5 State Assembly Election Results: ಉತ್ತರಪ್ರದೇಶದಲ್ಲಿ ಯೋಗಿ, ಮೋದಿ ಕಮಾಲ್, ಪಂಜಾಬ್​​ನಲ್ಲಿ AAP ಆರ್ಭಟ!

ಇಡೀ ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ತಾಜಾ ಮಾಹಿತಿ ಇಲ್ಲಿದೆ. 

Written by - Zee Kannada News Desk | Last Updated : Mar 10, 2022, 04:32 PM IST
5 State Assembly Election Results: ಉತ್ತರಪ್ರದೇಶದಲ್ಲಿ ಯೋಗಿ, ಮೋದಿ ಕಮಾಲ್, ಪಂಜಾಬ್​​ನಲ್ಲಿ AAP ಆರ್ಭಟ!
Live Blog

ಬಹುನಿರೀಕ್ಷಿತ ‘ಪಂಚ’ ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು, ಐದೂ ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ ಎಂಬುದರ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಮತದಾರ ಪ್ರಭು ಯಾರಿಗೆ ಆಶೀರ್ವಾದ ಮಾಡಿದ್ದಾನೆಂಬುದು ಇಂದು ತಿಳಿದುಬರಲಿದೆ. ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ತಾಜಾ ಮಾಹಿತಿಯನ್ನು ನಾವು ಇಲ್ಲಿ ನಿಮಗೆ ನೀಡಲಿದ್ದೇವೆ.

10 March, 2022

  • 16:27 PM

    ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಗೋವಾ ಮತ್ತು ಮಣಿಪುರದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಇದೀಗ ಅಲ್ಲಿಯೂ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದೆ. ಪಂಜಾಬ್ ನಲ್ಲಿ AAP ಆರ್ಭಟಕ್ಕೆ ಕಾಂಗ್ರೆಸ್ ಧೂಳಿಪಟವಾಗಿದೆ. ಹಾಲಿ ಮಾಜಿ ಸಿಎಂಗಳೇ ಸೋತು ಸುಣ್ಣವಾಗಿದ್ದಾರೆ. ಮತದಾರ ಪ್ರಭು ಕಾಂಗ್ರೆಸ್‍ ಪಕ್ಷಕ್ಕೆ ‘ಕೈ’ ಕೊಟ್ಟಿದ್ದು, ಆಪ್ ಗೆ ಜೈ ಎಂದಿದ್ದಾನೆ. ಸಾಯಂಕಾಲ 4.30ರ ಮಾಹಿತಿ ಪ್ರಕಾರ ‘ಪಂಚ’ ರಾಜ್ಯಗಳ ಫಲಿತಾಂಶ ಇಂತಿದೆ ನೋಡಿ.

    ಉತ್ತರ ಪ್ರದೇಶ ಒಟ್ಟು ಸ್ಥಾನಗಳು - 403

    (ಮ್ಯಾಜಿಕ್ ನಂಬರ್ - 202)

    ಬಿಜೆಪಿ+ - 268

    ಎಸ್​ಪಿ+ - 130

    ಬಿಎಸ್​ಪಿ - 01

    ಕಾಂಗ್ರೆಸ್ - 02

    ಇತರರು  - 02

    ಉತ್ತರಾಖಂಡ ಒಟ್ಟು ಸ್ಥಾನಗಳು - 70

    (ಮ್ಯಾಜಿಕ್ ನಂಬರ್ -36)

    ಬಿಜೆಪಿ - 48

    ಕಾಂಗ್ರೆಸ್ – 18

    BSP - 02

    ಇತರರು – 02

    ಗೋವಾ ಒಟ್ಟು ಕ್ಷೇತ್ರಗಳು - 40

    (ಮ್ಯಾಜಿಕ್ ನಂಬರ್ - 21)

    ಬಿಜೆಪಿ - 19

    ಕಾಂಗ್ರೆಸ್+ - 12

    MGP+ - 03

    AAP - 02

    ಇತರರು - 04

    ಪಂಜಾಬ್​​ ಒಟ್ಟು ಕ್ಷೇತ್ರಗಳು - 117

    (ಮ್ಯಾಜಿಕ್ ನಂಬರ್ - 59)

    AAP - 92

    ಕಾಂಗ್ರೆಸ್ - 18

    SAD+ - 04

    ಬಿಜೆಪಿ+ - 02

    ಇತರರು - 01

    ಮಣಿಪುರ ಒಟ್ಟು ಕ್ಷೇತ್ರಗಳು - 60

    (ಮ್ಯಾಜಿಕ್ ನಂಬರ್ - 21)

    ಬಿಜೆಪಿ - 28

    ಕಾಂಗ್ರೆಸ್+ - 04

    NPE - 05

    NPEP - 07

    ಇತರರು - 11

  • 16:11 PM

    ಭಗತ್ ಸಿಂಗ್ ಗ್ರಾಮದಲ್ಲಿ ಭಗವಂತ್ ಮಾನ್ ಪ್ರಮಾಣ ವಚನ

    ಬರೋಬ್ಬರಿ 58,206 ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ ಭಗತ್ ಸಿಂಗ್ ಮಾನ್ ಅವರು ಪಂಜಾಬ್ ನ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನ ಸಮಾರಂಭವನ್ನು ರಾಜಭವನದಲ್ಲಿ ಆಯೋಜಿಸುವುದು ವಾಡಿಕೆ. ಆದರೆ ತಾವು ಭಗತ್ ಸಿಂಗ್ ಅವರ ಗ್ರಾಮ ಖಟ್ಕರ್‌ಕಾಲನ್‌ನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆಂದು ಭಗತ್ ಸಿಂಗ್ ಮಾನ್ ಹೇಳಿದ್ದಾರೆ.

  • 15:48 PM

    ಜನರ ತೀರ್ಪಿಗೆ ತಲೆಬಾಗಿದ ರಾಹುಲ್ ಗಾಂಧಿ

    ಕಾಂಗ್ರೆಸ್ ಪಕ್ಷವು ಎಲ್ಲಾ ಐದು ರಾಜ್ಯಗಳಲ್ಲಿ ಸೋಲು ಕಂಡ ನಂತರ ರಾಹುಲ್ ಗಾಂಧಿ ಜನರ ತೀರ್ಪಿಗೆ ತಲೆಬಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಪಂಚ ರಾಜ್ಯಗಳ ಚುನಾವಣೆಯಲ್ಲಿ ಜನರ ತೀರ್ಪನ್ನು ನಾವು ನಮ್ರತೆಯಿಂದ ಒಪ್ಪಿಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ.

  • 15:09 PM

    ಸೋತು ಸುಣ್ಣವಾದ ಮಾಜಿ ಸಿಎಂಗಳು..!

