ದೇಶಾದ್ಯಂತ ನಡೆಯುತ್ತಿರುವ ಹಿಂಸಾಚಾರಗಳ ಹಿಂದೆ ISI ಕೈವಾಡ?

ರಕ್ಷಣಾ ಏಜೆನ್ಸಿಗೆ ಸಂಬಂಧಿಸಿದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಭಾರತದಲ್ಲಿ ಅಕ್ರಮವಾಗಿ ಬರುತ್ತಿರುವ ಅಪ್ರವಾಸಿ ಮುಸ್ಲಿಂ ಒಳನುಸುಳುಕೋರರು ಹಾಗೂ ರೋಹಿಂಗ್ಯಾ ಬಂಡುಕೋರರಿಗೆ ISI ಆರ್ಥಿಕ ಸಹಾಯ ಒದಗಿಸುತ್ತಿದೆ ಎನ್ನಲಾಗಿದೆ.

Updated: Dec 19, 2019 , 07:06 PM IST
ದೇಶಾದ್ಯಂತ ನಡೆಯುತ್ತಿರುವ ಹಿಂಸಾಚಾರಗಳ ಹಿಂದೆ ISI ಕೈವಾಡ?

ನವದೆಹಲಿ: ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ ಪಾಕಿಸ್ತಾನದ
ಗುಪ್ತಚರ ಇಲಾಖೆ ISI ಭಾರತದಲ್ಲಿ ದಂಗೆ ನಡೆಸುವ ಉದ್ದೇಶದಿಂದ ಕುತಂತ್ರ ರಚಿಸುತ್ತಿದೆ. ರಕ್ಷಣಾ ಏಜೆನ್ಸಿಗಳ ಮೂಲಗಳು
ನೀಡಿರುವ ಮಾಹಿತಿ ಪ್ರಕಾರ ಭಾರತಕ್ಕೆ ಅಕ್ರಮವಾಗಿ ವಲಸೆ ಬರುತ್ತಿರುವ ಅನಿವಾಸಿ ಮುಸ್ಲಿಂ ಒಳನುಸುಲೋಕೊರರು
ಹಾಗೂ ರೋಹಿಂಗ್ಯಾಗಳಿಗೆ ಈ ಕೆಲಸ ಮಾಡಲು ISI ಆರ್ಥಿಕ ನೆರವು ಒದಗಿಸುತ್ತಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ
ದೇಶಾದ್ಯಂತ ಇರುವ ಸೂಕ್ಷ್ಮ ನಗರಗಳಲ್ಲಿ ಕಲ್ಲು ತೂರಾಟ ನಡೆಸಲು ಹಾಗೂ ಅಲ್ಲಿನ ಪರಿಸ್ಥಿತಿ ಬಿಗಡಾಯಿಸಲು ISI
ಹಣಕಾಸಿನ ನೆರವು ಒದಗಿಸುತ್ತಿದೆ.

