ದೆಹಲಿ ಹಿಂಸಾಚಾರದ ಮೊದಲ 2 ದಿನಗಳಲ್ಲಿ ಪೊಲೀಸರಿಗೆ ಬಂದ ಕರೆಗಳೆಷ್ಟು?

ಫೆಬ್ರವರಿ 23 ರಂದು ದೆಹಲಿಯ ಈಶಾನ್ಯ ಪ್ರದೇಶದಿಂದ ಸುಮಾರು 700 ಪಿಸಿಆರ್ ಕರೆಗಳು ಬಂದಿವೆ ಎಂದು ಡಿಸಿಪಿ ಶರದ್ ಸಿನ್ಹಾ ತಿಳಿಸಿದ್ದಾರೆ.

Last Updated : Feb 28, 2020, 09:09 AM IST
ದೆಹಲಿ ಹಿಂಸಾಚಾರದ ಮೊದಲ 2 ದಿನಗಳಲ್ಲಿ ಪೊಲೀಸರಿಗೆ ಬಂದ ಕರೆಗಳೆಷ್ಟು? title=

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಈಶಾನ್ಯ ಭಾಗದಲ್ಲಿ ಈ ವಾರದ ಆರಂಭದಲ್ಲಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಭುಗಿಲೆದ್ದ ಹಿಂಸಾಚಾರದ ದಿನವಾದ ಫೆಬ್ರವರಿ 24 ಮತ್ತು 25 ರಂದು ಈ ಪ್ರದೇಶಗಳಿಂದ ಅತಿ ಹೆಚ್ಚು ಕರೆಗಳು ಬಂದಿವೆ ಎಂದು ದೆಹಲಿ ಪೊಲೀಸರ ಪಿಸಿಆರ್ ಘಟಕದ ಡಿಸಿಪಿ ಗುರುವಾರ ತಿಳಿಸಿದೆ.

ಫೆಬ್ರವರಿ 23 ರಂದು ಈಶಾನ್ಯ ಜಿಲ್ಲೆಯಿಂದ ಸುಮಾರು 700 ಪಿಸಿಆರ್ ಕರೆಗಳು ಬಂದಿವೆ ಎಂದು ಡಿಸಿಪಿ ಶರದ್ ಸಿನ್ಹಾ ತಿಳಿಸಿದ್ದಾರೆ. ಗಲಭೆಯ ದಿನವಾದ (ದೆಹಲಿ ಹಿಂಸಾಚಾರ) ಫೆಬ್ರವರಿ 24 ರಂದು 3500 ಪಿಸಿಆರ್ ಕರೆಗಳು ಬಂದಿದ್ದರೆ, ಫೆಬ್ರವರಿ 25 ರಂದು ಈ ಸಂಖ್ಯೆ 7500 ಕ್ಕೆ ಏರಿದೆ. ಈ ಎಲ್ಲಾ ಕರೆಗಳು ಈಶಾನ್ಯ ಪ್ರದೇಶದಿಂದ ಬಂದವೆ ಎನ್ನಲಾಗಿದೆ.

ಫೆಬ್ರವರಿ 26 ರಂದು ನಡೆದ ಗಲಭೆಯ ಮರುದಿನ ಸುಮಾರು 1500 ಜನರು ಪಿಸಿಆರ್‌ಗೆ ಕರೆ ಮಾಡಿದ್ದಾರೆ ಎಂದು ಅವರು ಹೇಳಿದರು. ಪೌರತ್ವ ಕಾಯ್ದೆ (ಸಿಎಎ) ಯಿಂದಾಗಿ ದೆಹಲಿಯ ಅನೇಕ ಪ್ರದೇಶಗಳಲ್ಲಿನ ಜನರ ಜೀವನ ಅಸ್ಥವ್ಯಸ್ಥವಾಗಿವೆ. ಸಾವಿರಾರು ಜನರು ಬೀದಿಗಿಳಿದು ಕಲ್ಲು ತೂರಾಟ ನಡೆಸಿದ್ದು, ಹಲವೆಡೆ ಅಗ್ನಿ ಸ್ಪರ್ಶದಂತಹ ಘಟನೆಗಳೂ ನಡೆದಿವೆ. ದೆಹಲಿಯ ಈಶಾನ್ಯ ಪ್ರದೇಶದಲ್ಲಿ ಗರಿಷ್ಠ ಹಿಂಸಾಚಾರ ನಡೆದಿದೆ.

Trending News