Best Captain: ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರು ಶ್ರೇಷ್ಠ ನಾಯಕ..?

ಭಾರತದ ಮಾಜಿ ಬ್ಯಾಟ್ಸ್‌ ಮನ್ ಸಂಜಯ್ ಮಂಜ್ರೇಕರ್ ಅವರು ವಿರಾಟ್ ಕೊಹ್ಲಿಯನ್ನು ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಉಳಿಸಿಕೊಂಡಿಲ್ಲ. ಇದಕ್ಕೆ ಕಾರಣವನ್ನೂ ಮಂಜ್ರೇಕರ್ ನೀಡಿದ್ದಾರೆ. ಭಾರತದ ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಅಗ್ರಸ್ಥಾನದಲ್ಲಿ ಇಡಬೇಕು ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

Written by - Puttaraj K Alur | Last Updated : Jan 31, 2022, 11:40 AM IST
  • ಅತ್ಯುತ್ತಮ ನಾಯಕರ ಪಟ್ಟಿಯಿಂದ ವಿರಾಟ್ ಕೊಹ್ಲಿ ಹೊರಬಿದ್ದಿದ್ದಾರೆ
  • ಟೀಂ ಇಂಡಿಯಾದ ಯಾರು ಶ್ರೇಷ್ಠ ನಾಯಕ ಎಂದು ಮಂಜ್ರೇಕರ್ ಹೇಳಿದ್ದಾರೆ
  • ಕಿಂಗ್ ಕೊಹ್ಲಿಯವರ ವರ್ತನೆಯನ್ನು ಸಂಜಯ್ ಮಂಜ್ರೇಕರ್ ಶ್ಲಾಘಿಸಿದ್ದಾರೆ
Best Captain: ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರು ಶ್ರೇಷ್ಠ ನಾಯಕ..? title=
ಅತ್ಯುತ್ತಮ ನಾಯಕರ ಪಟ್ಟಿಯಿಂದ ಹೊರಬಿದ್ದ ಕೊಹ್ಲಿ!

ನವದೆಹಲಿ: ಟೀಂ ಇಂಡಿಯಾದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ(Virat Kohli) ಇತ್ತೀಚೆಗೆ ನಾಯಕತ್ವಕ್ಕೆ ರಾಜೀನಾಮೆ ನೀಡುವ ಮೂಲಕ ವಿಶ್ವ ಕ್ರಿಕೆಟ್‌ಗೆ ಅಚ್ಚರಿ ಮೂಡಿಸಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್‌ ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಇದರ ಹೊರತಾಗಿಯೂ ಭಾರತದ ಮಾಜಿ ಬ್ಯಾಟ್ಸ್‌ ಮನ್ ಸಂಜಯ್ ಮಂಜ್ರೇಕರ್(Sanjay Manjrekar) ವಿರಾಟ್ ಕೊಹ್ಲಿಯನ್ನು ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಉಳಿಸಿಕೊಂಡಿಲ್ಲ. ಇದಕ್ಕೆ ಕಾರಣವನ್ನೂ ಮಂಜ್ರೇಕರ್ ನೀಡಿದ್ದಾರೆ.

ಅತ್ಯುತ್ತಮ ನಾಯಕರ ಪಟ್ಟಿಯಿಂದ ಹೊರಬಿದ್ದ ಕೊಹ್ಲಿ!

ಭಾರತದ ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ(MS Dhoni) ಅವರನ್ನು ಅಗ್ರಸ್ಥಾನದಲ್ಲಿ(Most Successful ODI Captain) ಇಡಬೇಕು ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ಇಲ್ಲಿವರೆಗೆ ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕರ ಬಗ್ಗೆ ಮಾತನಾಡಿರುವ ಮಂಜ್ರೇಕರ್, ಕಪಿಲ್ ದೇವ್ ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟು ಇತಿಹಾಸ ನಿರ್ಮಿಸಿದರು. ಸೌರವ್ ಗಂಗೂಲಿ(Sourav Ganguly) ಮ್ಯಾಚ್ ಫಿಕ್ಸಿಂಗ್ ನಂತರ ತಂಡವನ್ನು ಅದ್ಭುತವಾಗಿ ಮುನ್ನಡೆಸಿದರು. ಸುನಿಲ್ ಗವಾಸ್ಕರ್ ಅವರ ನಾಯಕತ್ವವನ್ನು ಕೂಡ ಮಾಂಜ್ರೇಕರ್ ಕೊಂಡಾಡಿದ್ದಾರೆ.  

ಇದನ್ನೂ ಓದಿ: U19 World Cup ಸ್ಕೋರ್ ಕಾರ್ಡ್ ನಲ್ಲಿ ಕಂಡ Vicky Kaushal ಹೆಸರು!

