ಇಮ್ರಾನ್ ಖಾನ್ ನನ್ನ ಸ್ನೇಹಿತ, ಅಗತ್ಯ ಬಿದ್ದಲ್ಲಿ ಅವರ ಜೊತೆ ಮಾತನಾಡುವೆ- ಮೂನ್ ಮೂನ್ ಸೇನ್

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹಳಸಿರುವ ಬೆನ್ನಲ್ಲೇ ಈಗ ಅಗತ್ಯಬಿದ್ದಲ್ಲಿ ತಮ್ಮ ಹಳೆಯ ಸ್ನೇಹಿತ ಇಮ್ರಾನ್ ಖಾನ್ ಅವರ ಜೊತೆ ಮಾತನಾಡುವೆ ಎಂದು ನಟಿ -ರಾಜಕಾರಣಿ ಮೂನ್ ಮೂನ್ ಸೇನ್ ಹೇಳಿದ್ದಾರೆ.

Updated: Apr 25, 2019 , 06:58 PM IST
ಇಮ್ರಾನ್ ಖಾನ್ ನನ್ನ ಸ್ನೇಹಿತ, ಅಗತ್ಯ ಬಿದ್ದಲ್ಲಿ ಅವರ ಜೊತೆ ಮಾತನಾಡುವೆ- ಮೂನ್ ಮೂನ್ ಸೇನ್

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹಳಸಿರುವ ಬೆನ್ನಲ್ಲೇ ಈಗ ಅಗತ್ಯಬಿದ್ದಲ್ಲಿ ತಮ್ಮ ಹಳೆಯ ಸ್ನೇಹಿತ ಇಮ್ರಾನ್ ಖಾನ್ ಅವರ ಜೊತೆ ಮಾತನಾಡುವೆ ಎಂದು ನಟಿ -ರಾಜಕಾರಣಿ ಮೂನ್ ಮೂನ್ ಸೇನ್ ಹೇಳಿದ್ದಾರೆ.

ಈ ಕುರಿತಾಗಿ ಪಿಟಿಐ ಸುದ್ದಿ ಸಂಸ್ಥೆಗೆ ನೀಡಿರುವ  ಹೇಳಿಕೆಯಲ್ಲಿ ಮೂನ್ ಮೂನ್ ಸೇನ್ "ಇಮ್ರಾನ್ ನನ್ನ ಸ್ನೇಹಿತ. ಆದರೆ ವಿಭಜನೆಯ ರಾಜಕೀಯ (ಪಾಕಿಸ್ತಾನದ ಬಗ್ಗೆ ರಾಷ್ಟ್ರೀಯತೆಯ ಮೇಲೆ) ನಡೆಯುತ್ತಿದೆ, ಇದು ತುಂಬಾ ಅಪಾಯಕಾರಿ "ಎಂದು ಸೇನ್ ಪಿಟಿಐ ಹೇಳಿದ್ದಾರೆ. ಎರಡು ದೇಶಗಳ ನಡುವೆ ಉದ್ವಿಗ್ನತೆ ನಡುವೆಯೂ ತಾವು ಬಯಸಿದರೆ ಅವರೊಂದಿಗೆ ಮಾತನಾಡುತ್ತಿರಾ ಎಂದು ಕೇಳಿದಾಗ,ಯಾಕಿಲ್ಲ? ಅವರು ಸ್ನೇಹಿತ. "ಎಂದು ಉತ್ತರಿಸಿದರು. 

ಒಂದು ವೇಳೆ ಸಂದರ್ಭ ಬಂದಲ್ಲಿ ಸರ್ಕಾರದ ಪರವಾಗಿ ಮಧ್ಯಸ್ಥಿಕೆ ವಹಿಸುತ್ತಿರಾ ಎಂದು ಕೇಳಿದಾಗ ಉತ್ತರಿಸಿದ ಮೂನ್ ಮೂನ್ ಸೇನ್ "ನಾನಾಗಿಯೇ ಎಂದಿಗೂ ಹೋಗುವುದಿಲ್ಲ, ನನಗೆ ಆ ರೀತಿ ಮಾಡಲು ಹೇಳುವುದಿಲ್ಲ ಎನ್ನುವ ನಂಬಿಕೆ ಇದೆ. ಹಲವು ಚುರಾಕಾದ ರಾಜಕಾರಣಿಗಳಿದ್ದಾರೆ. ಮಮತಾ ಬ್ಯಾನರ್ಜಿ ತುಂಬಾ ಚುರುಕಾದ ರಾಜಕಾರಣಿ. ಇಮ್ರಾನ್ನೊಂದಿಗೆ ಅವರು ನನ್ನ ಸ್ನೇಹವನ್ನು ಎಂದಿಗೂ ಬಳಸಿಕೊಳ್ಳುವುದಿಲ್ಲ. ಅವರು ಕೋಲ್ಕತ್ತಾದಲ್ಲಿ ಬಹಳಷ್ಟು ಸ್ನೇಹಿತರನ್ನು ಹೊಂದಿದ್ದಾರೆ, ನನ್ನ ಪತಿ ಕೂಡ ಅವನ ಸ್ನೇಹಿತ, ನಾನು ಒಬ್ಬನೇ ಅಲ್ಲ, " ಎಂದು ಅವರು ಹೇಳಿದರು. 

ಮೂನ್ ಮೂನ್ ಸೇನ್ ಹಾಗೂ ಇಮ್ರಾನ್ ಖಾನ್ ಗೆಳೆತನ 80 ಮತ್ತು 90 ರ ದಶಕದಲ್ಲಿ ಹೆಚ್ಚು ಗಾಸಿಪ್ ಗಳಿಗೆ ಕಾರಣವಾಗಿತ್ತು. ಹಲವು ನಿಯತಕಾಲಿಕೆಗಳು ನಿರಂತರವಾಗಿ ಈ ಕುರಿತಾಗಿ ಬರೆದಿದ್ದವು.