ಆಘಾತಕಾರಿ ವಿಡಿಯೋ: ಸಾಯಲು ಟ್ರ್ಯಾಕ್ ಮೇಲೆ ಮಲಗಿದ್ದ ವ್ಯಕ್ತಿಯನ್ನು ಬದುಕಿಸಿತು ಲೊಕೊ ಪೈಲಟ್‌ ಸಮಯ ಪ್ರಜ್ಞೆ!

Shocking video: ರೈಲ್ವೆ ಸಚಿವಾಲಯ ಶೇರ್ ಮಾಡಿರುವ ಆಘಾತಕಾರಿ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. 

Edited by - Zee Kannada News Desk | Last Updated : Jan 3, 2022, 04:52 PM IST
  • ಸಾಯಲು ಟ್ರ್ಯಾಕ್ ಮೇಲೆ ಮಲಗಿದ್ದ ವ್ಯಕ್ತಿಯನ್ನು ಬದುಕಿಸಿತು ಲೊಕೊ ಪೈಲಟ್‌ ಸಮಯ ಪ್ರಜ್ಞೆ
  • ರೈಲ್ವೆ ಸಚಿವಾಲಯ ಶೇರ್ ಮಾಡಿರುವ ಆಘಾತಕಾರಿ ವಿಡಿಯೋ
ಆಘಾತಕಾರಿ ವಿಡಿಯೋ: ಸಾಯಲು ಟ್ರ್ಯಾಕ್ ಮೇಲೆ ಮಲಗಿದ್ದ ವ್ಯಕ್ತಿಯನ್ನು ಬದುಕಿಸಿತು ಲೊಕೊ ಪೈಲಟ್‌ ಸಮಯ ಪ್ರಜ್ಞೆ!  title=
ರೈಲ್ವೆ

ರೈಲ್ವೆ ಸಚಿವಾಲಯ (Ministry of Railways) ಶೇರ್ ಮಾಡಿರುವ ಆಘಾತಕಾರಿ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಕೆಲವೇ ಇಂಚುಗಳಷ್ಟು ದೂರದಲ್ಲಿ ವ್ಯಕ್ತಿಯೊಬ್ಬ ಪ್ರಾಣಾಪಾಯದಿಂದ ಪಾರಾಗಿರುವುದು ಸಿಸಿಟಿವಿ (CCTV footage) ಸೆರೆಯಾಗಿದೆ. 

ರೈಲು ಹತ್ತಿರ ಬಂದ ತಕ್ಷಣ ಆ ವ್ಯಕ್ತಿ ಬಂದು ಹಳಿಯ ಮೇಲೆ ಮಲಗಿದ್ದಾರೆ. ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಆ ವ್ಯಕ್ತಿಯನ್ನು ಬದುಕಿಸಿದ್ದಾರೆ. ರೈಲು ಚಾಲಕ ಸಮಯಕ್ಕೆ ಸರಿಯಾಗಿ ತುರ್ತು ಬ್ರೇಕ್‌ (Emergency Break) ಎಳೆದಿದ್ದಾನೆ. ಈ ವಿಡಿಯೋ ಮುಂಬೈನ ಶಿವಡಿ ಸ್ಟೇಷನ್‌ನಲ್ಲಿದ್ದು, ಸಿಸಿಟಿವಿ ದೃಶ್ಯಾವಳಿಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ರೈಲು ಹಳಿಯ ಮೇಲೆ ಒಬ್ಬ ವ್ಯಕ್ತಿ ನಿರಾತಂಕವಾಗಿ ನಡೆದುಕೊಂಡು ಹೋಗುವುದರೊಂದಿಗೆ ಕ್ಲಿಪ್ ಪ್ರಾರಂಭವಾಗುತ್ತದೆ. ವಿಡಿಯೋ ಮುಂದುವರೆದಂತೆ ಮತ್ತು ರೈಲು ಸಮೀಪಿಸುತ್ತಿದ್ದಂತೆ, ವ್ಯಕ್ತಿ ಇದ್ದಕ್ಕಿದ್ದಂತೆ ಹಳಿಗಳ ಮೇಲೆ ಮಲಗುತ್ತಾನೆ. ಆ ವ್ಯಕ್ತಿ ತನ್ನ ಕುತ್ತಿಗೆಯನ್ನು ಟ್ರ್ಯಾಕ್‌ ಮೇಲೆ ಇರಿಸಿದ. ಆದರೆ, ಲೊಕೊ ಪೈಲಟ್ (Loco Pilot) ತುರ್ತು ಬ್ರೇಕ್‌ ಎಳೆದಿದ್ದರಿಂದ ರೈಲು ತಕ್ಷಣ ಹಳಿಗಳ ಮೇಲೆ ನಿಂತಿದ್ದರಿಂದ ಪ್ರಾಣಾಪಾಯ ಸಂಭವಿಸಲಿಲ್ಲ.

ಕೆಲವು ಆರ್‌ಪಿಎಫ್ ಸಿಬ್ಬಂದಿ ಸುರಕ್ಷತೆಗಾಗಿ ವ್ಯಕ್ತಿಯ ಕಡೆಗೆ ಓಡುತ್ತಿರುವುದನ್ನು ಕಾಣಬಹುದು. ದೃಶ್ಯಾವಳಿಯಲ್ಲಿ ಕಂಡುಬರುವ ಸಮಯದ ಪ್ರಕಾರ, ಘಟನೆಯು ಬೆಳಿಗ್ಗೆ 11:45 ರ ಸುಮಾರಿಗೆ ಸಂಭವಿಸಿದೆ.

 

 

ರೈಲ್ವೆ ಸಚಿವಾಲಯ ಟ್ವಿಟರ್‌ನಲ್ಲಿ (Indian railways) ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, 6 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಸುಮಾರು 900 ಮಂದಿ ರಿಟ್ವೀಟ್ ಮಾಡಿದ್ದಾರೆ. 

ಇದನ್ನೂ ಓದಿ: Work From Homeಗೆ ಹೊಸ ನಿಯಮಗಳು ಅನ್ವಯ! ಸರ್ಕಾರ ರೂಪಿಸಿದೆ ಅದ್ಭುತ ಯೋಜನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ. 
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News