ಶ್ರೇಷ್ಠ ನಾಯಕ ಯಾರು..?

ಸಂದರ್ಶನದಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರಿಗೆ ಭಾರತ ತಂಡದ ನಾಯಕತ್ವ(India ODI Captain) ವಹಿಸಿರುವ ಶ್ರೇಷ್ಠ ಆಟಗಾರರ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿರುವ ಮಂಜ್ರೇಕರ್, ‘ನಾವು ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಬಗ್ಗೆ ಮಾತನಾಡುವಾಗ ಎಂ.ಎಸ್.ಧೋನಿ ಹೆಸರು ತೆಗೆದುಕೊಳ್ಳದಿದ್ದರೆ ಅನ್ಯಾಯವಾಗುತ್ತದೆ’ ಅಂತಾ ಹೇಳಿದ್ದಾರೆ.

ವಿಶ್ವ ಮಟ್ಟದಲ್ಲಿ ಟೀಂ ಇಂಡಿಯಾಗೆ ಇದ್ದ ಕೀಳರಿಮೆ ಮನೋಭಾವನೆಯನ್ನು ಕಪಿಲ್ ದೇವ್ ತೊಡೆದುಹಾಕಿದರು. ಮ್ಯಾಚ್ ಫಿಕ್ಸಿಂಗ್ ಭೂತದ ನಂತರ ಸೌರವ್ ಗಂಗೂಲಿ ಭಾರತಕ್ಕೆ ಹಲವು ವಿದೇಶಿ ಸರಣಿ ಗೆದ್ದುಕೊಟ್ಟ ಸಾಧನೆ ಮಾಡಿದರು. ಸುನಿಲ್ ಗವಾಸ್ಕರ್(Sunil Gavaskar) ಕೂಡ ಅದ್ಭುತ ನಾಯಕತ್ವವನ್ನು ತಂಡಕ್ಕೆ ನೀಡಿದರು. ಎಂ.ಎಸ್.ಧೋನಿ ಟೀಂ ಇಂಡಿಯಾಗೆ ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟರು. ವಿರಾಟ್ ಕೊಹ್ಲಿ ಕೂಡ ಉತ್ತಮ ನಾಯಕ. ಆದರೆ ವಿರಾಟ್ ಗಿಂತಲೂ ಇವರೆಲ್ಲ ಮಹಾನ್ ನಾಯಕರು ಅಂತಾ ನಾನು ನಂಬುತ್ತೇನೆ. ಇವರು ತಮ್ಮದೇ ಆದ ರೀತಿಯಲ್ಲಿ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ ಅಂತಾ ಅವರು ಹೇಳಿದ್ದಾರೆ.   

ಇದನ್ನೂ ಓದಿ: Australian Open: ರಾಫೆಲ್ ನಡಾಲ್ ವಿಶ್ವದಾಖಲೆಯ ಸಾಧನೆ ಬಗ್ಗೆ ಫೆಡರರ್ ಮೆಚ್ಚುಗೆ

ಕೊಹ್ಲಿ ವರ್ತನೆ ಬಗ್ಗೆ ದೊಡ್ಡ ಹೇಳಿಕೆ

ಇದಾದ ನಂತರ ಸಂಜಯ್ ಮಂಜ್ರೇಕರ್ ಅವರು ವಿರಾಟ್ ಕೊಹ್ಲಿ(Virat Kohli)ಯ ವರ್ತನೆಯನ್ನು ಶ್ಲಾಘಿಸಿದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವನ್ನು ಉಲ್ಲೇಖಿಸಿದ ಮಂಜ್ರೇಕರ್, ಟೀಂ ಇಂಡಿಯಾ ಫೈನಲ್‌ನಲ್ಲಿ ಸೋತರೂ ಕೊನೆಯವರೆಗೂ ಹೋರಾಡುವ ಮನೋಭಾವ ವಿರಾಟ್ ಕೊಹ್ಲಿಯಿಂದ ಬಂದಿದೆ ಅಂತಾ ಹೇಳಿದರು. ‘ನೀವು ಕೊಹ್ಲಿಯನ್ನು ನೋಡುವಾಗ ಅವರ ಬಗ್ಗೆ ಇಷ್ಟಪಡುವ ಬಹಳಷ್ಟು ವಿಷಯಗಳಿವೆ. ಏಕೆಂದರೆ ಅವರು ತಮ್ಮದೇಯಾದ ಮಾದರಿಯಿಂದ ತಂಡವನ್ನು ಮುನ್ನಡೆಸುವ ವ್ಯಕ್ತಿಯಾಗಿದ್ದಾರೆ. ವಿರಾಟ್ ಭಾರತದ ನೈತಿಕತೆಯನ್ನು ಹೆಚ್ಚಿಸಿದ್ದಾರೆ’ ಅಂತಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News