ರಾಷ್ಟ್ರರಾಜಧಾನಿ ದೆಹಲಿಯ ಜಾಮೀಯಾ ಹಿಂಸಾಚಾರ ಹಾಗೂ ಆ ಬಳಿಕ ಸೀಲಂಪುರ್-ಜಾಫಾರಾಬಾದ್
ಹಿಂಸಾಚಾರಗಳಲ್ಲಿಯೂ ಕೂಡ ಈ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ದೇಶದ ಆಂಟಿ ಟೆರರ್ ಯೂನಿಟ್ ಹಲವು
ಸಂಶಯಾಸ್ಪದ ಫೋನ್ ಕಾಲ್ ಗಳ ಡೀಟೇಲ್ಸ್ ಕಲೆಹಾಕುತ್ತಿದ್ದು, ಸಾವಿರಾರು ವಾಟ್ಸ್ ಆಪ್ ಗ್ರುಪ್ ಗಳ ಮೇಲೆ
ನಿಗಾವಹಿಸಲಾಗಿದೆ. ಮೂಲಗಳ ಪ್ರಕಾರ ಕಾಶ್ಮೀರ್ ಮಾದರಿಯಲ್ಲಿ ISI ಇದೀಗ ದೇಶಾದ್ಯಂತ ಇರುವ ದೊಡ್ಡ ನಗರಗಳು
ಅದರಲ್ಲೂ ವಿಶೇಷವಾಗಿ ದೆಹಲಿಯಲ್ಲಿ ಕಲ್ಲುತೂರಾಟ ನಡೆಸುವ ಉದ್ದೇಶದಿಂದ ಕುತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.
ಅಷ್ಟೇ ಅಲ್ಲ ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾನೂನಿಗೆ ವಿರೋಧ ವ್ಯಕ್ತಪಡಿಸಿ ನಡೆಸಲಾದ ಹಿಂಸಾಚಾರದಲ್ಲಿ
ಉಗ್ರಸಂಘಟನೆಯ ಕೈವಾಡವಿರುವುದಾಗಿ ದೇಶದ ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿದೆ. ಈ ಕುರಿತು ತನಿಖೆ ನಡೆಸುತ್ತಿರುವ
ಗುಪ್ತಚರ ಇಲಾಖೆಯ ಕೈಗೆ ಮಹತ್ವದ ದಾಖಲೆಗಳು ಸಿಕ್ಕಿದ್ದು, ಅವುಗಳ ಆಧಾರದದ ಮೇಲೆ ಇಲಾಖೆ ಈ ಮಾಹಿತಿ
ಬಹಿರಂಗಪಡಿಸಿದೆ. ನಾರ್ಥ್-ಈಸ್ಟ್ ನಲ್ಲಿ ಸಕ್ರಿಯವಾಗಿರುವ ಉಗ್ರಸಂಘಟನೆ ಉಲ್ಫಾ ಪ್ರತಿಭಟನಾಕಾರರಿಗೆ ಶಸ್ತ್ರಾಸ್ತ್ರಗಳನ್ನು
ಒದಗಿಸಿದೆ ಎಂಬುದು ಈ ದಾಖಲೆಗಳಿಂದ ತಿಳಿದುಬಂದಿದೆ ಎನ್ನಲಾಗಿದೆ.

ಗುಪ್ತಚರ ಇಲಾಖೆಗೆ ಸಿಕ್ಕ ದಾಖಲೆಗಳ ಪ್ರಕಾರ ಪ್ರತಿಭಟನಾಕಾರರಿಗೆ ಶೇ.60ರಷ್ಟು ಸಸ್ತ್ರಾಸ್ತ್ರಗಳನ್ನು ಉಲ್ಫಾ ಸಂಘಟನೆ
ಒದಗಿಸಿದೆ. ಕೇಂದ್ರ ಸರ್ಕಾರ ಕೂಡ ಈ ಪ್ರತಿಭಟನೆಗಳ ಹಿಂದೆ ಅಸಾಮಾಜಿಕ ಸಂಘಟನೆಗಳ ಕೈವಾಡವಿರುವ ಶಂಕೆ
ವ್ಯಕ್ತಪಡಿಸಿದೆ. ಆಷ್ಟೇ ಅಲ್ಲ ಇಂತಹ ಸಂಘಟನೆಗಳ ಮೇಲೆ ಸರ್ಕಾರ ತೀವ್ರ ನಿಗಾವಹಿಸಿದ್ದು, ಈ ಸಂಘಟನೆಗಳ ಹಲವಾರು
ಸದಸ್ಯರು ದೇಶದ್ರೋಹ ಚಟುವಟಿಕೆಗಳಲ್ಲಿ ಭಾಗಿಯಾಗಿ ಸೆರೆವಾಸ ಅನುಭವಿಸುತ್ತಿದ್ದಾರೆ.

ಇತ್ತ ಪ್ರತಿಪಕ್ಷಗಳು ಇಂದು ಪೌರತ್ವ ತಿದ್ದುಪಡಿ ಕಾನೂನನ್ನು ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿವೆ. ಆದರೆ, ಈ
ಆಂದೋಲನದಿಂದ ಶಿವಸೇನೆ ಹಾಗೂ RJD ಗಳಂತಹ ಪಕ್ಷಗಳು ದೂರ ಉಳಿದಿವೆ.