ಆಕಾಶದಲ್ಲಿ ಹಾರಾಡಿದ್ದು ಐರನ್ ಮ್ಯಾನ್ ಆಕಾರದ ಬಲೂನ್, ಆದರೆ ಏಲಿಯನ್ ಎಂದು ಹೆದರಿದ್ದ ಜನ..!

ಅಚ್ಚರಿಯ ಘಟನೆಯೊಂದರಲ್ಲಿ ಸೂಪರ್ ಹೀರೋ ಕಾಮಿಕ್ ಪಾತ್ರ ಐರನ್ ಮ್ಯಾನ್ ಆಕಾರದಲ್ಲಿರುವ ಬಲೂನ್ ಶನಿವಾರ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಮೇಲೆ ಆಕಾಶದಲ್ಲಿ ಹಾರಾಡುತ್ತಿದೆ ಎಂದು ವರದಿಯಾಗಿದೆ.ನಿಗೂಢ ವಸ್ತುವಿನ ಬಗ್ಗೆ ಡಂಕೌರ್ ಪ್ರದೇಶದ ಆತಂಕಕ್ಕೊಳಗಾದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.

Last Updated : Oct 18, 2020, 04:35 PM IST
ಆಕಾಶದಲ್ಲಿ ಹಾರಾಡಿದ್ದು ಐರನ್ ಮ್ಯಾನ್ ಆಕಾರದ ಬಲೂನ್, ಆದರೆ ಏಲಿಯನ್ ಎಂದು ಹೆದರಿದ್ದ ಜನ..! title=
Photo Courtesy: Twitter

ನೋಯ್ಡಾ: ಅಚ್ಚರಿಯ ಘಟನೆಯೊಂದರಲ್ಲಿ ಸೂಪರ್ ಹೀರೋ ಕಾಮಿಕ್ ಪಾತ್ರ ಐರನ್ ಮ್ಯಾನ್ ಆಕಾರದಲ್ಲಿರುವ ಬಲೂನ್ ಶನಿವಾರ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಮೇಲೆ ಆಕಾಶದಲ್ಲಿ ಹಾರಾಡುತ್ತಿದೆ ಎಂದು ವರದಿಯಾಗಿದೆ.ನಿಗೂಢ ವಸ್ತುವಿನ ಬಗ್ಗೆ ಡಂಕೌರ್ ಪ್ರದೇಶದ ಆತಂಕಕ್ಕೊಳಗಾದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಅಧಿಕಾರಿಗಳ ಪ್ರಕಾರ, ಸ್ಥಳೀಯರು ಏಲಿಯನ್ ಎಂದು ಭಾವಿಸಿದ್ದರು ಮತ್ತು ಭಟ್ಟ ಪಾರ್ಸೌಲ್ ಗ್ರಾಮದ ಬಳಿಯ ಕಾಲುವೆಯೊಂದರಲ್ಲಿ ಬಲೂನ್ ಇಳಿಯುವಾಗ ಅದರ ನೋಟವನ್ನು ಹಿಡಿಯಲು ಭಾರಿ ಜನ ಸಮೂಹವು ನೆರೆದಿತ್ತು.ಈ ಘಟನೆಯನ್ನು ಧೃಡಿಕರಿಸಿ ನೋಯ್ಡಾ ಪೊಲೀಸರು ಶನಿವಾರ ರೋಬೋಟ್ ಆಕಾರದ ಬಲೂನ್ ಡಂಕೌರ್ ಪ್ರದೇಶದ ಭಟ್ಟಾ ಪಾರ್ಸೌಲ್ ಗ್ರಾಮದ ಬಳಿ ಪತ್ತೆಯಾಗಿದೆ ಎಂದು ಹೇಳಿದರು. ಅದು ತನ್ನ ಗಾಳಿಯನ್ನು ಕಳೆದುಕೊಳ್ಳುತ್ತಿರುವುದರಿಂದ ಅದು ಕೆಳಗಿಳಿದಿದೆ ಎಂದು ಅವರು ಹೇಳಿದರು.

ಇದು ಐರನ್ ಮ್ಯಾನ್ (ಕಾಮಿಕ್ ಕ್ಯಾರೆಕ್ಟರ್) ನ ಆಕಾರ ಮತ್ತು ಅದರ ಬಣ್ಣ ಮತ್ತು ವಿನ್ಯಾಸವನ್ನು ನೀಡಿದೆ. ಇದು ಅಸಾಮಾನ್ಯ ದೃಶ್ಯವಾಗಿತ್ತು, ಆದ್ದರಿಂದ ಕೆಲವರು ಇದನ್ನು ಅನ್ಯಲೋಕದವರು ಅಥವಾ ಅಂತಹದ್ದೆಂದು ಭಾವಿಸಿದ್ದರು ಮತ್ತು ಆತಂಕಕ್ಕೊಳಗಾಗಿದ್ದರು' ಎಂದು ಡಿಎಚ್ಓ ಅನಿಲ್ ಕುಮಾರ್ ಪಾಂಡೆ ಹೇಳಿದರು.

ಪೊಲೀಸರಿಗೆ ಈ ವಸ್ತುವಿನಲ್ಲಿ ಯಾವುದೇ ಹಾನಿಕಾರಕ ಅಂಶ ಕಂಡುಬಂದಿಲ್ಲ ಮತ್ತು ಅದನ್ನು ಯಾರು ಗಾಳಿಯಲ್ಲಿ ತೇಲಿ ಬಿಟ್ಟಿದ್ದಾರೆ ಎಂದು ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದೆ.

Trending News