"ಭಾರತ ಮೋದಿಯಂತೆ ನನಗೂ ಸೇರಿದೆ, ಈ ಭೂಮಿ ಮುಸ್ಲಿಮರ ಮೊದಲ ತಾಯ್ನಾಡು"

JUH president Mahmood Madani : ನವದೆಹಲಿಯಲ್ಲಿ ಜಮೀಯತ್ ಉಲೇಮಾ-ಎ-ಹಿಂದ್ ವಾರ್ಷಿಕ ಸಾಮಾನ್ಯ ಅಧಿವೇಶನದಲ್ಲಿ ತಮ್ಮ ಭಾಷಣದಲ್ಲಿ, JUH ಅಧ್ಯಕ್ಷ ಮಹಮೂದ್‌ ಮದನಿ ಅವರು ದೇಶದಲ್ಲಿ ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾ ಮತ್ತು ಧಾರ್ಮಿಕ ಪೂರ್ವಾಗ್ರಹದ ವಿಷಯಗಳನ್ನು ಪ್ರಸ್ತಾಪಿಸಿದರು, ಭಾರತವು ತನ್ನ ಮನೆಯಂತೆ ಎಂದು ಪುನರುಚ್ಚರಿಸಿದರು.

Written by - Chetana Devarmani | Last Updated : Feb 11, 2023, 04:31 PM IST
  • ಜಮೀಯತ್ ಉಲೇಮಾ-ಎ-ಹಿಂದ್ ವಾರ್ಷಿಕ ಸಾಮಾನ್ಯ ಅಧಿವೇಶನ
  • "ಭಾರತ ಮೋದಿಯಂತೆ ನನಗೂ ಸೇರಿದೆ, ಈ ಭೂಮಿ ಮುಸ್ಲಿಮರ ಮೊದಲ ತಾಯ್ನಾಡು"
  • ಜಮೀಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮಹಮೂದ್ ಮದನಿ ಹೇಳಿಕೆ
"ಭಾರತ ಮೋದಿಯಂತೆ ನನಗೂ ಸೇರಿದೆ, ಈ ಭೂಮಿ ಮುಸ್ಲಿಮರ ಮೊದಲ ತಾಯ್ನಾಡು"  title=
JUH president Mahmood Madani

ನವದೆಹಲಿ : ನವದೆಹಲಿಯಲ್ಲಿ ಜಮೀಯತ್ ಉಲೇಮಾ-ಎ-ಹಿಂದ್ ವಾರ್ಷಿಕ ಸಾಮಾನ್ಯ ಅಧಿವೇಶನದಲ್ಲಿ ತಮ್ಮ ಭಾಷಣದಲ್ಲಿ, JUH ಅಧ್ಯಕ್ಷ ಮಹಮೂದ್‌ ಮದನಿ ಅವರು ದೇಶದಲ್ಲಿ ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾ ಮತ್ತು ಧಾರ್ಮಿಕ ಪೂರ್ವಾಗ್ರಹದ ವಿಷಯಗಳನ್ನು ಪ್ರಸ್ತಾಪಿಸಿದರು, ಭಾರತವು ತನ್ನ ಮನೆಯಂತೆ ಎಂದು ಪುನರುಚ್ಚರಿಸಿದರು. ಇದು ಮುಸ್ಲಿಮರ ಮೊದಲ ತಾಯ್ನಾಡು. ಇಸ್ಲಾಂ ಧರ್ಮವು ಹೊರಗಿನಿಂದ ಬಂದ ಧರ್ಮ ಎಂದು ಹೇಳುವುದು ಆಧಾರರಹಿತ. ಎಲ್ಲಾ ಧರ್ಮಗಳಲ್ಲಿ ಇಸ್ಲಾಂ ಅತ್ಯಂತ ಹಳೆಯ ಧರ್ಮ ಎಂದು ಜಮೀಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮಹಮೂದ್ ಮದನಿ ಹೇಳಿದ್ದಾರೆ. 

ಇಸ್ಲಾಂ ಈ ದೇಶದ ಧರ್ಮವಾಗಿದೆ ಮತ್ತು ಇದು ಎಲ್ಲಾ ಧರ್ಮಗಳಿಗಿಂತಲೂ ಪುರಾತನವಾಗಿದೆ. ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ (ಸ) ಅದೇ ಧರ್ಮವನ್ನು ಪೂರ್ಣಗೊಳಿಸಲು ಬಂದರು, ಅದು ಭಾರತದಲ್ಲಿ ಅರಳಿತು. ಭಾರತವು ಹಿಂದಿ ಮುಸ್ಲಿಮರಿಗೆ ಉತ್ತಮ ಸ್ಥಳ ಎಂದು ಮದನಿ ಹೇಳಿದ್ದಾರೆ. 

ಇದನ್ನೂ ಓದಿ : 3 ತಿಂಗಳ ಭ್ರೂಣವನ್ನು ರಸ್ತೆಗೆ ಎಸೆದು ಪರಾರಿಯಾದ ಯುವ ಜೋಡಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಅವರಿಗೆ ಸೇರಿದಂತೆಯೇ ಮಹಮೂದ್‌ ಮದನಿಗೆ ಕೂಡ ಸೇರಿದೆ ಎಂಸು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ 34ನೇ ಸಾಮಾನ್ಯ ಅಧಿವೇಶನ ಉದ್ದೇಶಿಸಿ ಮಾತನಾಡುವಾಗ ಮದನಿ ಹೇಳಿದ್ದಾರೆ.

ಯಾವುದೇ ಪ್ರಜಾಪ್ರಭುತ್ವ ಸಮಾಜದಲ್ಲಿ, ಮತದಾನದ ಶಕ್ತಿಯನ್ನು ಗುರುತಿಸುವುದು ಮುಖ್ಯವಾಗಿದೆ. ಕೇವಲ ಒಂದು ಮತದ ಚಲನವಲನದ ಆಧಾರದ ಮೇಲೆ ಸರ್ಕಾರ ರಚನೆಯಾಗಿ ಮತ್ತೊಂದು ಸರ್ಕಾರ ಬಿದ್ದ ನಿದರ್ಶನಗಳಿವೆ. ನಾವು ಒಂದು ಮತದ ಮೌಲ್ಯವನ್ನು ಅರಿತುಕೊಳ್ಳಬೇಕು ಮತ್ತು ಕೇವಲ ಒಂದು ಮತವು ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ನಿರ್ಧರಿಸಬಹುದು ಎಂಬುದನ್ನು ಗುರುತಿಸಬೇಕು ಎಂದಿದ್ದಾರೆ.

ಇದನ್ನೂ ಓದಿ : Delhi Mumbai Expressway : ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ ವೇಗೆ ನಾಳೆ ಪ್ರಧಾನಿ ಮೋದಿ ಚಾಲನೆ!  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News