    ಪಂಜಾಬ್ ನಲ್ಲಿ AAP ಆರ್ಭಟದ ಎದುರು ಕಾಂಗ್ರೆಸ್ ಧೂಳಿಪಟವಾಗಿದೆ. ಕಾಂಗ್ರೆಸ್ ನ ಘಟಾನುಘಟಿ ನಾಯಕರೇ ಸೋತು ಸುಣ್ಣವಾಗಿದ್ದು, ಭಾರಿ ಮುಖಭಂಗ ಅನುಭವಿಸಿದ್ದಾರೆ. ಪಟಿಯಾಲ ಕ್ಷೇತ್ರದಿಂದ ಸ್ಪರ್ಧಿಸಿದ್ದ 2 ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಅಮರೀಂದರ್ ಸಿಂಗ್ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಆಪ್​ನ ಅಜಿತ್ ಪಾಲ್ ಸಿಂಗ್ ಕೊಹ್ಲಿ ವಿರುದ್ಧ ಸೋಲು ಕಂಡಿದ್ದಾರೆ. ಇತ್ತೀಚೆಗಷ್ಟೇ ಪಂಜಾಬ್ ಸಿಎಂ ಆಗಿದ್ದ ಚರಣ್​ಜಿತ್ ಸಿಂಗ್ ಚನ್ನಿ ಕೂಡ ಸ್ಪರ್ಧಿಸಿದ್ದ ಬದೌರ್, ಚಮ್ಕೌರ್​ ಸೇರಿ ಎರಡೂ ಸೋಲು ಕಂಡಿದ್ದಾರೆ. ಅಮೃತಸರದಿಂದ ಸ್ಪರ್ಧಿಸಿದ್ದ ನವಜೋತ್ ಸಿಂಗ್ ಸಿಧು ಕೂಡ ಪರವಾಭವಗೊಂಡಿದ್ದು, ‘ಕೈ’ ಪಕ್ಷಕ್ಕೆ ದೊಡ್ಡ ಆಘಾತವುಂಟಾಗಿದೆ.

  • 14:49 PM

    ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಗೋವಾ ಮತ್ತು ಮಣಿಪುರದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಇದೀಗ ಅಲ್ಲಿಯೂ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದೆ. ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿ ಕಮಾಲ್ ಮಾಡಿದ್ದಾರೆ. ಪಂಜಾಬ್ ನಲ್ಲಿ AAP ಆರ್ಭಟಕ್ಕೆ ಕಾಂಗ್ರೆಸ್ ಧೂಳಿಪಟವಾಗಿದೆ. ಮಧ್ಯಾಹ್ನ 3 ಗಂಟೆಯ ಮಾಹಿತಿ ಪ್ರಕಾರ ‘ಪಂಚ’ ರಾಜ್ಯಗಳ ಫಲಿತಾಂಶ ಇಂತಿದೆ ನೋಡಿ.

    ಉತ್ತರ ಪ್ರದೇಶ ಒಟ್ಟು ಸ್ಥಾನಗಳು - 403

    ಬಿಜೆಪಿ+ - 264

    ಎಸ್​ಪಿ+ - 134

    ಬಿಎಸ್​ಪಿ - 01

    ಕಾಂಗ್ರೆಸ್ - 02

    ಇತರರು  - 02

    ಉತ್ತರಾಖಂಡ ಒಟ್ಟು ಸ್ಥಾನಗಳು - 70

    ಬಿಜೆಪಿ - 48

    ಕಾಂಗ್ರೆಸ್ – 17

    BSP - 02

    ಇತರರು – 03

    ಗೋವಾ ಒಟ್ಟು ಕ್ಷೇತ್ರಗಳು - 40

    ಬಿಜೆಪಿ - 19

    ಕಾಂಗ್ರೆಸ್+ - 12

    MGP+ - 03

    AAP - 02

    ಇತರರು - 04

    ಪಂಜಾಬ್​​ ಒಟ್ಟು ಕ್ಷೇತ್ರಗಳು - 117

    AAP - 91

    ಕಾಂಗ್ರೆಸ್ - 19

    SAD+ - 04

    ಬಿಜೆಪಿ+ - 02

    ಇತರರು - 01

    ಮಣಿಪುರ ಒಟ್ಟು ಕ್ಷೇತ್ರಗಳು - 60

    ಬಿಜೆಪಿ - 23

    ಕಾಂಗ್ರೆಸ್+ - 04

    NPE - 05

    NPEP - 6

    ಇತರರು - 07

  • 14:41 PM

    ಹನುಮಾನ್ ಟೆಂಪಲ್ ಗೆ ಕೇಜ್ರಿವಾಲ್ ಭೇಟಿ

    ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷವು ಭರ್ಜರಿ ಗೆಲುವು ಸಾಧಿಸಿದ್ದಕ್ಕೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಖುಷಿ ವ್ಯಕ್ತಪಡಿಸಿದ್ದಾರೆ. ದೆಹಲಿಯ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ ಕೇಜ್ರಿವಾಲ್ ವಿಶೇಷ ಪೂಜೆ ನೇರವೇರಿಸಿದರು. ಪಂಜಾಬ್ ನಲ್ಲಿ ಪಕ್ಷಕ್ಕೆ ಬೆಂಬಲ ನೀಡಿದ ಮತದಾರರಿಗೆ ಇದೇ ವೇಳೆ ಕೇಜ್ರಿವಾಲ್ ಧನ್ಯವಾದ ಸಮರ್ಪಿಸಿದರು.

     

     

  • 14:38 PM

    ಬುಲ್ಡೋಜರ್ ನಲ್ಲಿ ಬಂದು ಕಾರ್ಯಕರ್ತರ ಸಂಭ್ರಮಾಚರಣೆ

    ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿಗೆ ಗೆಲುವು ಸಾಧಿಸಿದೆ. ಈ ಹಿನ್ನೆಲೆ ಪಕ್ಷದ ಕಾರ್ಯಕರ್ತರು ನೂರಾರು ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಬುಲ್ಡೋಜರ್ ನಲ್ಲಿ ಬಂದ ಕೆಲ ಕಾರ್ಯಕರ್ತರು ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆಥಿತ್ಯನಾಥ್ ಪರ ಘೋಷಣೆ ಕೂಗಿ ಸಂಭ್ರಮಿಸಿದರು.  

     

  • 14:32 PM

    ಬುಲ್ಡೋಜರ್ ಸಮೇತ ಬಂದ ಪುಠಾಣಿ ಯೋಗಿ

    ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ. ಈ ಹಿನ್ನೆಲೆ ಒಂದೂವರೆ ವರ್ಷದ ಪುಠಾಣಿ ಮಗುವೊಂದು ಯೋಗಿ ಆದಿತ್ಯನಾಥ್ ವೇಷ ಧರಿಸಿ, ಕೈಯಲ್ಲಿ ಬುಲ್ಡೋಜರ್ ಹಿಡಿದುಕೊಂಡು ಬಿಜೆಪಿ ಕಚೇರಿಗೆ ಆಗಮಿಸಿದ್ದು ಗಮನ ಸೆಳೆಯಿತು.

