ನವದೆಹಲಿ: JEE Main 2021 April Session Postponed: ದೇಶಾದ್ಯಂತ ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ (Coronavirus) ಸೋಂಕಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency) ಏಪ್ರಿಲ್ ನಲ್ಲಿ ನಡೆಯಬೇಕಿದ್ದ JEE Main 2021 ಪರೀಕ್ಷೆಯನ್ನು ಸ್ಥಗಿತಗೊಳಿಸಿದೆ.
ಜೆಇಇ ಮುಖ್ಯ 2021 ಪರೀಕ್ಷೆಯ ಎರಡು ಸೆಶನ್ ಗಳು ಈಗಾಗಲೇ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಪೂರ್ಣಗೊಂಡಿವೆ. ಕರೋನಾದ ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆ, ವಿದ್ಯಾರ್ಥಿಗಳು ಮತ್ತು ಪೋಷಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಏಪ್ರಿಲ್ ನಲ್ಲಿ ನಡೆಯಬೇಕಿದ್ದ ಸೆಷನ್ ಅನ್ನು ಸ್ಥಗಿತಗೊಳಿಸಿದೆ.
ಇದನ್ನೂ ಓದಿ- ಕರೋನಾ ರಕ್ಕಸ ನರ್ತನ, ಒಂದೇ ದಿನ 2.60 ಲಕ್ಷ ಜನರಿಗೆ ಸೋಂಕು, ವೈರಸ್ ಮುಷ್ಟಿಯೊಳಗೆ ರಾಜ್ಯ
April session for JEE (Main) 2021 has been postponed. It was scheduled for 27th, 28th & 30th April. Revised dates to be announced later & at least 15 days prior to exam: National Testing Agency (NTA)
First two sessions have already been completed in February & March#COVID19 pic.twitter.com/Yz69Ny4r0Q
— ANI (@ANI) April 18, 2021
ಇದಕ್ಕೂ ಮೊದಲು JEE Main 2021 Exam ಅನ್ನು ಏಪ್ರಿಲ್ 27 ರಿಂದ ಏಪ್ರಿಲ್ 30ರವರೆಗೆ ಆಯೋಜಿಸಲು ನಿರ್ಧರಿಸಲಾಗಿತ್ತು. ಈ ಕುರಿತು ಹೇಳಿಕೆ ನೀಡಿರುವ ಪರೀಕ್ಷಾ ಸಂಸ್ಥೆ, ಈ ಪರೀಕ್ಷೆಗಳ ನೂತನ ದಿನಾಂಕಗಳ ಮಾಹಿತಿಯನ್ನು ಪರೀಕ್ಷೆಗೂ 15 ದಿನ ಮುಂಚಿತವಾಗಿ ಸೂಚಿಸಲಾಗುವುದು ಎಂದು ಹೇಳಿದೆ.
ಇದನ್ನೂ ಓದಿ-Printing Currency Notes: Corona ಸಂಕಟ, ನಾಸಿಕ್ ಪ್ರೆಸ್ ನಲ್ಲಿ ನೋಟುಗಳ ಮುದ್ರಣ ಏಪ್ರಿಲ್ 30ರವರೆಗೆ ಸ್ಥಗಿತ
📢 Announcement
Given the current #covid19 situation, I have advised @DG_NTA to postpone the JEE (Main) – 2021 April Session.I would like to reiterate that safety of our students & their academic career are @EduMinOfIndia's and my prime concerns right now. pic.twitter.com/Pe3qC2hy8T
— Dr. Ramesh Pokhriyal Nishank (@DrRPNishank) April 18, 2021
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖರಿಯಾಲ್ ನಿಶಾಂಕ್ (Ramesh Pokharial Nishank), "ಕೊರೊನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು NTAಗೆ , JEE MAIN 2021 ರ ಏಪ್ರಿಲ್ ಸೆಷನ್ ಅನ್ನು ಸ್ಥಗಿತಗೊಳಿಸಲು ಸಲಹೆ ನೀಡಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಅವರ ಶೈಕ್ಷಣಿಕ ಕರಿಯರ್ ಶಿಕ್ಷಣ ಸಚಿವಾಲಯದ (Education Ministry) ಪ್ರಮುಖ ಜವಾಬ್ದಾರಿಯಾಗಿದೆ " ಎಂದು ಹೇಳಿದ್ದಾರೆ.
ಇದನ್ನೂ ಓದಿ- ಇನ್ನು ರೇಷನ್ ಗಾಗಿ ಅಂಗಡಿ ಮುಂದೆ ಕಾಯುವ ಅಗತ್ಯವಿಲ್ಲ ; ಈ ಆಪ್ ಇದ್ದರೆ ಮನೆ ಬಾಗಿಲಿಗೇ ಬರಲಿದೆ ಪಡಿತರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.