ವಾರ್ಷಿಕ 1.50 ಕೋಟಿ ಲಾಭವನ್ನು ಹೊಂದಿದ್ಧ ಬೀದಿ ವ್ಯಾಪಾರಿಗೆ ತೆರಿಗೆ ನೋಟಿಸ್ ..!

ಬೀದಿ ಮಾರಾಟದ ಮೂಲಕ ವಾರ್ಷಿಕ 1.50 ಕೋಟಿ ರೂ ಆದಾಯ ಹೊಂದಿದ್ದ ಬೀದಿ ವ್ಯಾಪಾರಿಗೆ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ಕಳಿಸಿದ್ದಾರೆ.     

Last Updated : Jun 25, 2019, 04:17 PM IST
ವಾರ್ಷಿಕ 1.50 ಕೋಟಿ ಲಾಭವನ್ನು ಹೊಂದಿದ್ಧ ಬೀದಿ ವ್ಯಾಪಾರಿಗೆ ತೆರಿಗೆ ನೋಟಿಸ್ ..!  title=
Photo courtesy: Pixabay(ಸಾಂದರ್ಭಿಕ ಚಿತ್ರ)

ನವದೆಹಲಿ: ಬೀದಿ ಮಾರಾಟದ ಮೂಲಕ ವಾರ್ಷಿಕ 1.50 ಕೋಟಿ ರೂ ಆದಾಯ ಹೊಂದಿದ್ದ ಬೀದಿ ವ್ಯಾಪಾರಿಗೆ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ಕಳಿಸಿದ್ದಾರೆ.     

ಅಲಿಗಡ್ ನಲ್ಲಿರುವ ಸೀಮಾ ಸಿನೆಮಾ ಹಾಲ್ ಬಳಿಯ ಮುಖೇಶ್ ಅಂಗಡಿ ಕೇವಲ ಕಚೋರಿಯನ್ನು ಮಾರಾಟ ಮಾಡುವುದರ ಮೂಲಕವೇ ಕೋಟ್ಯಾದೀಶರನ್ನಾಗಿಸಿದೆ. 'ಮುಖೇಶ್ ಕಚೋರಿ' ಹೆಸರಿನ ಈ ಅಂಗಡಿಯಲ್ಲಿ ಪ್ರತಿದಿನ ಭರ್ಜರಿ ವ್ಯಾಪಾರ ನಡೆಯುತ್ತದೆ. ವಿಶೇಷವೆಂದರೆ ಮೆನುವಿನಲ್ಲಿ ಸೀಮಿತ ಆಯ್ಕೆಗಳನ್ನು ಹೊಂದಿದ್ದರೂ ಸಹ ಇಲ್ಲಿನ ಸ್ಥಳೀಯರಲ್ಲಿ ಹೆಚ್ಚು ಪ್ರಿಯವಾಗಿದೆ ಎನ್ನಲಾಗಿದೆ.

ಇಲ್ಲಿನ ಜನರು ಮಾರಾಟದಲ್ಲಿರುವ ಆಹಾರ ಪದಾರ್ಥಗಳು ರುಚಿಕರವಾಗಿರುತ್ತವೆ ಎಂದು ಸೂಚಿಸಿದರೆ, ರಾಜ್ಯ ತೆರಿಗೆ ಇಲಾಖೆಯು ಮಾರಾಟದ ಬಗ್ಗೆ ದೂರು ಸ್ವೀಕರಿಸಿತು ಮತ್ತು ಅದು ಸ್ಟಾಕ್ ತೆಗೆದುಕೊಳ್ಳಲು ಕೆಲವು ಅಧಿಕಾರಿಗಳನ್ನು ಇಲ್ಲಿಗೆ ಕಳುಹಿಸಿತು ಎನ್ನಲಾಗಿದೆ. ತೆರಿಗೆ ಅಧಿಕಾರಿಗಳು ಪಕ್ಕದ ಅಂಗಡಿಯಲ್ಲಿ ನೆಲೆಯೂರಿ ದೈನಂದಿನ ಮಾರಾಟದ ಲೆಕ್ಕಾಚಾರ ಹಾಕಿದ್ದಾರೆ. 

ಈ ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆ ಮತ್ತು ಮಾರಾಟವಾದ ಆಹಾರ ಪದಾರ್ಥಗಳ ಸಂಖ್ಯೆಯನ್ನು ಆಧರಿಸಿ ಅವರ ಅಂದಾಜಿನ ಪ್ರಕಾರ - ಗಂಟೆಗೆ 50 ಪ್ಲೇಟ್‌ಗಳವರೆಗೆ ಎನ್ನುವಂತೆ , ಮುಖೇಶ್ ಅವರ ವಾರ್ಷಿಕ ವಹಿವಾಟು 1.50 ಕೋಟಿ ರೂ. ಎಂದು ಲೆಕ್ಕಾಚಾರ ಹಾಕಿದ್ದಾರೆ. ಮುಖೇಶ್ ತನ್ನ ಅಂಗಡಿಯನ್ನು ಜಿಎಸ್ಟಿ ಅಡಿಯಲ್ಲಿ ನೋಂದಾಯಿಸದ ಕಾರಣ ಮತ್ತು ಯಾವುದೇ ತೆರಿಗೆಯನ್ನು ಎಂದಿಗೂ ಪಾವತಿಸದ ಕಾರಣ, ಅವನಿಗೆ ಕೂಡಲೇ ನೋಟಿಸ್ ನೀಡಲಾಯಿತು ಎನ್ನಲಾಗಿದೆ.     

Trending News