     

  • 13:52 PM

    ತಾಯಿ ಜೊತೆಗೆ ಸಂಭ್ರಮಿಸಿದ ಪಂಜಾಬ್ ಸಿಎಂ ಅಭ್ಯರ್ಥಿ

    ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರು ಸಂಗ್ರೂರ್‌ನಲ್ಲಿರುವ ತಮ್ಮ ನಿವಾಸದಲ್ಲಿ ತಾಯಿ ಜೊತೆಗೆ ಸಂಭ್ರಮಿಸಿದರು. ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದ ಭಗವಂತ್ ಮಾನ್‌ ಪಂಜಾಬ್ ಸಿಎಂ ಆಗುವ ಮಟ್ಟಕ್ಕೆ ಬೆಳೆದಿರುವುದನ್ನು ನೆನೆದು ಅವರ ತಾಯಿ ಆನಂದಭಾಷ್ಪ ಸುರಿಸಿದರು. ಈ ವೇಳೆ ಪುತ್ರನನ್ನು ಅಪ್ಪಿ ಆಶೀರ್ವಾದ ಮಾಡಿದರು. ಪಂಜಾಬ್ ನಲ್ಲಿ ತಮ್ಮ ಪಕ್ಷವನ್ನು ಬೆಂಬಲಿಸಿದ ಜನರಿಗೆ ಧನ್ಯವಾದ ತಿಳಿಸಿದ ಭಗವಂತ್ ಮಾನ್ ಅವರು ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಅಭಿನಂದಿಸಿದರು. ಸದ್ಯದ ಟ್ರೆಂಡ್‌ ಪ್ರಕಾರ ಮಾನ್ ಅವರು ಧುರಿ ಕ್ಷೇತ್ರದಲ್ಲಿ 55 ಸಾವಿರ ಮತಗಳಿಂದ ಮುನ್ನಡೆಯಲ್ಲಿದ್ದಾರೆಂದು ತಿಳಿದುಬಂದಿದೆ.

  • 13:43 PM

    ಜನರಿಗೆ ಲಾಡು ವಿತರಿಸಲು ಬಿಜೆಪಿ ಸಿದ್ಧತೆ

    ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಪಕ್ಷವು ಭರ್ಜರಿ ಮುನ್ನಡೆ ಸಾಧಿಸಿ ಗೆಲುವಿನತ್ತ ಮುಖ ಮಾಡಿದೆ. ಈ ಹಿನ್ನೆಲೆ ಮುಂಬೈನಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಗೆಲುವಿನ ವಿಜಯೋತ್ಸವದ ಅಂಗವಾಗಿ ಜನೆರಿಗೆ ವಿತರಿಸಲು ಲಾಡುಗಳನ್ನು ತಯಾರಿಸುತ್ತಿರುವ ದೃಶ್ಯ ಕಂಡುಬಂದಿದ್ದು ಹೀಗೆ.  

  • 13:39 PM

    ಕಾಂಗ್ರೆಸ್ ಜನರಿಗೆ ಸುಳ್ಳು ಭರವಸೆ ನೀಡಿದೆ

    ಕಾಂಗ್ರೆಸ್ ಜನರಿಗೆ ಸುಳ್ಳು ಭರವಸೆ ನೀಡಿದರೆ, ಬಿಜೆಪಿ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಹೀಗಾಗಿ ಜನರು ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ. ಸ್ಪಷ್ಟ ಫಲಿತಾಂಶ ಹೊರಬಿದ್ದ ನಂತರ ನಮ್ಮ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.  ನಂತರ ನಾವು ಸಿಎಂ ಆಯ್ಕೆಯನ್ನು ನಿರ್ಧರಿಸುತ್ತೇವೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ದಾರೆ.    

  • 13:31 PM

    ನಾಲ್ಕು ರಾಜ್ಯಗಳಲ್ಲಿ ಸರ್ಕಾರ ರಚಿಸಲು ಬಿಜೆಪಿ ಸಿದ್ಧತೆ

    ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಿಚ್ಚಳ ಬಹುಮತ ಪಡೆದುಕೊಂಡಿರುವ ಬಿಜೆಪಿ 4 ರಾಜ್ಯಗಳಲ್ಲಿ ಸರ್ಕಾರ ರಚಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಉತ್ತರಪ್ರದೇಶ, ಉತ್ತರಾಖಂಡದಲ್ಲಿ ಮ್ಯಾಜಿಕ್ ನಂಬರ್ ದಾಟಿರುವ ‘ಕಮಲ’ ಪಕ್ಷವು ಗೋವಾ ಮತ್ತು ಮಣಿಪುರದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾಗಿ ಹೊರಹೊಮ್ಮಿದೆ. ಉತ್ತರಪ್ರದೇಶ, ಉತ್ತರಾಖಂಡ ಜೊತೆಗೆ ಗೋಮಾ ಮತ್ತು ಮಣಿಪುರದಲ್ಲಿಯೂ ಸರ್ಕಾರ ರಚಿಸಲು ‘ಕಮಲ’ ಪಕ್ಷ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಮಧ್ಯಾಹ್ನ 1.30ರ ಮಾಹಿತಿ ಪ್ರಕಾರ ‘ಪಂಚ’ ರಾಜ್ಯಗಳ ಫಲಿತಾಂಶ ಇಂತಿದೆ ನೋಡಿ.

    ಉತ್ತರ ಪ್ರದೇಶ ಒಟ್ಟು ಸ್ಥಾನಗಳು - 403

    ಬಿಜೆಪಿ+ - 271

    ಎಸ್​ಪಿ+ - 123

    ಬಿಎಸ್​ಪಿ - 03

    ಕಾಂಗ್ರೆಸ್ - 03

    ಇತರರು  - 03

    ಉತ್ತರಾಖಂಡ ಒಟ್ಟು ಸ್ಥಾನಗಳು - 70

    ಬಿಜೆಪಿ - 43

    ಕಾಂಗ್ರೆಸ್ – 24

    BSP - 01

    ಇತರರು – 02

    ಗೋವಾ ಒಟ್ಟು ಕ್ಷೇತ್ರಗಳು - 40

    ಬಿಜೆಪಿ - 18

    ಕಾಂಗ್ರೆಸ್+ - 12

    MGP+ - 04

    AAP - 02

    ಇತರರು - 04

    ಪಂಜಾಬ್​​ ಒಟ್ಟು ಕ್ಷೇತ್ರಗಳು - 117

    AAP - 91

    ಕಾಂಗ್ರೆಸ್ - 17

    SAD+ - 06

    ಬಿಜೆಪಿ+ - 02

    ಇತರರು - 01

    ಮಣಿಪುರ ಒಟ್ಟು ಕ್ಷೇತ್ರಗಳು - 60

    ಬಿಜೆಪಿ - 23

    ಕಾಂಗ್ರೆಸ್+ - 02

    NPE - 06

    NPEP - 6

    ಇತರರು - 05

  • 13:21 PM

    ಬುಲ್ಡೋಜರ್ ಮುಂದೆ ಸೈಕಲ್ ಆಟ ನಡೆಯುವುದಿಲ್ಲ!

