ಎಪ್ರಿಲ್ 15ರಿಂದ ರೈಲು ಸಂಚಾರದ ಬಗ್ಗೆ ಭಾರತೀಯ ರೈಲ್ವೆಯ ಮಹತ್ವದ ಹೇಳಿಕೆ

ಎಪ್ರಿಲ್ 15ರಿಂದ ರೈಲು ಸಂಚಾರ ಆರಂಭವಾಗಲಿದೆ ಎಂಬ ಮಾಧ್ಯಮ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡಿದ ಭಾರತೀಯ ರೈಲ್ವೆ.

Yashaswini V Yashaswini V | Updated: Apr 10, 2020 , 12:59 PM IST
ಎಪ್ರಿಲ್ 15ರಿಂದ ರೈಲು ಸಂಚಾರದ ಬಗ್ಗೆ ಭಾರತೀಯ ರೈಲ್ವೆಯ ಮಹತ್ವದ ಹೇಳಿಕೆ

ನವದೆಹಲಿ : ಎಪ್ರಿಲ್ 15ರಿಂದ ಪ್ಯಾಸೆಂಜರ್ ರೈಲುಗಳ ಸಂಚಾರ ಆರಂಭವಾಗಲಿದೆ ಎಂಬ ಮಾಧ್ಯಮ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತೀಯ ರೈಲ್ವೆ ಸದ್ಯದ ಪರಿಸ್ಥಿತಿಯಲ್ಲಿ ರೈಲು ಸಂಚಾರ ಪುನರಾರಂಭಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದು, 21 ದಿನಗಳ ಲಾಕ್​​ಡೌನ್ (Lockdown) ಬಳಿಕ ಎಪ್ರಿಲ್ 15ರಿಂದಲೇ ರೈಲು ಸಂಚಾರ ಆರಂಭವಾಗಲಿದೆ ಎಂಬ ಮಾಧ್ಯಮ ವರದಿಗಳನ್ನು ತಿರಸ್ಕರಿಸಿದೆ.

ಈ ಹಂತದಲ್ಲಿ ಪ್ಯಾಸೆಂಜರ್ ರೈಲ್ವೆ ಸೇವೆಗಳನ್ನು ಪ್ರಾರಂಭಿಸುವ ಬಗ್ಗೆ ಊಹಿಸಲೂ ಸಾಧ್ಯವಿಲ್ಲ. ಮಾಧ್ಯಮ ವರದಿಗಳು ಸತ್ಯಕ್ಕೆ ದೂರವಾಗಿದ್ದು ರೈಲ್ವೆ ಸಚಿವಾಲಯ ಅಂತಹ ಯಾವುದೇ ಪ್ರೋಟೋಕಾಲ್ ಹೊರಡಿಸಿಲ್ಲ ಎಂದು ಭಾರತೀಯ ರೈಲ್ವೆ (Indian Railway) ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"ಈ ಸಂದರ್ಭದಲ್ಲಿ ಪ್ಯಾಸೆಂಜರ್ ರೈಲು ಓಡಾಟದ ಬಗ್ಗೆ ನಿರ್ಧಾರ ಕೈಗೊಳ್ಳುವುದು ಪ್ರಯಾಣಿಕರ ಹಿತದೃಷ್ಟಿಯಿಂದ ಒಳ್ಳೆಯದಲ್ಲ" ಎಂದು ರೈಲ್ವೆ ಇಲಾಖೆ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದು, ಕೆಲ ಮಾಧ್ಯಮಗಳು ಈ ಬಗ್ಗೆ ಹರಡುತ್ತಿರುವ ವದಂತಿಗಳನ್ನು ನಿರ್ಲಕ್ಷಿಸುವಂತೆ  ಕೋರಲಾಗಿದೆ. 

