ಮುಂದಿನ 10 ದಿನಗಳಲ್ಲಿ 2,600 ಶ್ರಮಿಕ್ ವಿಶೇಷ ರೈಲುಗಳಿಗೆ ಚಾಲನೆ

ದೇಶವು ಕರೋನವೈರಸ್ ನಿಂದ ತತ್ತರಿಸಿರುವ ಹಿನ್ನಲೆಯಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಈಗ ಲಾಕ್ ಡೌನ್ ನಲ್ಲಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ  ವಲಸೆ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮುಂದಿನ 10 ದಿನಗಳಲ್ಲಿ ಇನ್ನೂ 2,600 ಶ್ರಮಿಕ್ ವಿಶೇಷ ರೈಲುಗಳಿಗೆ ಚಾಲನೆ ನೀಡಲಿದೆ.

Last Updated : May 23, 2020, 11:01 PM IST
ಮುಂದಿನ 10 ದಿನಗಳಲ್ಲಿ 2,600 ಶ್ರಮಿಕ್ ವಿಶೇಷ ರೈಲುಗಳಿಗೆ ಚಾಲನೆ title=
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶವು ಕರೋನವೈರಸ್ ನಿಂದ ತತ್ತರಿಸಿರುವ ಹಿನ್ನಲೆಯಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಈಗ ಲಾಕ್ ಡೌನ್ ನಲ್ಲಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ  ವಲಸೆ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮುಂದಿನ 10 ದಿನಗಳಲ್ಲಿ ಇನ್ನೂ 2,600 ಶ್ರಮಿಕ್ ವಿಶೇಷ ರೈಲುಗಳಿಗೆ ಚಾಲನೆ ನೀಡಲಿದೆ.

ಪ್ರಮುಖ ನಿರ್ಧಾರವೊಂದರಲ್ಲಿ ರೈಲ್ವೆ ಸಚಿವಾಲಯವು ಈ ಪ್ರಯತ್ನವನ್ನು ಕೈಗೊಂಡಿದ್ದು,  ಇದರಿಂದಾಗಿ ದೇಶಾದ್ಯಂತ ಸಿಕ್ಕಿಬಿದ್ದ 36 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ.ಲಾಕ್ ಡೌನ್ ಕಾರಣದಿಂದಾಗಿ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ವಿವಿಧ ಸ್ಥಳಗಳಲ್ಲಿ ಸಿಲುಕಿರುವ ಇತರ ವ್ಯಕ್ತಿಗಳನ್ನು ಸ್ಥಳಾಂತರಿಸಲು ಭಾರತೀಯ ರೈಲ್ವೆ 2020 ರ ಮೇ 1 ರಿಂದ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲು ಪ್ರಾರಂಭಿಸಿತು.

ಅಂತಹ ಸಿಕ್ಕಿಬಿದ್ದ ವ್ಯಕ್ತಿಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಪ್ರಮಾಣಿತ ಪ್ರೋಟೋಕಾಲ್‌ಗಳ ಪ್ರಕಾರ ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಕೋರಿಕೆಯ ಮೇರೆಗೆ ಈ ವಿಶೇಷ ರೈಲುಗಳನ್ನು  ಓಡಿಸಲಾಗುತ್ತಿದೆ. ಈ ಶ್ರಮಿಕ್ ವಿಶೇಷಗಳ ಸಮನ್ವಯ ಮತ್ತು ಸುಗಮ ಕಾರ್ಯಾಚರಣೆಗಾಗಿ ರೈಲ್ವೆ ಮತ್ತು ರಾಜ್ಯ ಸರ್ಕಾರಗಳು ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಿವೆ.

COVID-19 ರೋಗಿಗಳಿಗೆ 5,231 ಬೋಗಿಗಳನ್ನು ಪ್ರತ್ಯೇಕ ವಾರ್ಡ್‌ಗಳಾಗಿ ಪರಿವರ್ತಿಸಿದ ಭಾರತೀಯ ರೈಲ್ವೆ, ಈಗ ಸಿಕ್ಕಿಬಿದ್ದ ವಲಸೆ ಕಾರ್ಮಿಕರ ಸಾಗಣೆಗೆ ಶ್ರಮಿಕ್ ವಿಶೇಷ ರೈಲುಗಳಲ್ಲಿ ಬಳಸಬೇಕಾದ ಶೇ .60 ರಷ್ಟು ಬೋಗಿಗಳನ್ನು ವಾಪಸ್ ತೆಗೆದುಕೊಳ್ಳಲು ನಿರ್ಧರಿಸಿದೆ. ಕಳೆದ ಒಂದು ವಾರದಲ್ಲಿ ಶ್ರಾಮಿಕ್ ವಿಶೇಷ ರೈಲುಗಳ ಬೇಡಿಕೆಯ ನಂತರ ರೈಲ್ವೆ ಮಂಡಳಿ ಮೇ 21 ರಂದು ಎಲ್ಲಾ ವಲಯ ರೈಲ್ವೆಗಳಿಗೆ ಪತ್ರ ಬರೆದಿದೆ.

Trending News