    ಉತ್ತರ ಪ್ರದೇಶದಲ್ಲಿ ನಮ್ಮದೇ ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಎಂದು ನಮಗೆ ಮೊದಲೇ ತಿಳಿದಿತ್ತು. ನಾವು ರಾಜ್ಯದ ಅಭಿವೃದ್ಧಿಗಾಗಿ ಅನೇಕ ಕೆಲಸ ಮಾಡಿದ್ದೇವೆ. ಅದಕ್ಕಾಗಿಯೇ ಇಲ್ಲಿನ ನಮ್ಮನ್ನು ನಂಬಿದ್ದಾರೆ. ಬುಲ್ಡೋಜರ್ ಮುಂದೆ ಯಾವುದೂ ಬರುವುದಿಲ್ಲ, ಅದು ಸೈಕಲ್ ಆಗಿರಲಿ ಅಥವಾ ಇನ್ನೇನೇ ಇರಲಿ ಎಲ್ಲವನ್ನೂ ಒಂದೇ ನಿಮಿಷದಲ್ಲಿ ಮುಗಿಸಿ ಹಾಕುತ್ತದೆ ಎಂದು ಬಿಜೆಪಿ ಸಂಸದೆ, ಚಿತ್ರನಟಿ ಹೇಮಾ ಮಾಲಿನಿ ಹೇಳಿದ್ದಾರೆ.

  • 13:16 PM

    ಗೋವಾದಲ್ಲಿ ಮತ್ತೆ ಸರ್ಕಾರ ರಚಿಸುತ್ತೇವೆ

    #GoaElections2022: ಗೋವಾದಲ್ಲಿ ನಾವು ಮತ್ತೆ ಸರ್ಕಾರ ರಚಿಸುತ್ತೇವೆಂದು ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ. ಗೋವಾದಲ್ಲಿ ಬಿಜೆಪಿಗೆ ಮತ ನೀಡಿದ ಜನರಿಗೆ ಧನ್ಯವಾದಗಳು. ಬಿಜೆಪಿಯ ಈ ಗೆಲುವಿಗೆ ಕಾರಣರಾದ ಕಾರ್ಯಕರ್ತರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.  

  • 12:55 PM

    ಗೋವಾದಲ್ಲಿ ರಾಜ್ಯಪಾರ ಭೇಟಿಗೆ ಸಮಯ ಕೋರಿದ ಬಿಜೆಪಿ

    ಗೋವಾದಲ್ಲಿ ಸರ್ಕಾರ ರಚನೆಗಾಗಿ ಹಕ್ಕು ಮಂಡಿಸಲು ಬಿಜೆಪಿ ಮುಂದಾಗಿದ್ದು, ರಾಜ್ಯಪಾಲರ ಭೇಟಿಗೆ ಬಿಜೆಪಿ ನಾಯಕರು ಸಮಯ ಕೋರಿದ್ದಾರೆ. ಗೋವಾದ 40 ಕ್ಷೇತ್ರಗಳ ಪೈಕಿ 19ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. 11ರಲ್ಲಿ ಕಾಂಗ್ರೆಸ್, 4ರಲ್ಲಿ ಎಂಜಿಪಿ, 2ರಲ್ಲಿ ಆಪ್ ಮತ್ತು ನಾಲ್ಕು ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

     

  • 12:51 PM

    ಕ್ಯಾಪ್ಟನ್ ಅಮರಿಂದರ್ ಸಿಂಗ್ ಗೆ ಹೀನಾಯ ಸೋಲು

    #PunjabElections2022: ಪಟಿಯಾಲ ಕ್ಷೇತ್ರದಿಂದ ಪಂಜಾಬ್ ಲೋಕ ಕಾಂಗ್ರೆಸ್‌ನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೀನಾಯ ಸೋಲು ಕಂಡಿದ್ದಾರೆ. ಆಮ್ ಆದ್ಮಿ ಪಕ್ಷದ ಅಜಿತ್ ಪಾಲ್ ಸಿಂಗ್ ಕೊಹ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

     

  • 12:46 PM

    ಗೋವಾ ಜನರಿಗಾಗಿ ಕೆಲಸ ಮಾಡುವ ಪಕ್ಷಕ್ಕೆ ಮತ

    #GoaElections: ಈ ಬಾರಿಯ ಗೋವಾ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಿ ಅಧಿಕಾರ ರಚಿಸುತ್ತೇವೆ. ಜನರು ವಂಚಕರನ್ನು, ಹೊರಗಿನವರನ್ನು ತಿರಸ್ಕರಿಸಿದ್ದಾರೆ. ಗೋವಾದ ಜನರಿಗಾಗಿ ಕೆಲಸ ಮಾಡುವ ಪಕ್ಷಕ್ಕೆ ಮತ ಹಾಕಿದ್ದಾರೆ ಎಂದು ಬಿಜೆಪಿ ನಾಯಕ ವಿಶ್ವಜಿತ್ ರಾಣೆ ಹೇಳಿದ್ದಾರೆ. ಪ್ರಮೋದ್ ಸಾವಂತ್ ಅವರು ಸಿಎಂ ಆಗಿ ಮುಂದುವರಿಯುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಇದನ್ನು ಪಕ್ಷದ ನಾಯಕತ್ವ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.

  • 12:41 PM

    ‘ಆಮ್ ಆದ್ಮಿ ಪಕ್ಷ’ಕ್ಕೆ ಧನ್ಯವಾದ ತಿಳಿಸಿದ ಸಿಧು

    ‘ಜನರ ಧ್ವನಿಯು ದೇವರ ಧ್ವನಿಯಾಗಿದೆ .... ಪಂಜಾಬ್ ಜನರ ಆದೇಶವನ್ನು ನಮ್ರತೆಯಿಂದ ಒಪ್ಪುತ್ತೇವೆ... ಆಪ್ ಗೆ ಅಭಿನಂದನೆಗಳು !!!’ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಟ್ವೀಟ್ ಮಾಡಿದ್ದಾರೆ.

