ಐತಿಹಾಸಿಕ ಅಯೋಧ್ಯೆ ತೀರ್ಪು: ವಿವಾದಿತ ಜಮೀನು ರಾಮಮಂದಿರಕ್ಕೆ, ಮಸೀದಿಗೆ ಪರ್ಯಾಯ ಭೂಮಿ

70 ವರ್ಷಗಳ ಬಾಬರಿ ಮಸೀದಿ- ರಾಮಮಂದಿರ ಜಮೀನು ವಿವಾದದ ಬಗ್ಗೆ ಇಂದು ಸರ್ವೋಚ್ಚ ನ್ಯಾಯಾಲಯಯಿಂದ ತೀರ್ಪು ಹೊರಬರಲಿದೆ. ಅಯೋಧ್ಯೆ ಐತಿಹಾಸಿಕ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದ್ದು, ದೇಶದಲ್ಲಿ ಎಲ್ಲರ ಚಿತ್ತ ಸುಪ್ರೀಂಕೋರ್ಟ್ ನತ್ತ ನೆಟ್ಟಿದೆ.

Written by - Yashaswini V | Last Updated : Nov 9, 2019, 11:26 AM IST
ಐತಿಹಾಸಿಕ ಅಯೋಧ್ಯೆ ತೀರ್ಪು: ವಿವಾದಿತ ಜಮೀನು ರಾಮಮಂದಿರಕ್ಕೆ, ಮಸೀದಿಗೆ ಪರ್ಯಾಯ ಭೂಮಿ
Live Blog

ನವದೆಹಲಿ: ಬಾಬರಿ ಮಸೀದಿ- ರಾಮಮಂದಿರ ಜಮೀನು ವಿವಾದದ ಬಗ್ಗೆ ಇಂದು ಸರ್ವೋಚ್ಚ ನ್ಯಾಯಾಲಯ ತನ್ನ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ವಿವಾದಿತ 2.77 ಎಕರೆ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 'ಗ್ರೀನ್' ಸಿಗ್ನಲ್ ನೀಡಿರುವ ಸುಪ್ರೀಂಕೋರ್ಟ್, ರಾಮಮಂದಿರ ಜಮೀನನ್ನು ಸಂಪೂರ್ಣವಾಗಿ ಟ್ರಸ್ಟ್​​ ವಶಕ್ಕೆ ನೀಡಬೇಕು. ಇದರ ಹೊಣೆ ಸರ್ಕಾರದ್ದು ಎಂದು ಸೂಚಿಸಿದೆ. ಇದೇ ವೇಳೆ ಮಸೀದಿ ನಿರ್ಮಾಣಕ್ಕೆ ಸುನ್ನಿ ವಕ್ಫ್ ಬೋರ್ಡ್ ಗೆ 5 ಎಕರೆ ಪರ್ಯಾಯ ಭೂಮಿ ನೀಡಲು ಸೂಚಿಸಿರುವ ಸರ್ವೋಚ್ಚ ನ್ಯಾಯಾಲಯ, ಸರ್ಕಾರಕ್ಕೆ 3 ತಿಂಗಳು ಗಡುವು ನೀಡಿದೆ.

ಶತಮಾನಗಳಿಂದಲೂ ವಿವಾದದ ಸ್ವರೂಪದಲ್ಲಿದ್ದ ಅಯೋಧ್ಯೆಯ ಭೂ ವಿಷಯಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಛ ನ್ಯಾಯಾಲಯದ ​ಸಂವಿಧಾನಿಕ ಪೀಠ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ. 1528ರಿಂದ ಉದ್ಭವಿಸಿದ್ದ ಭೂ ವಿವಾದವು ಹಲವು ಆಯಾಮಗಳನ್ನು ಕಂಡಿದೆ. ರಾಜಕೀಯ ಸ್ಧಿತ್ಯಂತರಗಳನ್ನು ಸೃಷ್ಟಿಮಾಡಿದೆ. ಕೋಮು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತ್ತು. ಹೀಗೆ ಸಾಗಿಬಂದ ವಿವಾದ ಅಹಮದಾಬಾದ್ ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾದಿಯಾಗಿ ಸಂವಿಧಾನಿಕ ಪೀಠದವರೆಗೆ ಸಾಗಿ ಬಂದು ಸುದೀರ್ಘವಾಗಿ ವಿಚಾರಣೆ ನಡೆದು 2019ರ ಅಕ್ಟೋಬರ್ 16ರಂದು ತೀರ್ಪನ್ನು ಕಾಯ್ದಿರಿಸಿಲಾಗಿತ್ತು. ಅಂತಿಮ ಘಟ್ಟದಲ್ಲಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ​ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್, ನ್ಯಾಯಮೂರ್ತಿಗಳಾದ ಎಸ್.ಎ. ಬೋಬ್ಡೆ, ಡಾ. ಡಿ.ವೈ. ಚಂದ್ರಚೂಡ್, ಎಸ್. ಅಬ್ದುಲ್ ನಜೀರ್ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ  ಸಂವಿಧಾನ ಪೀಠವು ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ತೀರ್ಪು ಪ್ರಕಟಿಸುವ ವಿಷಯವನ್ನು ಸುಪ್ರೀಂ ಕೋರ್ಟ್​ನ ಮೂಲಗಳು ಖಚಿತಪಡಿಸುತ್ತಿದ್ದಂತೆ ದೇಶದಾದ್ಯಂತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇಂದ್ರದ ಗೃಹ ಇಲಾಖೆ ಎಲ್ಲಾ ರಾಜ್ಯಗಳ ಗೃಹ ಇಲಾಖೆಗೂ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳುವಂತೆ, ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ. 

