Corona ನೆಪ ಹೇಳಿ ಮಹಿಳೆಯ ಖಾಸಗಿ ಅಂಗದ ಮೂಲಕ Swab Test, ಆರೋಪಿಗೆ 10 ವರ್ಷ ಜೈಲು ಶಿಕ್ಷೆ

Maharashtra Police  - ಕರೋನಾ ಸಾಂಕ್ರಾಮಿಕ (Corona Pandemic) ಕಾಲದಲ್ಲಿ ದೇಶಾದ್ಯಂತ ಇರುವ ಆರೋಗ್ಯ ಕಾರ್ಯಕರ್ತರು ಸಾಕಷ್ಟ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೆ ಇನ್ನೊಂದೆಡೆ ಕಲ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಿಂದಾಗಿ ಇಡೀ ಆರೋಗ್ಯ ಇಲಾಖೆಯೇ ತಲೆತಗ್ಗಿಸುವ ಪರಿಸ್ಥಿತಿ ಎದುರಾಗಿದೆ. 

Written by - Nitin Tabib | Last Updated : Feb 4, 2022, 05:30 PM IST
  • ಕೊರೊನಾ ಪರೀಕ್ಷೆಗಾಗಿ ಮಹಿಳೆಯ ಖಾಸಗಿ ಅಂಗದಿಂದ ಸ್ವಾಬ್ ಪಡೆದ ಲ್ಯಾಬ್ ತಂತ್ರಜ್ಞ.
  • ಕೊರೊನಾ ಕಾಲದಲ್ಲಿ ಮಹಾರಾಷ್ಟ್ರದ ಅಮರಾವತಿಯಲ್ಲೊಂದು ವಿಲಕ್ಷಣ ಘಟನೆ
  • ಆರೋಪಿಗೆ 10 ವರ್ಷ ಜೈಲು ಶಿಕ್ಷೆ, 10 ಸಾವಿರ ದಂಡ
Corona ನೆಪ ಹೇಳಿ ಮಹಿಳೆಯ ಖಾಸಗಿ ಅಂಗದ ಮೂಲಕ Swab Test, ಆರೋಪಿಗೆ 10 ವರ್ಷ ಜೈಲು ಶಿಕ್ಷೆ  title=
Corona Pandemic (Representational Image)

Maharashtra Police  - ಕರೋನಾ ಸಾಂಕ್ರಾಮಿಕ (Corona Pandemic) ಕಾಲದಲ್ಲಿ ದೇಶಾದ್ಯಂತ ಇರುವ ಆರೋಗ್ಯ ಕಾರ್ಯಕರ್ತರು ಸಾಕಷ್ಟ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೆ ಇನ್ನೊಂದೆಡೆ ಕಲ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಿಂದಾಗಿ ಇಡೀ ಆರೋಗ್ಯ ಇಲಾಖೆಯೇ ತಲೆತಗ್ಗಿಸುವ ಪರಿಸ್ಥಿತಿ ಎದುರಾಗಿದೆ. ಇಂತಹುದೇ ಒಂದು ಪ್ರಕರಣ ಮಹಾರಾಷ್ಟ್ರದ (Maharashtra) ಅಮರಾವತಿ ಜಿಲ್ಲೆಯಿಂದ ವರದಿಯಾಗಿದೆ. ಹೌದು, ಅಮರಾವತಿಯ (Amaravati)  ಲ್ಯಾಬ್ ಟೆಕ್ನಿಸಿಯನ್ ಓರ್ವ ಕರೋನಾ ಪರೀಕ್ಷೆಯ ನೆಪದಲ್ಲಿ ಮಹಿಳೆಯ ಖಾಸಗಿ ಅಂಗದಿಂದ ಸ್ವ್ಯಾಬ್ ಮಾದರಿಯನ್ನು ಪಡೆದುಕೊಂಡಿದ್ದಾನೆ.  ಈ ಲ್ಯಾಬ್ ತಂತ್ರಜ್ಞನಿಗೆ ಅಮರಾವತಿಯ ಸೆಷನ್ಸ್ ನ್ಯಾಯಾಲಯವು ಇದೀಗ 10 ವರ್ಷಗಳ ಕಠಿಣ ಶಿಕ್ಷೆ ಮತ್ತು ದಂಡವನ್ನು ವಿಧಿಸಿದೆ.

ಮಾಧ್ಯಮ ವರದಿಗಳ ಪ್ರಕಾರ ಜುಲೈ 20, 2020 ರಂದು ಅಮರಾವತಿಯ ಬಡನೆರಾ ಟ್ರಾಮಾ ಕೇರ್ ಯೂನಿಟ್ ನಲ್ಲಿ ಆರೋಪಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆರೋಪಿಯ ಈ ಕೃತ್ಯಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದ ರಾಜಕೀಯ ಪಕ್ಷಗಳು ಹಾಗೂ ಸಮಾಜ ಸೇವಾ ಸಂಘಟನೆಗಳು ವ್ಯಕ್ತಿಗೆ ಕಠಿಣ ಶಿಕ್ಷೆವಿಧಿಸುವಂತೆ ಆಗ್ರಹಿಸಿದ್ದರು.