     

  • 12:28 PM

    ಪ್ರಧಾನಿ ಮೋದಿ ಮ್ಯಾಜಿಕ್ ಮಾಡಿದ್ದಾರೆ

    ಪ್ರಧಾನಿ ಮೋದಿ ಮತ್ತು ಸಿಎಂ ಪುಷ್ಕರ್ ಸಿಂಗ್ ಧಾಮಿ ನೇತೃತ್ವದಲ್ಲಿ ನಾವು ಉತ್ತರಾಖಂಡದ ಜನರಿಗೆ ಅನೇಕ ಕಲ್ಯಾಣ ನೀತಿಗಳನ್ನು ನೀಡಿದ್ದೇವೆ. ಬಿಜೆಪಿಯ ಅಭಿವೃದ್ಧಿ ಕೆಲಸಗಳಿಂದಾಗಿ ನಾವು ನಿರೀಕ್ಷಿತ ಫಲಿತಾಂಶಗಳನ್ನು ಪಡೆದಿದ್ದೇವೆ. ಇದು ಪ್ರಧಾನಿ ಮೋದಿ ಮ್ಯಾಜಿಕ್ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

  • 12:25 PM

    ಬೆಂಗಳೂರಿನ ಬಿಜೆಪಿ ಕಚೇರಿ ಮುಂದೆ ಸಂಭ್ರಮಾಚರಣೆ

    ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆ ಬೆಂಗಳೂರಿನ ಬಿಜೆಪಿ ಕಚೇರಿ ಮುಂದೆ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.  

  • 12:22 PM

    ಪಂಜಾಬ್ ಜನತೆಗೆ ಕೇಜ್ರಿವಾಲ್ ಧನ್ಯವಾದ

    ಪಂಜಾಬ್ ನಲ್ಲಿ ಯಾರೂ ನಿರೀಕ್ಷಿಸದ ರೀತಿ ಆಮ್ ಆದ್ಮಿ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸಿದೆ. ಪಂಜಾಬ್ ಮತದಾರ ಈ ಬಾರಿ ಬಿಜೆಪಿ-ಕಾಂಗ್ರೆಸ್ ಸೇರಿದಂತೆ ಪ್ರಮುಖ ಪಕ್ಷಗಳಿಗೆ ಕೈಕೊಟ್ಟಿದ್ದು, AAP ಪಕ್ಷಕ್ಕೆ ಜೈ ಎಂದಿದ್ದಾರೆ. ಪಂಜಾಬ್ ನಲ್ಲಿ AAP ಜಯಭೇರಿ ಭಾರಿಸುತ್ತಿದ್ದಂತೆಯೇ ಖುಷಿ ವ್ಯಕ್ತಪಡಿಸಿದರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ‘ಹೊಸ ಕ್ರಾಂತಿ ಮಾಡಿದ ಪಂಜಾಬ್ ಜನತೆಗೆ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದಾರೆ.

  • 12:07 PM

    ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರದ ಗದ್ದುಗೆ..?

    ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಿಶ್ಚಳ ಬಹುತಮ ಪಡೆದುಕೊಂಡಿರುವ ಬಿಜೆಪಿ 4 ರಾಜ್ಯಗಳಲ್ಲಿ ಅಧಿಕಾರದ ಗುದ್ದುಗೆ ಏರುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಉತ್ತರಪ್ರದೇಶ, ಉತ್ತರಾಖಂಡದಲ್ಲಿ ಈಗಾಗಲೇ ಮ್ಯಾಜಿಕ್ ನಂಬರ್ ದಾಟಿರುವ ‘ಕಮಲ’ ಪಕ್ಷವು ಗೋವಾ ಮತ್ತು ಮಣಿಪುರದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾಗಿ ಹೊರಹೊಮ್ಮಿದೆ. ಇನ್ನು ಕೆಲವೇ ಗಂಟೆಗಳಲ್ಲಿ ‘ಪಂಚ’ ರಾಜ್ಯಗಳ ಚುನಾವಣೆಯ ಸ್ಪಷ್ಟ ಫಲಿತಾಂಶ ಹೊರಬೀಳಲಿದೆ. ಮಧ್ಯಾಹ್ನ 12 ಗಂಟೆಯ ಮಾಹಿತಿ ಪ್ರಕಾರ ‘ಪಂಚ’ ರಾಜ್ಯಗಳ ಫಲಿತಾಂಶ ಇಂತಿದೆ ನೋಡಿ.

    ಉತ್ತರ ಪ್ರದೇಶ ಒಟ್ಟು ಸ್ಥಾನಗಳು - 403

    ಬಿಜೆಪಿ+ - 263

    ಎಸ್​ಪಿ+ - 126

    ಬಿಎಸ್​ಪಿ - 07

    ಕಾಂಗ್ರೆಸ್ - 06

    ಇತರರು  - 01

    ಉತ್ತರಾಖಂಡ ಒಟ್ಟು ಸ್ಥಾನಗಳು - 70

    ಬಿಜೆಪಿ - 47

    ಕಾಂಗ್ರೆಸ್ – 20

    BSP - 02

    ಇತರರು – 01

    ಗೋವಾ ಒಟ್ಟು ಕ್ಷೇತ್ರಗಳು - 40

    ಬಿಜೆಪಿ - 19

    ಕಾಂಗ್ರೆಸ್+ - 11

    MGP+ - 04

    AAP - 02

    ಇತರರು - 04

    ಪಂಜಾಬ್​​ ಒಟ್ಟು ಕ್ಷೇತ್ರಗಳು - 117

    AAP - 89

    ಕಾಂಗ್ರೆಸ್ - 18

    SAD+ - 06

    ಬಿಜೆಪಿ+ - 03

    ಇತರರು - 01

    ಮಣಿಪುರ ಒಟ್ಟು ಕ್ಷೇತ್ರಗಳು - 60

    ಬಿಜೆಪಿ - 25

    ಕಾಂಗ್ರೆಸ್+ - 11

    NPE - 06

    NPEP - 11

    ಇತರರು - 07

  • 12:07 PM

    ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರದ ಗದ್ದುಗೆ..?

    ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಿಚ್ಚಳ ಬಹುತಮ ಪಡೆದುಕೊಂಡಿರುವ ಬಿಜೆಪಿ 4 ರಾಜ್ಯಗಳಲ್ಲಿ ಅಧಿಕಾರದ ಗುದ್ದುಗೆ ಏರುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಉತ್ತರಪ್ರದೇಶ, ಉತ್ತರಾಖಂಡದಲ್ಲಿ ಈಗಾಗಲೇ ಮ್ಯಾಜಿಕ್ ನಂಬರ್ ದಾಟಿರುವ ‘ಕಮಲ’ ಪಕ್ಷವು ಗೋವಾ ಮತ್ತು ಮಣಿಪುರದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾಗಿ ಹೊರಹೊಮ್ಮಿದೆ. ಇನ್ನು ಕೆಲವೇ ಗಂಟೆಗಳಲ್ಲಿ ‘ಪಂಚ’ ರಾಜ್ಯಗಳ ಚುನಾವಣೆಯ ಸ್ಪಷ್ಟ ಫಲಿತಾಂಶ ಹೊರಬೀಳಲಿದೆ. ಮಧ್ಯಾಹ್ನ 12 ಗಂಟೆಯ ಮಾಹಿತಿ ಪ್ರಕಾರ ‘ಪಂಚ’ ರಾಜ್ಯಗಳ ಫಲಿತಾಂಶ ಇಂತಿದೆ ನೋಡಿ.