ಈ ಹುದ್ದೆಗಳಿಗೆ Indian Railways ಅರ್ಜಿ ಆಹ್ವಾನ, ಸಂದರ್ಶನದ ಮೂಲಕ ನೇಮಕಾತಿ

ಇದಕ್ಕೂ ಮೊದಲು ಥರ್ಮಲ್ ಸ್ಕ್ರೀನಿಂಗ್‌ನಂತಹ ಕೆಲವು ಕ್ರಮಗಳೊಂದಿಗೆ ಭಾರತೀಯ ರೈಲ್ವೆ ಏಪ್ರಿಲ್ 14ರ ನಂತರ ಪ್ರಯಾಣಿಕ ರೈಲುಗಳ ಸೇವೆಯನ್ನು ಪ್ರಾರಂಭಿಸುತ್ತದೆ ಎಂದು ಕೆಲವು ವರದಿಗಳಲ್ಲಿ ಹೇಳಲಾಗಿದೆ.

ಏತನ್ಮಧ್ಯೆ, ಭಾರತೀಯ ರೈಲ್ವೆ ಮೊದಲ ಬಾರಿಗೆ ಪಾರ್ಸೆಲ್ ರೈಲುಗಳಿಗೆ ಇಷ್ಟು ದೊಡ್ಡ ಸಂಖ್ಯೆಯ ವೇಳಾಪಟ್ಟಿಗಳನ್ನು ನಿಗದಿಪಡಿಸಿದೆ. ರೈಲ್ವೆ ಸಚಿವಾಲಯದಿಂದ ಪಡೆದ ಮಾಹಿತಿಯ ಪ್ರಕಾರ, ಸ್ಥಳೀಯ ಕೈಗಾರಿಕೆಗಳು, ಇ-ಕಾಮರ್ಸ್ ಕಂಪನಿಗಳು, ಆಸಕ್ತ ಗುಂಪುಗಳು, ವ್ಯಕ್ತಿಗಳು ಮತ್ತು ಇತರ ಯಾವುದೇ ಸಂಭಾವ್ಯ ಲೋಡರ್‌ಗಳು ಪಾರ್ಸೆಲ್‌ಗಳನ್ನು ಕಾಯ್ದಿರಿಸಬಹುದು.  ಕೊರೊನಾವೈರಸ್  (Coronavirus) ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ವಿಶೇಷ ಪಾರ್ಸೆಲ್ ವಿಶೇಷ ರೈಲುಗಳಿಗಾಗಿ 58 ಮಾರ್ಗಗಳನ್ನು (109 ರೈಲುಗಳು) ತಿಳಿಸಲಾಗಿದೆ.

ರೈಲ್ವೆ ಪ್ರಯಾಣಿಕರಿಗೆ ಪ್ರಮುಖ ಸುದ್ದಿ: ರದ್ದಾದ ರೈಲುಗಳ ಬಗ್ಗೆ IRCTC ನೀಡಿದೆ ಈ ಮಾಹಿತಿ

ಹಾಳಾಗುವ ಕೃಷಿ ಮತ್ತು ಸಂಬಂಧಿತ ಕ್ಷೇತ್ರ ಉತ್ಪನ್ನಗಳಾದ ಮೊಟ್ಟೆ, ಹಣ್ಣುಗಳು, ತರಕಾರಿಗಳು, ಮೀನು, ಹಾಲು ಮತ್ತು ಡೈರಿ ಉತ್ಪನ್ನಗಳ ಜೊತೆಗೆ ಔಷಧಿಗಳು, ವೈದ್ಯಕೀಯ ಉಪಕರಣಗಳು, ಮಾಸ್ಕ್ ಗಳು, ಕೃಷಿಗಾಗಿ ಬೀಜಗಳನ್ನು ಸಾಗಿಸಲು ಪಾರ್ಸೆಲ್ ರೈಲು ಮೂಲಕ ಅನುಕೂಲವಾಗಲಿದೆ. ಇದಲ್ಲದೆ, ಇ-ಕಾಮರ್ಸ್ ರವಾನೆ, ಪ್ಯಾಕೇಜ್ ಮಾಡಲಾದ ಆಹಾರ ವಸ್ತುಗಳು, ಪುಸ್ತಕಗಳು, ಲೇಖನ ಸಾಮಗ್ರಿಗಳು, ಪ್ಯಾಕಿಂಗ್ ವಸ್ತುಗಳು ಇತ್ಯಾದಿಗಳ ಸಾಗಣೆಯನ್ನು ಸಹ ಪಾರ್ಸೆಲ್ ರೈಲಿನ ಮೂಲಕ ಸುಲಭವಾಗಿ ಸಾಗಿಸಲಾಗುವುದು.