Kumar Mangalam Birla : ಸಾಲದ ಸುಳಿಯಲ್ಲಿ ಬಿರ್ಲಾ : Vodafone Idea ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕುಮಾರ ಮಂಗಳಂ ಬಿರ್ಲಾ

ಆದಿತ್ಯ ಬಿರ್ಲಾ ಸಮೂಹದ ನಾಮನಿರ್ದೇಶಿತರಾದ ಹಿಮಾಂಶು ಕಪಾನಿಯಾ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ತಿಳಿಸಿದೆ.

Written by - Channabasava A Kashinakunti | Last Updated : Aug 4, 2021, 11:04 PM IST
  • ವೋಡಾಫೋನ್ ಐಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ
  • ಅಧ್ಯಕ್ಷ ಸ್ಥಾನದಿಂದ ಕುಮಾರ್ ಮಂಗಳಂ ಬಿರ್ಲಾ ಅವರು ಕೆಳಗಿಳಿದಿದ್ದಾರೆ
  • ಹಿಮಾಂಶು ಕಪಾನಿಯಾ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಕ
Kumar Mangalam Birla : ಸಾಲದ ಸುಳಿಯಲ್ಲಿ ಬಿರ್ಲಾ : Vodafone Idea ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕುಮಾರ ಮಂಗಳಂ ಬಿರ್ಲಾ title=

ಹೊಸದಿಲ್ಲಿ: ವೋಡಾಫೋನ್ ಐಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಕುಮಾರ್ ಮಂಗಳಂ ಬಿರ್ಲಾ ಅವರು ಕೆಳಗಿಳಿದಿದ್ದಾರೆ ಎಂದು ಕಂಪನಿ ಬುಧವಾರ ತಿಳಿಸಿದೆ. ಆದಿತ್ಯ ಬಿರ್ಲಾ ಸಮೂಹದ ನಾಮನಿರ್ದೇಶಿತರಾದ ಹಿಮಾಂಶು ಕಪಾನಿಯಾ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ತಿಳಿಸಿದೆ.

ಟೆಲಿಕಾಂ ಕ್ಷೇತ್ರದಲ್ಲಿ ವಿಐಎಲ್ ಕಂಪನಿ(Vodafone Idea) ತನ್ನ ನೆಲೆ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸಮಯದಲ್ಲಿ ಬದಲಾವಣೆಗಳು ಬೇಕಿತ್ತಾ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಒಂದು ಸಲ ನೋಡಿದ ಮೇಲೆ ಡಿಲೀಟ್ ಆಗಲಿದೆ ಫೋಟೋ : Whatsapp ತಂದಿದೆ ಹೊಸ ವೈಶಿಷ್ಟ್ಯ

"ವೊಡಾಫೋನ್ ಐಡಿಯಾದ ನಿರ್ದೇಶಕರ ಮಂಡಳಿಯು ಇಂದು ನಡೆದ ಸಭೆಯಲ್ಲಿ, ಕುಮಾರ್ ಮಂಗಳಂ ಬಿರ್ಲಾ(Kumar Mangalam Birla) ಅವರ ಮನವಿಯನ್ನು ಅಂಗೀಕರಿಸಿದ್ದು, 4 ಆಗಸ್ಟ್, 2021 ರ ಕೆಲಸದ ಸಮಯದಿಂದ ಜಾರಿಗೆ ಬರುವಂತೆ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು ಎಂದು ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ಹೇಳಿದೆ.

ಇದರ ಪರಿಣಾಮವಾಗಿ, ಮಂಡಳಿಯು "ನಾನ್-ಎಕ್ಸಿಕ್ಯುಟಿವ್ ಡೈರೆಕ್ಟರ್" ಆಗಿರುವ ಹಿಮಾಂಶು ಕಪಾನಿಯಾ(Himanshu Kapania) ಅವರನ್ನು "ಅವಿರೋಧವಾಗಿ ಆಯ್ಕೆ ಮಾಡಿದೆ" ಎಂದು ಕಂಪನಿಯು ಹೇಳಿದೆ.

ಕಪಾನಿಯಾ 25 ವರ್ಷಗಳ ಕಾಲ ಟೆಲಿಕಾಂ ಉದ್ಯಮ(Telecom Industry)ದಲ್ಲಿ ಅನುಭವ ಹೊಂದಿದ್ದು, ಕೆಲವು ಟೆಲಿಕಾಂ ಕಂಪನಿಗಳಲ್ಲಿ  ಡೈರೆಕ್ಟರ್ ಅನುಭವ ಹೊಂದಿದ್ದಾರೆ.

ಇದನ್ನೂ ಓದಿ : Jio Fiber New Feature: Jio Fiber ಬಳಕೆದಾರರಿಗಾಗಿ ಬಂದಿದೆ ಒಂದು ಹೊಸ ವೈಶಿಷ್ಟ್ಯ, ವೆಬ್ ಕ್ಯಾಮ್ ಇಲ್ಲದೆಯೇ TV ಪರದೆಯ ಮೂಲಕ ವಿಡಿಯೋ ಕಾಲ್

ಅವರು ಎರಡು ವರ್ಷಗಳ ಕಾಲ ಗ್ಲೋಬಲ್ ಜಿಎಸ್‌ಎಮ್‌ಎ ಬೋರ್ಡ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (COAI) ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.

ಇದಲ್ಲದೆ, ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸಿನ ಆಧಾರದ ಮೇಲೆ, ಮಂಡಳಿಯು ಆದಿತ್ಯ ಬಿರ್ಲಾ ಸಮೂಹದ ನಾಮನಿರ್ದೇಶಿತ ಸುಶೀಲ್ ಅಗರ್ವಾಲ್ ಅವರನ್ನು ಹೆಚ್ಚುವರಿ ನಿರ್ದೇಶಕರಾಗಿ (ಕಾರ್ಯನಿರ್ವಾಹಕೇತರ ಮತ್ತು ಸ್ವತಂತ್ರರಲ್ಲದವರು) 4 ಆಗಸ್ಟ್, 2021 ರಿಂದ ಜಾರಿಗೆ ಬರುವಂತೆ ನೇಮಿಸಿದೆ ಎಂದು ವಿಐಎಲ್ ಲಿಮಿಟೆಡ್ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News