    ಉತ್ತರ ಪ್ರದೇಶ ಒಟ್ಟು ಸ್ಥಾನಗಳು - 403

    ಬಿಜೆಪಿ+ - 263

    ಎಸ್​ಪಿ+ - 126

    ಬಿಎಸ್​ಪಿ - 07

    ಕಾಂಗ್ರೆಸ್ - 06

    ಇತರರು  - 01

    ಉತ್ತರಾಖಂಡ ಒಟ್ಟು ಸ್ಥಾನಗಳು - 70

    ಬಿಜೆಪಿ - 47

    ಕಾಂಗ್ರೆಸ್ – 20

    BSP - 02

    ಇತರರು – 01

    ಗೋವಾ ಒಟ್ಟು ಕ್ಷೇತ್ರಗಳು - 40

    ಬಿಜೆಪಿ - 19

    ಕಾಂಗ್ರೆಸ್+ - 11

    MGP+ - 04

    AAP - 02

    ಇತರರು - 04

    ಪಂಜಾಬ್​​ ಒಟ್ಟು ಕ್ಷೇತ್ರಗಳು - 117

    AAP - 89

    ಕಾಂಗ್ರೆಸ್ - 18

    SAD+ - 06

    ಬಿಜೆಪಿ+ - 03

    ಇತರರು - 01

    ಮಣಿಪುರ ಒಟ್ಟು ಕ್ಷೇತ್ರಗಳು - 60

    ಬಿಜೆಪಿ - 25

    ಕಾಂಗ್ರೆಸ್+ - 11

    NPE - 06

    NPEP - 11

    ಇತರರು - 07

  • 11:46 AM

    ಕೇಜ್ರಿವಾಲ್ ಆಡಳಿತ ಮಾದರಿಯನ್ನು ಪಂಜಾಬ್ ಒಪ್ಪಿಕೊಂಡಿದೆ

    ಅರವಿಂದ್ ಕೇಜ್ರಿವಾಲ್ ಅವರ ಆಡಳಿತ ಮಾದರಿಯನ್ನು ಪಂಜಾಬ್ ಒಪ್ಪಿಕೊಂಡಿದೆ. ರಾಷ್ಟ್ರಮಟ್ಟದಲ್ಲಿ  AAP ಪಕ್ಷವು ಮನ್ನಣೆ ಗಳಿಸಿದೆ. ಇಡೀ ದೇಶದ ಜನರೇ ನಮ್ಮ ಆಡಳಿತ ಮಾದರಿಯ ಬಯಸಿದ್ದಾರೆಂದು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

  • 11:42 AM

    AAP ಕಾರ್ಯಕರ್ತರ ಸಂಭ್ರಮಾಚರಣೆ

    ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಜಯಭೇರಿ ಬಾರಿಸುತ್ತಿದ್ದಂತೆ ಕಾರ್ಯಕರ್ತರು ಮತ್ತು ಬೆಂಬಲಿಗರು ಭರ್ಜರಿ ನೃತ್ಯ ಮಾಡಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಿದರು. ಚಂಡೀಗಢ, ಅಮೃತಸರ, ದೆಹಲಿ ಮತ್ತು ನಾಗ್ಪುರದಲ್ಲಿ AAP ಕಾರ್ಯಕರ್ತರು ಗೆಲುವಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

     

  • 11:20 AM

    ಯೋಗಿ ಆದಿತ್ಯನಾಥ್ ಮುನ್ನಡೆ

    ಗೋರಖ್‌ಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮುನ್ನಡೆ ಸಾಧಿಸಿದ್ದಾರೆ. ಆರಂಭಿಕ ಟ್ರೆಂಡ್‌ಗಳ ಪ್ರಕಾರ ಬಿಜೆಪಿ ಉತ್ತರ ಪ್ರದೇಶದಲ್ಲಿ 260ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಬಹುಮತದ ಗಡಿ ದಾಟಿದೆ.

  • 11:13 AM

    ಇವಿಎಂ ವಿರುದ್ಧ ‘ಕೈ’ ಕಾರ್ಯಕರ್ತರ ಪ್ರತಿಭಟನೆ

    ‘ಪಂಚ’ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಂದುವರೆದಂತೆ ದೆಹಲಿಯಲ್ಲಿ ಪಕ್ಷದ ಕಚೇರಿಯ ಮುಂದೆ ಇವಿಎಂ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಚುನಾವಣಾ ಆಯೋಗದ ಇತ್ತೀಚಿನ ಅಧಿಕೃತ ಟ್ರೆಂಡ್ ಪ್ರಕಾರ ಕಾಂಗ್ರೆಸ್ ಪಕ್ಷವು ಎಲ್ಲಾ 5 ರಾಜ್ಯಗಳಲ್ಲಿ ಹಿನ್ನಡೆ ಸಾಧಿಸಿದೆ.

  • 10:57 AM

    ಉತ್ತರಪ್ರದೇಶ-ಉತ್ತರಾಖಂಡದಲ್ಲಿ ಬಿಜೆಪಿಗೆ ನಿಶ್ಚಳ ಬಹುಮತ

    ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ನಿಶ್ಚಳ ಬಹುಮತದತ್ತ ಸಾಗುತ್ತಿದೆ. ಬೆಳಗ್ಗೆ 11 ಗಂಟೆಯ ಮಾಹಿತಿ ಪ್ರಕಾರ ‘ಪಂಚ’ ರಾಜ್ಯಗಳ ಫಲಿತಾಂಶ ಇಂತಿದೆ ನೋಡಿ.

