ಉ.ಪ್ರದೇಶದಲ್ಲಿ ಬಿಜೆಪಿ ಸರ್ಕಾರದ ರೈತಪರ ಕಾಳಜಿ ಜಾಹಿರಾತಿಗೆ ಮಾತ್ರ ಸೀಮಿತ: ಪ್ರಿಯಾಂಕಾ ಗಾಂಧಿ

ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ರೈತರ ಹಿತಾಸಕ್ತಿಯ ವಿಷಯವನ್ನು ಕೇವಲ ಜಾಹೀರಾತುಗಳು ಮತ್ತು ಜಾಹೀರಾತು ಫಲಕಗಳಿಗೆ ಮಾತ್ರ ಸೀಮಿತಗೊಳಿಸಿದೆ ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.

Updated: Sep 25, 2019 , 11:05 AM IST
ಉ.ಪ್ರದೇಶದಲ್ಲಿ ಬಿಜೆಪಿ ಸರ್ಕಾರದ ರೈತಪರ ಕಾಳಜಿ ಜಾಹಿರಾತಿಗೆ ಮಾತ್ರ ಸೀಮಿತ: ಪ್ರಿಯಾಂಕಾ ಗಾಂಧಿ

ನವದೆಹಲಿ: ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಅಡಿಯಲ್ಲಿ ರೈತರ ಹಿತಾಸಕ್ತಿ ವಿಷಯಗಳು ಜಾಹೀರಾತುಗಳು ಮತ್ತು ಜಾಹೀರಾತು ಫಲಕಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆರೋಪಿಸಿದ್ದಾರೆ.

ವಿದ್ಯುತ್ ಇಲಾಖೆ ಮತ್ತು ಪೊಲೀಸರಿಂದ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಮೇಲೆ ಸಹರಾನ್‌ಪುರದಲ್ಲಿ ರೈತನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಧ್ಯಮ ವರದಿ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ರೈತರ ಹಿತಾಸಕ್ತಿಯ ವಿಷಯವನ್ನು ಕೇವಲ ಜಾಹೀರಾತುಗಳು ಮತ್ತು ಜಾಹೀರಾತು ಫಲಕಗಳಿಗೆ ಮಾತ್ರ ಸೀಮಿತಗೊಳಿಸಿದೆ. ರೈತರಿಗೆ ಬಾಕಿ ಸಿಗುತ್ತಿಲ್ಲ. ಅವರಿಗೆ ಸರಿಯಾದ ವಿದ್ಯುತ್ ಸರಬರಾಜು ಆಗುತ್ತಿಲ್ಲ, ಆದರೆ ವಿದ್ಯುತ್ ದರವನ್ನು ಮಾತ್ರ ಹೆಚ್ಚಿಸಲಾಗಿದೆ. ರೈತರು ಮೋಸ ಹೋಗಿದ್ದಾರೆ. ಸಾಲ ಮನ್ನಾ ಹೆಸರಿನಲ್ಲಿ ಅವರನ್ನು ಅವಮಾನಿಸಲಾಗುತ್ತಿದೆ" ಎಂದು ಆರೋಪಿಸಿದ್ದಾರೆ.