ನವದೆಹಲಿ: ಒಂದು ವೇಳೆ ಮತ್ತೊಮ್ಮೆ ಕಾರ್ಗಿಲ್ ಯುದ್ಧ ನಡೆಯುವುದೇ ಆದಲ್ಲಿ ಭಾರತದ ಪಡೆಗಳು ಸಕಲ ಸಿದ್ಧವಾಗಿವೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಬಿ.ಎಸ್. ಧನೋವಾ ಮಂಗಳವಾರ ಹೇಳಿದ್ದಾರೆ.
Indian Air Force Chief BS Dhanoa on the 20th anniversary of Kargil War: Like all good Generals, we are prepared to fight the last war. If Kargil comes again, we are very well prepared. pic.twitter.com/EBVNmFB3YO
— ANI (@ANI) July 16, 2019
ಕಾರ್ಗಿಲ್ ಯುದ್ಧದ 20 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಏರ್ ಚೀಫ್ ಮಾರ್ಷಲ್ ಧನೋವಾ, ಅಗತ್ಯವಿದ್ದರೆ, ಸ್ಟ್ಯಾಂಡ್‌ಆಫ್ ದೂರದಿಂದ ಯುದ್ಧ ನಡೆಸಲು ಐಎಎಫ್ ಸಮರ್ಥವಾಗಿದೆ ಎಂದು ಅವರು ಹೇಳಿದರು.
"ಅಗತ್ಯವಿದ್ದಲ್ಲಿ, ನಾವು ಎಲ್ಲಾ ಹವಾಮಾನದಲ್ಲಿಯೂ, ಮೋಡಗಳನ್ನು ಭೇದಿಸಿ ನಿಖರವಾಗಿ ಬಾಂಬ್ ದಾಳಿ ಮಾಡಲು ಸಮರ್ಥರಾಗಿದ್ದೇವೆ. ಫೆಬ್ರವರಿ 26 ರಂದು ನಡೆಸಿದ ಬಾಲಕೋಟ್ ವಾಯುದಾಳಿಯಲ್ಲಿಯೂ ನಾವು ಸ್ಟ್ಯಾಂಡ್‌ಆಫ್ ದೂರದಿಂದ ಮತ್ತು ಅತ್ಯಂತ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದೇವೆ" ಎಂದು ಅವರು ಹೇಳಿದರು.