National Training Conclave: ದೇಶದ ಮೊಟ್ಟಮೊದಲ ರಾಷ್ಟ್ರೀಯ ತರಬೇತಿ ಸಮಾವೇಶ ಉದ್ಘಾಟಿಸಿದ ಪ್ರಧಾನಿ ಮೋದಿ

Mission Karmayogi: ದೇಶಾದ್ಯಂತ ತರಬೇತಿ ಸೇವಾ ಸಂಸ್ಥೆಗಳಲ್ಲಿ ಸಹಕಾರವನ್ನು ಉತ್ತೇಜಿಸಲು ಮತ್ತು ಅವುಗಳ ಮೂಲಸೌಕರ್ಯವನ್ನು ಬಲಪಡಿಸಲು ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.  

Written by - Nitin Tabib | Last Updated : Jun 11, 2023, 04:59 PM IST
  • ಮಿಷನ್ ಕರ್ಮಯೋಗಿಯು ಸರಿಯಾದ ವರ್ತನೆ, ಕೌಶಲ್ಯ ಮತ್ತು ಜ್ಞಾನದೊಂದಿಗೆ ಭವಿಷ್ಯದ ಅಗತ್ಯಗಳಿಗೆ
  • ಸರಿಹೊಂದುವಂತೆ ಆಡಳಿತಾತ್ಮಕ ಸೇವೆಯನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದೆ.
  • ಈ ನಿಟ್ಟಿನಲ್ಲಿ ಈ ಸಮ್ಮೇಳನ ಮತ್ತೊಂದು ಹೆಜ್ಜೆಯಾಗಿದೆ.
National Training Conclave: ದೇಶದ ಮೊಟ್ಟಮೊದಲ ರಾಷ್ಟ್ರೀಯ ತರಬೇತಿ ಸಮಾವೇಶ ಉದ್ಘಾಟಿಸಿದ ಪ್ರಧಾನಿ ಮೋದಿ title=
ಚಿತ್ರ ಕೃಪೆ- ಎಎನ್ಐ

National Training Conclave: ನವದೆಹಲಿಯ ಪ್ರಗತಿ ಮೈದಾನದಲ್ಲಿ ಇಂದು ದೇಶದ ಮೊದಲ ರಾಷ್ಟ್ರೀಯ ತರಬೇತಿ ಸಮ್ಮೇಳನವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಈ ಸಮಾವೇಶವನ್ನು ಪ್ರಧಾನಿ ಮೋದಿಯವರ 'ಮಿಷನ್ ಕರ್ಮಯೋಗಿ' ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಆಡಳಿತಾಧಿಕಾರಿಗಳ ತರಬೇತಿ ವ್ಯವಸ್ಥೆ ಸುಧಾರಣೆ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ.

ಕೇಂದ್ರ, ರಾಜ್ಯ ಆಡಳಿತ ತರಬೇತಿ ಸಂಸ್ಥೆಗಳು ಮತ್ತು ಸಂಶೋಧನೆಯಂತಹ ವಿವಿಧ ತರಬೇತಿ ಸಂಸ್ಥೆಗಳಿಂದ 1500 ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳ ಆಡಳಿತ ಅಧಿಕಾರಿಗಳು ಹಾಗೂ ಖಾಸಗಿ ವಲಯದ ತಜ್ಞರು ಸಹ ಸಮ್ಮೇಳನದ ಭಾಗವಾಗಿದ್ದಾರೆ.

ಇದನ್ನೂ ಓದಿ-Biparjoy ಕೇವಲ 6 ಗಂಟೆಗಳಲ್ಲಿ ಪಡೆದುಕೊಳ್ಳಲಿದೆ 'ಅತಿ ಗಂಭೀರ ಸ್ವರೂಪ'! ಐ‌ಎಮ್‌ಡಿ ಅಲರ್ಟ್ ಜಾರಿ

ಮಿಷನ್ ಕರ್ಮಯೋಗಿಯತ್ತ ಒಂದು ಮಹತ್ವದ ಹೆಜ್ಜೆ
ಪಿಟಿಐ ಪ್ರಕಾರ, ಪಿಎಂ ಮೋದಿ ಅವರು ನಾಗರಿಕ ಸೇವೆಯ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ದೇಶದಲ್ಲಿ ಆಡಳಿತ ಪ್ರಕ್ರಿಯೆ ಮತ್ತು ನೀತಿ ಅನುಷ್ಠಾನವನ್ನು ಸುಧಾರಿಸುವ ಪರವಾಗಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಆಡಳಿತ ಸೇವೆಗಳ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ (NPCSCB) 'ಮಿಷನ್ ಕರ್ಮಯೋಗಿ'ಯನ್ನು ರಂಭಿಸಲಾಗಿದೆ ಎಂದು ಅದು ಹೇಳುತ್ತದೆ.

ಇದನ್ನೂ ಓದಿ-Amit Shah: 'ಮುಸ್ಲಿಂ ಮೀಸಲಾತಿ ಕೊನೆಗೊಳಿಸುವುದೆ ನಮ್ಮ ಗುರಿ', ಅದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದ ಅಮಿತ್ ಶಾ

ಮಿಷನ್ ಕರ್ಮಯೋಗಿಯು ಸರಿಯಾದ ವರ್ತನೆ, ಕೌಶಲ್ಯ ಮತ್ತು ಜ್ಞಾನದೊಂದಿಗೆ ಭವಿಷ್ಯದ ಅಗತ್ಯಗಳಿಗೆ ಸರಿಹೊಂದುವಂತೆ ಆಡಳಿತಾತ್ಮಕ ಸೇವೆಯನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಈ ಸಮ್ಮೇಳನ ಮತ್ತೊಂದು ಹೆಜ್ಜೆಯಾಗಿದೆ. ಹೇಳಿಕೆಯ ಪ್ರಕಾರ, ದೇಶಾದ್ಯಂತ ಆಡಳಿತಾತ್ಮಕ ಸೇವೆಗಳ ತರಬೇತಿ ಸಂಸ್ಥೆಗಳ ನಡುವೆ ಸಹಯೋಗವನ್ನು ಉತ್ತೇಜಿಸುವ ಉದ್ದೇಶದಿಂದ ಮತ್ತು ಆಡಳಿತಾತ್ಮಕ ಅಧಿಕಾರಿಗಳಿಗೆ ತರಬೇತಿ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ, ಸಾಮರ್ಥ್ಯ ವರ್ಧನಾ ಆಯೋಗವು ರಾಷ್ಟ್ರೀಯ ತರಬೇತಿ ಸಮ್ಮೇಳನವನ್ನು ಆಯೋಜಿಸುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News