Jammu-Kashmir : 10 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿ ಬಿಡುಗಡೆ

ಕಾಶ್ಮೀರ ಪೊಲೀಸ್ ಐಜಿ ವಿಜಯ್ ಕುಮಾರ್  (Vijay Kumar) ಅಗ್ರ 10 ಭಯೋತ್ಪಾದಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಕೆಲವು ಹಳೆಯ ಮತ್ತು ಕೆಲವು ಹೊಸ ಭಯೋತ್ಪಾದಕರ ಹೆಸರುಗಳಿವೆ. ಕಣಿವೆಯ ಈ ಅಗ್ರ 10 ಭಯೋತ್ಪಾದಕರು ಪೊಲೀಸರ ಗುರಿಯಲ್ಲಿದ್ದಾರೆ.

Written by - Zee Kannada News Desk | Last Updated : Aug 3, 2021, 07:33 AM IST
  • ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯನ್ನು ಬಿಡುಗಡೆ ಮಾಡಿದರು
  • 10 ಭಯೋತ್ಪಾದಕರ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ
  • ಕೆಲವು ಹಳೆಯ ಮತ್ತು ಕೆಲವು ಹೊಸ ಭಯೋತ್ಪಾದಕರ ಹೆಸರುಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ
Jammu-Kashmir : 10 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿ ಬಿಡುಗಡೆ title=
Image courtesy: ANI

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಿಂದ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಭದ್ರತಾ ಪಡೆಗಳು ಆಪರೇಷನ್ ಕ್ಲೀನ್ ಅನ್ನು ನಿರಂತರವಾಗಿ ನಡೆಸುತ್ತಿವೆ. ಅದರ ಅಡಿಯಲ್ಲಿ ಕಣಿವೆಯಲ್ಲಿ ಭೀತಿ ಹರಡಲು ಸಂಚು ರೂಪಿಸಿರುವ ಕುಖ್ಯಾತ ಭಯೋತ್ಪಾದಕರನ್ನು ಗುರಿಯಾಗಿಸಲಾಗುತ್ತಿದೆ. ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು 10 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಹೊಸ ಮತ್ತು ಹಳೆಯ ಭಯೋತ್ಪಾದಕರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಕಣಿವೆಯಲ್ಲಿ ಭಯೋತ್ಪಾದನೆಯನ್ನು ಹರಡಲು ಪ್ರಯತ್ನಿಸುತ್ತಿರುವ ಈ ಭಯೋತ್ಪಾದಕರು ವಿವಿಧ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಕಾಶ್ಮೀರ ಪೊಲೀಸ್ ಐಜಿ ವಿಜಯ್ ಕುಮಾರ್  (Vijay Kumar) ಅಗ್ರ 10 ಭಯೋತ್ಪಾದಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಕೆಲವು ಹಳೆಯ ಮತ್ತು ಕೆಲವು ಹೊಸ ಭಯೋತ್ಪಾದಕರ ಹೆಸರುಗಳಿವೆ. ಈ ಪಟ್ಟಿಯಲ್ಲಿ ಜೈಶ್-ಎ-ಮೊಹಮ್ಮದ್ (JeM), ಲಷ್ಕರ್-ಇ-ತೊಯ್ಬಾ  (LeT), ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಅಲ್ ಬದ್ರ್ ನ ಭಯೋತ್ಪಾದಕರ ಹೆಸರುಗಳು ಸೇರಿವೆ.

ಇದನ್ನೂ ಓದಿ-  ಜಮ್ಮು ಬಳಿ ಮತ್ತೆ ಗೋಚರಿಸಿದ ಡ್ರೋನ್..! ಭದ್ರತಾಪಡೆಗಳಿಂದ ಕಣ್ಗಾವಲು

ಕಣಿವೆಯಲ್ಲಿ ಭೀತಿ ಹರಡುವ ಜಾಲದಲ್ಲಿದ್ದಾರೆ ಈ ಭಯೋತ್ಪಾದಕರು:
ಜಮ್ಮು ಮತ್ತು ಕಾಶ್ಮೀರ (Jammu and Kashmir) ಪೊಲೀಸರ ಈ ಪಟ್ಟಿಯಲ್ಲಿರುವ ಹಳೆಯ ಭಯೋತ್ಪಾದಕರಲ್ಲಿ, ಸಲೀಂ ಪರ್ರೆ, ಯೂಸುಫ್ ಕಾಂಟ್ರೋ, ಅಬ್ಬಾಸ್ ಶೇಖ್, ರಿಯಾಜ್ ಶೆಟರ್ಗುಂಡ್, ಫಾರೂಕ್ ನಲಿ, ಜುಬೇರ್ ವಾನಿ ಮತ್ತು ಅಶ್ರಫ್ ಮೊಲ್ವಿ ಅವರ ಹೆಸರುಗಳನ್ನು ಸೇರಿಸಲಾಗಿದೆ. ಈ ಪಟ್ಟಿಯಲ್ಲಿರುವ ಹೊಸ ಭಯೋತ್ಪಾದಕರ ಹೆಸರುಗಳು - ಸಾಕಿಬ್ ಮಂಜೂರ್, ಉಮರ್ ಮುಸ್ತಾಕ್ ಖಾಂಡೆ ಮತ್ತು ವಕೀಲ ಶಾ.

ಇದನ್ನೂ ಓದಿ-  Encounter In Pulwama: ಪುಲ್ವಾಮದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಜಮ್ಮುವಿನಲ್ಲಿ ಡ್ರೋನ್ ಭೀತಿ:
ಏತನ್ಮಧ್ಯೆ, ಜಮ್ಮುವಿನಲ್ಲಿ ಡ್ರೋನ್‌ಗಳೊಂದಿಗೆ ಭಯೋತ್ಪಾದನೆಯನ್ನು ಹರಡುವ ಪ್ರಕ್ರಿಯೆ ಮುಂದುವರೆದಿದೆ. ಸೋಮವಾರ ಸಂಜೆ, ಹಿರಾನಗರ ಸೆಕ್ಟರ್‌ನ  (Hiranagar Sector) ಬನಿಯಾಡಿಯಲ್ಲಿ ಡ್ರೋನ್ ಕಂಡುಬಂದಿದ್ದು ಸಂಚಲನ ಮೂಡಿಸಿದೆ. ಮಾಹಿತಿಯ ಪ್ರಕಾರ, ಡ್ರೋನ್‌ಗಳು ಭದ್ರತಾ ಪಡೆಗಳ ಸ್ಥಾನಗಳ ಮೇಲೆ ನಾಲ್ಕು ಸ್ಥಳಗಳಲ್ಲಿ ಸುಳಿದಾಡುತ್ತಿರುವುದು ಕಂಡುಬಂದಿದೆ. ನಂತರ ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News