ನಮ್ಮ ರಾಜ್ಯದ ಶಾಸಕರು ಆಗಿದ್ದಾಂಗೆ ದೇಶಾದ್ಯಂತ ಸುದ್ದಿಯಾಗ್ತಾರೆ.. ಈ ಬಾರಿ ಸುದ್ದಿಯಾಗಿರೋದು ತಾವು ಮಾಡಿದ ಆಸ್ತಿಯಿಂದ. ದೇಶದ 20 ಶ್ರೀಮಂತ ರಾಜಕಾರಣಿಗಳ ಪೈಕಿ ಆರು ಮಂದಿ ರಾಜ್ಯದ ಶಾಸಕರೇ ಅತೀ ಶ್ರೀಮಂತರು.
ಕರ್ನಾಟಕ ರಾಜ್ಯ ದೇಶದಲ್ಲಿ ಎಷ್ಟೋ ಮೊದಲುಗಳಿಗೆ ಸಾಕ್ಷಿಯಾಗಿದೆ. ನಮ್ಮ ರಾಜ್ಯದ ಶಾಸಕರು ದಾಖಲೆ ನಿರ್ಮಿಸಿದ್ದಾರೆ. ನಾವು ಆಯ್ಕೆ ಮಾಡಿರುವ ಶಾಸಕರು ದೇಶದಲ್ಲಿ ನಂಬರ್ ಒನ್ ಸ್ಥಾನದಲ್ಲಿ ನಿಂತಿದ್ದಾರೆ. ಅದು ಜನಪರ ಸೇವೆ, ಬಡವರ ಪರ ಕೆಲಸಗಳ ಮೂಲಕ ಮಾತ್ರವಲ್ಲದೆ, ತಾವು ಮಾಡಿರುವ ಸಂಪಾದನೆಯಿಂದಲೂ ದೇಶದಲ್ಲೇ ನಂಬರ್ ಒನ್ ಆಗಿದ್ದಾರೆ.
ಹೌದು, ದೇಶದಲ್ಲಿಯೇ ಕರ್ನಾಟಕ ಶಾಸಕರು ಶ್ರೀಮಂತರು. ನಾವು ವಿಧಾನಸಭೆಗೆ ಕಳುಹಿಸಿರುವ ಶಾಸಕರು ತಮ್ಮ ಜನರ ಕೆಲಸಮಾಡೊದ್ರಲ್ಲಿ ನಂಬರ್ ಒನ್ ಆಗಿದ್ದಾರೋ, ಇಲ್ವೋ ಆದ್ರೆ ವಾರ್ಷಿಕವಾಗಿ ತಾವು ಗಳಿಸುವ ಆದಾಯದಿಂದ ನಂಬರ್ ಒನ್ ಆಗಿ ಮಿಂಚುತಿದ್ದಾರೆ. ಹೀಗಂತಾ ಹೇಳ್ತಿದೆ ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ ಸಂಸ್ಥೆ ಮಾಡಿದ ಸರ್ವೆ ಮಾಹಿತಿ.
ದೇಶದ ಒಟ್ಟು ಶಾಸಕರ ಪೈಕಿ ಕರ್ನಾಟಕ ಶಾಸಕರೇ ಅತೀ ಶ್ರೀಮಂತರು. ರಾಜ್ಯದ ಒಟ್ಟು ಶಾಸಕರ ಸರಾಸರಿ ವಾರ್ಷಿಕ ಆದಾಯ 1 ಕೋಟಿ 11 ಲಕ್ಷ ರೂ. ಅಂದ್ರೆ ಕರ್ನಾಟಕದ ಶಾಸಕರು ದೇಶದಲ್ಲೇ ಅತೀ ಶ್ರೀಮಂತರು. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರದ ಶಾಸಕರು ನಿಲ್ಲಲಿದ್ದು ಅವರ ವಾರ್ಷಿಕ ಆದಾಯ 43.4 ಲಕ್ಷ ಎಂದು ಸರ್ವೇ ಮಾಹಿತಿ ಬಹಿರಂಗ ಪಡಿಸಿದೆ.
ADR ಸಂಸ್ಥೆಯ ಸರ್ವೆಯಲ್ಲಿ ಮತ್ತೊಂದು ಅಂಶ ಬಯಲಾಗಿದೆ. ದೇಶದ 20 ಅತೀ ಶ್ರೀಮಂತ ಶಾಸಕರ ಪೈಕಿ ರಾಜ್ಯದ 6 ಮಂದಿ ಸ್ಥಾನ ಪಡೆದಿದ್ದಾರೆ. ಆರು ಮಂದಿ ಶಾಸಕರ ಪೈಕಿ, ಕಾಂಗ್ರೆಸ್ ಪಕ್ಷದಿಂದ ಐದು ಮಂದಿ ಆಯ್ಕೆಯಾಗಿದ್ರೆ ಜೆಡಿಎಸ್ ಪಕ್ಷದಿಂದ ಆಯ್ಕೆಯಾದ ಒಬ್ಬರು ಶಾಸಕರಿದ್ದಾರೆ.
ದೇಶದ ಅತೀ ಶ್ರೀಮಂತ 20 ಶಾಸಕರಲ್ಲಿ ರಾಜ್ಯದವರ ಸ್ಥಾನ ಎಷ್ಟು ನೀವೆ ನೋಡಿ:
- 1 ನೇ ಸ್ಥಾನದಲ್ಲಿ ಎಂ.ಟಿ.ಬಿ ನಾಗರಾಜ್ ,ಹೊಸಕೋಟೆ(ಕಾಂಗ್ರೆಸ್)
- 3 ನೇ ಸ್ಥಾನದಲ್ಲಿ ಭೈರತಿ ಬಸವರಾಜ್ , ಕೆ.ಆರ್. ಪುರಂ(ಕಾಂಗ್ರೆಸ್)
- 11 ನೇ ಸ್ಥಾನದಲ್ಲಿ ಶಾಮನೂರು ಶಿವಶಂಕರಪ್ಪ , ದಾವಣಗೆರೆ(ಕಾಂಗ್ರೆಸ್)
- 13 ನೇ ಸ್ಥಾನದಲ್ಲಿ ಎನ್. ಎ ಹ್ಯಾರೀಸ್ ,ಶಾಂತಿನಗರ(ಕಾಂಗ್ರೆಸ್)
- 15 ನೇ ಸ್ಥಾನ ಸುಬ್ಬಾರೆಡ್ಡಿ ಬಾಗೆಪಲ್ಲಿ(ಕಾಂಗ್ರೆಸ್)
- 16 ನೇ ಸ್ಥಾನ ನಾರಾಯಣ ಗೌಡ ,ಕೆ.ಆರ್ ಪೇಟೆ (ಜೆಡಿಎಸ್)