ನವದೆಹಲಿ: Interesting Facts - ಭಾರತೀಯ ರೈಲ್ವೇಯನ್ನು (Indian Railways) ದೇಶದ ಜೀವನಾಡಿ (Lifeline Of Nation) ಎಂದು ಕರೆಯಲಾಗುತ್ತದೆ. ದಿನವೊಂದರಲ್ಲಿ ಲಕ್ಷಾಂತರ ಜನರು ಅದರಲ್ಲಿ ಪ್ರಯಾಣಿಸುತ್ತಾರೆ. ಆದರೆ, ರೈಲಿನ ಬಗ್ಗೆ ನಿಮಗೆ ಎಲ್ಲವೂ ತಿಳಿದಿದೆಯೇ? ಪ್ರತಿ ರೈಲಿನ ಹಿಂಭಾಗದಲ್ಲಿ ಖಂಡಿತವಾಗಿಯೂ 'X' ಎಂದು ಬರೆದಿರುವುದನ್ನು ನೀವು ಗಮನಿಸಿರಬೇಕು. ಈ ಚಿಹ್ನೆಯ ಅರ್ಥವು ತುಂಬಾ ಆಳವಾಗಿದೆ ಎಂಬುದು ಇಲಿ ವಿಶೇಷ. ಹಾಗಾದರೆ ಬನ್ನಿ ರೈಲಿಗೆ ಸಂಬಂಧಿಸಿದ ಇಂತಹ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ರೈಲಿನ ಹಿಂದೆ ಹಲವು ರೀತಿಯ ಚಿಹ್ನೆಗಳಿವೆ
ಹೆಚ್ಚಿನ ಪ್ರಯಾಣಿಕರು ಕೊನೆಯ ಬೋಗಿಯ ಹಿಂಭಾಗದಲ್ಲಿ ದೊಡ್ಡ 'X' ಗುರುತು ಗಮನಿಸಿರಬೇಕು. ಆದರೆ, ಭಾರತದಲ್ಲಿ ಓಡುತ್ತಿರುವ ಎಲ್ಲಾ ಪ್ಯಾಸೆಂಜರ್ ರೈಲುಗಳ ಹಿಂಭಾಗದಲ್ಲಿ ಈ 'X' ಗುರುತು (X Symbol) ಏಕೆ ಮಾಡಲಾಗಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ಗುರುತುಗಳು ಪ್ಯಾಸೆಂಜರ್ ರೈಲುಗಳ ಹಿಂದೆ ಇರುತ್ತವೆ. ರೈಲಿನ ಕೊನೆಯಲ್ಲಿ ಮಾಡಿದ ಈ ಗುರುತುಗಳು ಬಿಳಿ ಮತ್ತು ಹಳದಿ ಬಣ್ಣದ್ದಾಗಿರುತ್ತವೆ. ಭಾರತೀಯ ರೈಲ್ವೆಯ ನಿಯಮಗಳ ಪ್ರಕಾರ, ಎಲ್ಲಾ ಪ್ರಯಾಣಿಕ ರೈಲುಗಳ ಕೊನೆಯಲ್ಲಿ ಈ ಗುರುತು ಹಾಕುವುದು ಕಡ್ಡಾಯವಾಗಿದೆ. ಇದರೊಂದಿಗೆ, ನೀವು ಅನೇಕ ರೈಲುಗಳಲ್ಲಿ LV (LV Symbol) ಅನ್ನು ಸಹ ನೋಡಿರಬೇಕು. ಇದಲ್ಲದೆ, ರೈಲಿನ ಹಿಂಭಾಗದಲ್ಲಿ ಕೆಂಪು ಮಿಟುಕಿಸುವ ದೀಪವೂ ಇರುತ್ತದೆ.
ಭದ್ರತೆ ಮತ್ತು ಸುರಕ್ಷತೆ ಕೋಡ್ (Security Code)
ವಾಸ್ತವವಾಗಿ ಇದು ರೈಲ್ವೇಗಳ ಕೋಡ್ ಆಗಿದೆ, ಇದನ್ನು ಸುರಕ್ಷತೆ ಮತ್ತು ಭದ್ರತೆಯ ಉದ್ದೇಶಕ್ಕಾಗಿ ರೈಲಿನ ಕೊನೆಯ ಕಂಪಾರ್ಟ್‌ಮೆಂಟ್‌ನಲ್ಲಿ ಮಾಡಲಾಗಿರುತ್ತದೆ. ಇದು ಒಂದಲ್ಲ ಹಲವು ಅರ್ಥಗಳನ್ನು ಹೊಂದಿದೆ. ರೈಲಿನಲ್ಲಿ ಈ ಗುರುತು ಇಲ್ಲದಿದ್ದರೆ, ರೈಲಿನಲ್ಲಿ ಏನಾದರೂ ಸಮಸ್ಯೆ ಇದೆ ಅಥವಾ ರೈಲಿನ ಕೆಲವು ಕೋಚ್ ತಪ್ಪಿಹೋಗಿದೆ ಎಂದರ್ಥ. ಇದು ರೈಲ್ವೆ ಸಿಬ್ಬಂದಿಗೆ ಎಚ್ಚರಿಕೆಯಂತೆ ಕಾರ್ಯನಿರ್ವಹಿಸುತ್ತದೆ. ಈ ಗುರುತು ಇಲ್ಲದಿದ್ದರೆ ಅಪಘಾತ ಸಂಭವಿಸುವ ಮೊದಲೇ ಅವರು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಪ್ರಯಾಣಿಕರಾಗಿ ಸುರಕ್ಷಿತವಾಗಿ ಉಳಿಯುವ ಉದ್ದೇಶದಿಂದ, ರೈಲಿನಲ್ಲಿ ಪ್ರಯಾಣಿಸುವ ಮೊದಲು ಕೊನೆಯ ಬೋಗಿಯಲ್ಲಿ ಈ ಗುರುತು ನೋಡಿ ನೀವು ಸಹ ನೆಮ್ಮದಿಯಾಗಿ ಪ್ರಯಾಣಿಸಬಹುದು.
