಿಟಿ 
ಈ ಕೋರ್ಸ್ ಒಟ್ಟು 7 ಮಾಡ್ಯೂಲ್‌ಗಳನ್ನು ಹೊಂದಿದೆ. ಈ ಪಠ್ಯದಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಮೂಲಭೂತ ಮಾಹಿತಿ ನೀಡಲಾಗುತ್ತದೆ. ಇದರಲ್ಲಿ, ಹ್ಯಾಂಡಲ್ ರೂಟಿಂಗ್, ಡಿಎನ್ಎಸ್, ಲೋಡ್ ಬ್ಯಾಲೆನ್ಸಿಂಗ್ ಇತ್ಯಾದಿಗಳನ್ನು ಹೇಳಿಕೊಡಲಾಗುತ್ತದೆ. ನೀವು ಲೈನಕ್ಸ್ ಆಪರೇಟಿಂಗ್ ಸಿಸ್ಟಮ್ ಮತ್ತು ಎಪಿಐ ಇತ್ಯಾದಿಗಳ ಬಗ್ಗೆ ಇದರಲ್ಲಿ ತಿಳಿದುಕೊಳ್ಳಬಹುದು.