ಸಂಪೂರ್ಣ ಪ್ರಕರಣ ಇಲ್ಲಿದೆ
ದೇಶದಲ್ಲಿ ಕೊರೊನಾ ಮಹಾಮಾರಿಯಿಂದ ಯಾರೂ ಅಸ್ಪೃಶ್ಯರಾಗಿ ಉಳಿದಿಲ್ಲ. ಅಷ್ಟೇ ಯಾಕೆ ಈ ಮಹಾಮಾರಿಯ ಸಂದರ್ಭದಲ್ಲಿ ಮಹಾರಾಷ್ಟ್ರವು ದೇಶದಲ್ಲೇ ಹೆಚ್ಚು ತೊಂದರೆ ಅನುಭವಿಸಿದ ರಾಜ್ಯವಾಗಿದೆ. ಮೊದಲ ಅಲೆಯ ಸಮಯದಲ್ಲಿ, ರಾಜ್ಯದ ಅಮರಾವತಿಯಲ್ಲಿ ಮಾಲ್ ಉದ್ಯೋಗಿಯೊಬ್ಬರು COVID-19 ಪರೀಕ್ಷೆಗೆ ಧನಾತ್ಮಕ ಪ್ರತಿಕ್ರಿಯೆ ನೀಡಿದ್ದರು. ಇದಾದ ನಂತರ ಮಾಲ್‌ನ ಎಲ್ಲಾ ಉದ್ಯೋಗಿಗಳಿಗೆ ಕೋವಿಡ್ ಪರೀಕ್ಷೆಗೆ (Corona Swab Test) ಕರೆಯಿಸಲಾಗಿತ್ತು. ಏತನ್ಮಧ್ಯೆ, ಲ್ಯಾಬ್ ಟೆಕ್ನಿಷಿಯನ್ ಅಲ್ಕೇಶ್ ದೇಶಮುಖ್ ಅವರು ಮಹಿಳಾ ಉದ್ಯೋಗಿಯನ್ನು (ದೂರುದಾರರು) ತಪ್ಪುದಾರಿಗೆಳೆಯುತ್ತಾರೆ, ಅವರ ವರದಿಯು ಸಕಾರಾತ್ಮಕವಾಗಿದೆ ಮತ್ತು ಅವರು ಇನ್ನೂ ಒಂದು ಪರೀಕ್ಷೆಗಾಗಿ ಲ್ಯಾಬ್‌ಗೆ ಬರಬೇಕಾಗುತ್ತದೆ ಎಂದು ಹೇಳುತ್ತಾರೆ. ಮಹಿಳೆಯ ಖಾಸಗಿ ಭಾಗದಿಂದ ಸ್ವ್ಯಾಬ್ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಇದಾದ ನಂತರ ದೇಶಮುಖ್ ಮಹಿಳೆಯ ಖಾಸಗಿ ಭಾಗದಿಂದ ಸ್ವ್ಯಾಬ್ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ-Rashmika ಗೆ ಟ್ರೋಲ್‌ ಕಾಟ..! ʼಲೆಜೆಂಡ್‌ʼ ಬಾಯಲ್ಲಿ ಕನ್ನಡ ಕವನ..!

ಸಹೋದರನಿಗೆ ಮಾಹಿತಿ ಮೀಡಿದ ಮಹಿಳೆ
ಮನೆಗೆ ಹಿಂದಿರುಗಿದ ಮಹಿಳೆ ನಡೆದ ಎಲ್ಲಾ ಘಟನೆಯನ್ನು ತನ್ನ ಸಹೋದರನಿಗೆ ಹೇಳಿಕೊಂಡಿದ್ದಾಳೆ. ಬಳಿಕ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದಾಗ, ಈ ರೀತಿ ಯಾವುದೇ ಸ್ವಾಬ್ ಟೆಸ್ಟ್ ನಡೆಸಲಾಗುವುದಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಬಡನೆರಾ ಪೊಲೀಸ್ ಸ್ಟೇಷನ್ ನಲ್ಲಿ ಲ್ಯಾಬ್ ಟೆಕ್ನಿಶಿಯನ್ ಹೆಸರಿನಲ್ಲಿ ದೂರು ದಾಖಲಿಸಿದ್ದಾಳೆ.

ಇದನ್ನೂ ಓದಿ-ಕೇಂದ್ರ ನೌಕರರಿಗೆ ಕಾದಿದೆ ಅದೃಷ್ಟ : DA ಹೆಚ್ಚಳದ ಜೊತೆ ಸಿಗಲಿದೆ ₹2,32,152 - ಲೆಕ್ಕಾಚಾರ ನೋಡಿ

ನಂತರ ಈ ಪರಕರಣ ಅಮರಾವತಿಯ ಸೆಷನ್ಸ್ ಕೋರ್ಟ್ ತಲುಪಿದ್ದು, ಒಂದೂವರೆ ವರ್ಷಗಳ ವಿಚಾರಣೆಯ ಬಳಿಕ ಕೊನೆಗೆ ಮಹಿಳೆಗೆ ನ್ಯಾಯ ಸಿಕ್ಕಿದೆ. ಆರೋಪಿ ದೇಶ್ಮುಖ್ ಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ.ದಂಡ ವಿಧಿಸಿದೆ. 

ಇದನ್ನೂ ಓದಿ-Pots Office ಈ ಯೋಜನೆಯಲ್ಲಿ ₹150 ಉಳಿತಾಯ ಮಾಡಿ ₹20 ಲಕ್ಷ ಲಾಭ ಪಡೆಯಿರಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News