ಇದನ್ನೂ ಓದಿ-Indian Railways: ರೈಲ್ವೆಯ ಮಹತ್ವದ ನಿರ್ಧಾರ! ಈಗ ರೈಲಿನಲ್ಲಿ ಮಹಿಳೆಯರಿಗೆ ಸಿಗಲಿದೆ ಕನ್ಫರ್ಮ್ ಸೀಟ್
LV ಬರೆಯುವುದರ ಅರ್ಥವೇನು?
LV ಎಂದು ಬರೆಯಲಾದ 'X' ಇರುವ ಬೋಗಿ ಕೂಡ ಇರುತ್ತದೆ. LV ಯ ಪೂರ್ಣ ರೂಪವು 'ಕೊನೆಯ ವಾಹನ' (Last Vehicle) ಅಂದರೆ ಕೊನೆಯ ಕಂಪಾರ್ಟ್ಮೆಂಟ್ ಎಂದರ್ಥ. 'X' ಗುರುತು ಜೊತೆಗೆ, LV ಇದು ರೈಲಿನ ಕೊನೆಯ ಕೋಚ್ ಎಂದು ರೈಲ್ವೆ ಉದ್ಯೋಗಿಗಳಿಗೆ ತಿಳಿಸುತ್ತದೆ. ಯಾವುದೇ ಸಂದರ್ಭದಲ್ಲಿ, ರೈಲಿನ ಕೊನೆಯ ಕಂಪಾರ್ಟ್‌ಮೆಂಟ್‌ನಲ್ಲಿ ಈ ಎರಡರ ಚಿಹ್ನೆಯೂ ಇಲ್ಲದಿದ್ದರೆ, ಅದು ತುರ್ತು ಪರಿಸ್ಥಿತಿ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಇಂತಹ ಸಂದರ್ಭದಲ್ಲಿ, ರೈಲಿನ ಕೊನೆಯ ಕೆಲವು ಬೋಗಿಗಳು ಉಳಿದ ರೈಲಿನಿಂದ ಬೇರ್ಪಡುತ್ತವೆ. ಇದನ್ನು ನೋಡಿದ ರೈಲ್ವೆ ಸಿಬ್ಬಂದಿ ತಮ್ಮ ಕೆಲಸದಲ್ಲಿ ನಿರತರಾಗುತ್ತಾರೆ.
ಇದನ್ನೂ ಓದಿ-ಆಘಾತಕಾರಿ ವಿಡಿಯೋ: ಸಾಯಲು ಟ್ರ್ಯಾಕ್ ಮೇಲೆ ಮಲಗಿದ್ದ ವ್ಯಕ್ತಿಯನ್ನು ಬದುಕಿಸಿತು ಲೊಕೊ ಪೈಲಟ್ ಸಮಯ ಪ್ರಜ್ಞೆ!
ಮಿಟುಕಿಸುವ ಕೆಂಪು ಬೆಳಕು (Blinking Red Light)
ರೈಲಿನ ಹಿಂಭಾಗದಲ್ಲಿರುವ ಪ್ರಕಾಶಮಾನವಾದ ಕೆಂಪು ಮಿಟುಕಿಸುವ ದೀಪವು ಟ್ರ್ಯಾಕ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಅವರು ಕೆಲಸ ಮಾಡುತ್ತಿರುವ ಸ್ಥಳದಿಂದ ರೈಲು ಹೊರಟಿದೆ ಎಂದು ಸೂಚಿಸುತ್ತದೆ. ಕೆಲವೊಮ್ಮೆ ಕೆಟ್ಟ ಹವಾಮಾನ ಮತ್ತು ದಟ್ಟವಾದ ಮಂಜಿನಲ್ಲಿ ರೈಲನ್ನು ಸ್ಪಷ್ಟವಾಗಿ ನೋಡುವುದು ತುಂಬಾ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ, ಈ ಬೆಳಕು ಉದ್ಯೋಗಿಗಳಿಗೆ ಬಹಳಷ್ಟು ಸಹಾಯ ಮಾಡುತ್ತದೆ. ಇದರೊಂದಿಗೆ ಹಿಂದಿನಿಂದ ಬರುವ ರೈಲಿಗೆ ಈ ಲೈಟ್ ಮುಂದೆ ಇನ್ನೊಂದು ರೈಲು ಎಂಬುದನ್ನು ಸೂಚಿಸುತ್ತದೆ.
ಇದನ್ನೂ ಓದಿ-Indian Railways: ಯಾತ್ರಿಗಳ ಗಮನಕ್ಕೆ - ಜನವರಿ 1 ರಿಂದ ರೇಲ್ವೆ ರಿಸರ್ವೇಶನ್ ನಲ್ಲಿ ಭಾರಿ ಬದಲಾವಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.