    ಉತ್ತರ ಪ್ರದೇಶ ಒಟ್ಟು ಸ್ಥಾನಗಳು - 403

    ಬಿಜೆಪಿ+ - 270

    ಎಸ್​ಪಿ+ - 103

    ಬಿಎಸ್​ಪಿ - 08

    ಕಾಂಗ್ರೆಸ್ - 06

    ಇತರರು  - 02

    ಉತ್ತರಾಖಂಡ ಒಟ್ಟು ಸ್ಥಾನಗಳು - 70

    ಬಿಜೆಪಿ - 46

    ಕಾಂಗ್ರೆಸ್ – 21

    BSP - 02

    ಇತರರು – 01

    ಗೋವಾ ಒಟ್ಟು ಕ್ಷೇತ್ರಗಳು - 40

    ಬಿಜೆಪಿ - 18

    ಕಾಂಗ್ರೆಸ್+ - 13

    MGP+ - 05

    AAP - 01

    ಇತರರು - 03

    ಪಂಜಾಬ್​​ ಒಟ್ಟು ಕ್ಷೇತ್ರಗಳು - 117

    AAP - 89

    ಕಾಂಗ್ರೆಸ್ - 13

    SAD+ - 09

    ಬಿಜೆಪಿ+ - 05

    ಇತರರು - 01

    ಮಣಿಪುರ ಒಟ್ಟು ಕ್ಷೇತ್ರಗಳು - 60

    ಬಿಜೆಪಿ - 25

    ಕಾಂಗ್ರೆಸ್+ - 12

    NPE - 06

    NPEP - 10

    ಇತರರು - 07

  • 10:24 AM

    ‘ಪಂಚ’ ರಾಜ್ಯ ಚುನಾವಣಾ ಫಲಿತಾಂಶದ ಎಫೆಕ್ಟ್: ಷೇರುಪೇಟೆಯಲ್ಲಿ ಗೂಳಿಯ ಆರ್ಭಟ!

    ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿದ ಬಳಿಕ ಭಾರೀ ಕುಸಿತ ಕಂಡಿದ್ದ ಷೇರುಪೇಟೆ ಇದೀಗ ‘ಪಂಚ’ ರಾಜ್ಯಗಳ ಚುನಾವಣೆ ಫಲಿತಾಂಶದ ಹಿನ್ನಲೆ ಭರ್ಜರಿ ಜಿಗಿತ ಕಂಡಿದೆ. ಮುಂಬೈ ಷೇರುಪೇಟೆಯಲ್ಲಿ ಗೂಳಿಯ ಆರ್ಭಟ ಮುಂದುವರೆದಿದೆ. ನಿನ್ನೆ(ಮಾರ್ಚ್ 9)ಯೂ ಭರ್ಜರಿ ಏರಿಕೆ ಕಂಡಿದ್ದ ಷೇರುಪೇಟೆ ಇಂದೂ ಕೂಡ ಹೂಡಿಕೆದಾರರಿಗೆ ಬಂಪರ್ ಲಾಭ ತಂದುಕೊಟ್ಟಿದೆ. BSE SENSEX 1,413 ಅಂಕ(ಶೇ.2.58) ಏರಿಕೆಯಾದರೆ, NIFTY 50 402.55 ಅಂಕ(ಶೇ.2.47) ಏರಿಕೆ ಕಂಡಿದೆ. ಪ್ರಮುಖ ಷೇರುಗಳು ಶೇ.5ರಿಂದ ಶೇ.10ರವರೆಗೆ ಏರಿಕೆ ದಾಖಲಿಸಿದ್ದು, ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿಸಿವೆ.

     

  • 10:05 AM

    ಗೋವಾದಲ್ಲಿ ‘ಕೈ-ಕಮಲ’​ ಸಮಬಲದ ಪೈಪೋಟಿ  

    ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಬಲದ ಪೈಪೋಟಿ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ 40 ಸ್ಥಾನಗಳ ಪೈಕಿ ಕಾಂಗ್ರೆಸ್+ 16, ಬಿಜೆಪಿ 15, MGP+ 4, AAP 1 ಮತ್ತು ಇತರರು 4 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಗೋವಾ ಚುನಾವಣೆಯ ಅಂತಿಮ ಫಲಿತಾಂಶದ ಬಗ್ಗೆ ಕುತೂಹಲ ವ್ಯಕ್ತವಾಗಿದೆ. ಆರಂಭದಿಂದಲೂ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡು ಬರುತ್ತಿದ್ದು, ಬಿಜೆಪಿ ನೆಕ್ ಟು ನೆಕ್ ಫೈಟ್ ನೀಡುತ್ತಿದೆ.​  

     

  • 09:58 AM

    ಆಪ್‌ ಕಾರ್ಯಕರ್ತರ ಸಂಭ್ರಮಾಚರಣೆ

    ಪಂಜಾಬ್‌ನಲ್ಲಿ ಪಕ್ಷವು ಬಹುಮತದ ಗಡಿ ದಾಟುತ್ತಿದ್ದಂತೆ ಆಪ್‌ನ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರ ಸಂಗ್ರೂರ್‌ನಲ್ಲಿರುವ ನಿವಾಸದಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಭಗವಂತ್ ಮಾನ್ ಅವರು ತಮ್ಮ ಕ್ಷೇತ್ರ ಧುರಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.

     

  • 09:49 AM

    ಪಂಜಾಬ್ ನಲ್ಲಿ ಮ್ಯಾಜಿಕ್ ನಂಬರ್ ದಾಟಿದ AAP

    ಸದ್ಯದ ಮಾಹಿತಿ ಪ್ರಕಾರ ಪಂಜಾಬ್‌ನಲ್ಲಿ AAP ಬಹುಮತ ಸಾಧನೆ ಮಾಡಿದೆ. 117 ಸ್ಥಾನಗಳ ಪೈಕಿ AAP ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಮ್ಯಾಜಿಕ್ ನಂಬರ್ ದಾಟಿ ಗೆಲುವಿನತ್ತ ಮುಖ ಮಾಡಿದೆ. ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಧು ಭಾರೀ ಹಿನ್ನಡೆ ಅನುಭವಿಸಿದ್ದಾರೆಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.

     

  • 09:43 AM

    ನವಜೋತ್ ಸಿಂಗ್ ಸಿಧುಗೆ ಹಿನ್ನಡೆ

    ಪಂಜಾಬ್ ನ ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದ 2ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಹಿನ್ನಡೆ ಅನುಭಿಸಿದ್ದು, 2ನೇ ಸ್ಥಾನದಲ್ಲಿದ್ದರೆ, ಎಸ್‌ಎಡಿಯ ಬಿಕ್ರಮ್ ಮಜಿಥಿಯಾ 3ನೇ ಸ್ಥಾನದಲ್ಲಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

