ಮೂರ್ನಾಲ್ಕು ಪಾಕ್ ಸೈನಿಕರನ್ನು ಸದೆಬಡೆದ ಭಾರತೀಯ ಸೇನೆ

ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಸೇನೆಯ ಅನೇಕ ಶಿಬಿರಗಳು ನಾಶವಾದವು. ಇದಲ್ಲದೆ ಭಾರತೀಯ ಸೇನೆಯ ಕಾರ್ಯಾಚರಣೆ ವೇಳೆ 3-4 ಪಾಕಿಸ್ತಾನಿ ಸೈನಿಕರು ಸಹ ಸಾವನ್ನಪ್ಪಿದ್ದಾರೆ.

Last Updated : Dec 27, 2019, 04:43 PM IST
ಮೂರ್ನಾಲ್ಕು ಪಾಕ್ ಸೈನಿಕರನ್ನು ಸದೆಬಡೆದ ಭಾರತೀಯ ಸೇನೆ title=

ನವದೆಹಲಿ: ಭಾರತದ ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇದೆ. ಭಾರತೀಯ ಸೇನೆ ಕೂಡ ಇದಕ್ಕೆ ತಕ್ಕ ಉತ್ತರ ನೀಡುತ್ತಲೇ ಬಂದಿದೆ. ಕಳೆದ ರಾತ್ರಿಯಿಂದ ಕೂಡ ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ್ದು, ಶೆಲ್ ದಾಳಿ ನಡೆಸಿದೆ. ಇದಕ್ಕೆ ಸೂಕ್ತ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆ 3-4 ರೇಂಜರ್ಸ್ ಅನ್ನು ಸದೆಬಡೆದಿದೆ ಎನ್ನಲಾಗಿದೆ.

ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ ಸೇನೆ ಕಳೆದ ರಾತ್ರಿ, ಟೈಲ್ಸ್-ರಾಜೌರಿ ಸೆಕ್ಟರ್‌ನಲ್ಲಿ ಭಾರತೀಯ ಸೇನೆ ಮೇಲೆ ತೀವ್ರ ಶೆಲ್ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಈ ಪ್ರತೀಕಾರದಲ್ಲಿ ಪಾಕಿಸ್ತಾನ ಸೇನೆಯ ಅನೇಕ ಶಿಬಿರಗಳು ನಾಶವಾದವು. ಇದಲ್ಲದೆ ಭಾರತೀಯ ಸೇನೆಯ ಈ ಕಾರ್ಯಾಚರಣೆಯಲ್ಲಿ  3-4 ಪಾಕಿಸ್ತಾನಿ ಸೈನಿಕರು ಸಹ ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Trending News