  • 09:34 AM

    ‘ಪಂಚ’ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಭರದಿಂದ ಸಾಗಿದ್ದು, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ಬಿಜೆಪಿ, ಗೋವಾದಲ್ಲಿ ಕಾಂಗ್ರೆಸ್ ಮತ್ತು ಪಂಜಾಬ್​ನಲ್ಲಿ ಆಪ್ ಪಕ್ಷ ಮುನ್ನಡೆ ಸಾಧಿಸಿವೆ. ಬೆಳಗ್ಗೆ 9.30ರ ಮಾಹಿತಿ ಪ್ರಕಾರ ಉತ್ತರ ಪ್ರದೇಶದಲ್ಲಿ 403 ಸ್ಥಾನಗಳ ಪೈಕಿ ಬಿಜೆಪಿ+ 200, ಎಸ್​ಪಿ+ 95, ಬಿಎಸ್​ಪಿ 7, ಕಾಂಗ್ರೆಸ್ 4, ಉತ್ತರಾಖಂಡದಲ್ಲಿ 70 ಸ್ಥಾನಗಳ ಪೈಕಿ ಬಿಜೆಪಿ 30, ಕಾಂಗ್ರೆಸ್ 23, ಇತರರು 4, ಗೋವಾದ 40 ಕ್ಷೇತ್ರಗಳ ಪೈಕಿ ಬಿಜೆಪಿ 15, ಕಾಂಗ್ರೆಸ್+ 14, MGP+ 7 ಮತ್ತು ಇತರರು 3, ಪಂಜಾಬ್​​ನಲ್ಲಿ 117 ಸ್ಥಾನಗಳ ಪೈಕಿ ಆಪ್ 52, ಕಾಂಗ್ರೆಸ್ 37, SAD+ 21 ಮತ್ತು ಬಿಜೆಪಿ+ 7 ಹಾಗೂ ಮಣಿಪುರದಲ್ಲಿ 60 ಕ್ಷೇತ್ರಗಳ ಪೈಕಿ ಬಿಜೆಪಿ 16, ಕಾಂಗ್ರೆಸ್+ 10, NPE 5, NPEP 9 ಮತ್ತು ಇತರರು 3 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿವೆ.

  • 09:17 AM

     5 State Assembly Election Results: ‘ಪಂಚ’ ರಾಜ್ಯಗಳ ಚುನಾವಣೆಯಲ್ಲಿ ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರದಲ್ಲಿ ಬಿಜೆಪಿ, ಗೋವಾದಲ್ಲಿ ಕಾಂಗ್ರೆಸ್, ಪಂಜಾಬ್​ನಲ್ಲಿ ಆಪ್ ಪಕ್ಷ ಮುನ್ನಡೆ ಸಾಧಿಸಿವೆ.

     

  • 08:51 AM

    #PunjabElections2022: ವಿಧಾನಸಭಾ ಚುನಾವಣೆಯ ಫಲಿತಾಂಶ ಹಿನ್ನೆಲೆ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಅವರು ಗುರುವಾರ ಬೆಳಗ್ಗೆ ತಮ್ಮ ಕುಟುಂಬ ಸಮೇತ ಚಮ್‌ಕೌರ್ ಸಾಹಿಬ್ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದರು.

  • 08:49 AM

    ಆರಂಭಿಕ ಟ್ರೆಂಡ್ ನ ಪ್ರಕಾರ ಪಂಜಾಬ್‌ನ ಮುಕೇರಿಯನ್ ವಿಧಾನಸಭಾ ಕ್ಷೇತ್ರದಲ್ಲಿ ಶಿರೋಮಣಿ ಅಕಾಲಿದಳ ಮುನ್ನಡೆ ಸಾಧಿಸಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

  • 08:38 AM

    ವಿಧಾನಸಭಾ ಚುನಾವಣೆಯ ಫಲಿತಾಂಶದ ದಿನದಂದು ಮಣಿಪುರ ಸಿಎಂ ಎನ್.ಬಿರೇನ್ ಸಿಂಗ್ ಇಂಫಾಲ್‌ನ ಶ್ರೀ ಗೋವಿಂದಜೀ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

  • 08:32 AM

    ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ದೇಶದ ಮಿನಿ ಮಹಾಚುನಾವಣೆ ಎಂದು ಪರಿಗಣಿಸಲಾಗುತ್ತದೆ. ಉತ್ತರಪ್ರದೇಶ ಮತ್ತು ಮಣಿಪುರದಲ್ಲಿ ಬಿಜೆಪಿಗೆ ಸ್ಪಷ್ಟ ಗೆಲುವು ಸಿಗಲಿದೆ, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಕಮಾಲ್ ಮಾಡಿದರೆ,  ಉತ್ತರಾಖಂಡ ಮತ್ತು ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ ಎಂದು ಚುನಾವಣೋತ್ತರ ಮತದಾನ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಹೀಗಾಗಿ ‘ಪಂಚ’ರಾಜ್ಯ ಚುನಾವಣೆಯಲ್ಲಿ ಮತದಾರ ಪ್ರಭು ಯಾರಿಗೆ ವಿಜಯಮಾಲೆ ಹಾಕಲಿದ್ದಾನೆಂಬುದು ತೀವ್ರ ಕುತೂಹಲ ಕೆರಳಿಸಿದೆ. 5 ರಾಜ್ಯಗಳ ಮತ ಎಣಿಕೆ ಪ್ರಾರಂಭವಾಗುತ್ತಿದ್ದಂತೆ, ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ https://eci.gov.in ನಲ್ಲಿ ಫಲಿತಾಂಶ ಲಭ್ಯವಿರುತ್ತವೆ.

  • 08:24 AM

    #PunjabElections2022: ಪಂಜಾಬ್ ವಿಧಾನಸಭಾ ಫಲಿತಾಂಶ ಕೂಡ ಭಾರೀ ಕುತೂಹಲ ಕೆರಳಿಸಿದೆ. ಈಗಾಗಲೇ ಅಂಚೆ ಮತಗಳನ್ನು ಸಿಬ್ಬಂದಿ ಎಣಿಕೆ ಮಾಡುತ್ತಿದ್ದಾರೆ. ಗುರುದಾಸಪುರದಲ್ಲಿ ಅಂಚೆ ಮತಗಳ ಏಣಿಕೆಯಲ್ಲಿ ಬ್ಯುಸಿಯಾಗಿರುವ ಸಿಬ್ಬಂದಿಯನ್ನು ಕಾಣಬಹುದು.

     

  • 08:22 AM

    #GoaElections2022: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಚುನಾವಣಾ ಫಲಿತಾಂಶ ಹಿನ್ನೆಲೆ ಗುರುವಾರ ಶ್ರೀ ದತ್ತ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಗೋವಾ ಚುನಾವಣೆ ಮತ ಏಣಿಕೆ ಪ್ರಕ್ರಿಯೆ ಶುರುವಾಗಿದ್ದು, ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.

  • 08:18 AM

    5 State Election Results 2022 Live Updates: ‘ಪಂಚ’ರಾಜ್ಯಗಳ​​ ವಿಧಾನಸಭಾ ಚುನಾವಣೆ ಮತ ಎಣಿಕೆ ಆರಂಭವಾಗಿದೆ. ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಪಂಜಾಬ್, ಗೋವಾ ರಾಜ್ಯಗಳ​​ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಅಂಚೆ ಮತಗಳನ್ನು ಸಿಬ್ಬಂದಿ ಎಣಿಕೆ ಮಾಡುತ್ತಿದ್ದಾರೆ.

  • 08:14 AM

    5 State Assembly Election Results 2022 LIVE Updates: ಇಡೀ ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ತಾಜಾ ಮಾಹಿತಿ ಇಲ್ಲಿದೆ.

Trending News