9 November, 2019

  • 11:14 AM

    - ಸುನ್ನಿ ವಕ್ಫ್ ಬೋರ್ಡ್ ಗೆ ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ 5 ಎಕರೆ ಜಾಗ ನೀಡಬೇಕು.
    - ವಿಶೇಷಾಧಿಕಾರ ಬಳಸಿ ಸುನ್ನಿ ವಕ್ಫ್ ಬೋರ್ಡ್ ಗೆ ಜಮೀನು ನೀಡಿ.
    -  ರಾಮಜನ್ಮಭೂಮಿಯ ಬಗ್ಗೆ ಕೇಂದ್ರದಿಂದ ಟ್ರಸ್ಟ್​​ ನಿರ್ಮಿಸಲು ಸೂಚನೆ, ಟ್ರಸ್ಟ್​ ರಚನೆ ಬಳಿಕ ವಿವಾದಿತ ಭೂಮಿ ಟ್ರಸ್ಟ್​ಗೆ ಹಸ್ತಾಂತರಿಸಿ. ರಾಮಜನ್ಮಭೂಮಿಯ ಸ್ವಾಧೀನವನ್ನು ಟ್ರಸ್ಟ್​ಗೆ ನೀಡಬೇಕು.

  • 11:09 AM

    - ಸುನ್ನಿ ವಕ್ಫ್ ಬೋರ್ಡ್ ಗೆ ಪರ್ಯಾಯ ಜಾಗ ನೀಡುವಂತೆ ಆದೇಶಿಸಿದ ಸುಪ್ರೀಂಕೋರ್ಟ್
    - ಪರ್ಯಾಯ ಜಮೀನು ನೀಡಲು 3 ತಿಂಗಳ ಒಳಗೆ ಯೋಜನೆ ರೂಪಿಸಬೇಕು ಎಂದು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠದಿಂದ ಆದೇಶ
    - ಮಂದಿರ ನಿರ್ಮಿಸಲು ನಿಯಮ ರೂಪಿಸಿ. ವಿವಾದಿತ ಜಮೀನು ರಾಮಲಲ್ಲಾಗೆ ಸೇರಿದ್ದು. 
    - ರಾಮಮಂದಿರ ನಿರ್ಮಾಣ ಹೊಣೆ ಸರ್ಕಾರದ ಹೊಣೆ ಎಂದು ಸರ್ವೋಚ್ಚ ನ್ಯಾಯಾಲಯದ ಆದೇಶ

  • 11:07 AM

    - ಇತಿಹಾಸಕಾರರ ವಿವರಣೆ, ಪುರಾತತ್ವ ಸಾಕ್ಷ್ಯ ಹಿಂದೂಗಳ ಪರವಾಗಿದೆ.
    - ಮುಸ್ಲಿಮರಿಗೆ ಒಳಭಾಗದಲ್ಲಿ ಪ್ರಾರ್ಥನೆಗೆ ಅವಕಾಶ ಇಲ್ಲದಿದ್ದರೂ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದರು. 
    - ಮಂದಿರವನ್ನು ಧ್ವಂಸ ಮಾಡಿರುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ ಎಂದು ಪುರಾತತ್ವ ಇಲಾಖೆಯ ಶೋಧನೆಯನ್ನು ಮಾನ್ಯ ಮಾಡಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್
    - ಮಸೀದಿಯ ಒಳಭಾಗದ ಕುರಿತೂ ಕೂಡ ವಿವಾದವಿದೆ.
    - ವಿವಾದಿತ ಜಾಗದಲ್ಲಿ 1949ರ ನಂತರ ನಮಾಜ್ ನಡೆದಿಲ್ಲ. ಈಗಿರುವ ಮಸೀದಿ ಧರ್ಮದ ಪ್ರಕಾರ ಕಟ್ಟಿಲ್ಲ. ಆದರೆ ಮಸೀದಿಗೆ ಹಾನಿ ಮಾಡಿದ್ದು ಕಾನೂನು ಉಲ್ಲಂಘನೆ- ಸುಪ್ರೀಂಕೋರ್ಟ್
    - ಅನಾದಿ ಕಾಲದಿಂದಲೂ ಹೊರಗಡೆಯಿಂದಲೇ ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದಾರೆ.
    - ಸುನ್ನಿ ಬೋರ್ಡ್ ಗೆ ಪರ್ಯಾಯ ಜಮೀನು ನೀಡಬೇಕು.

    - ಅಲಹಬಾದ್ ಕೋರ್ಟ್ ವಿವಾದಿತ ಸ್ಥಳವನ್ನು ಮೂರು ಭಾಗಗಳಾಗಿ ಮಾಡಿರುವುದು ಸರಿ ಎಂದು ಯಾರೂ ಒಪ್ಪುತ್ತಿಲ್ಲ. ಇದು ತಾರ್ಕಿಕವಲ್ಲ ಎಂದು ಸಾಂವಿಧಾನಿಕ ಪೀಠವೂ ಅಭಿಪ್ರಾಯ ವ್ಯಕ್ತಪಡಿಸಿದೆ.

  • 10:54 AM

    - ವಿವಾದಿತ ಜಾಗದಲ್ಲಿ ಹಿಂದೂ-ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು.
    - ಮಸೀದಿಯ ಕೆಳಗಡೆ ಇರುವುದು ಹಿಂದೂ ರಚನೆ ಎಂದು ನಂಬಲು ಸಾಧ್ಯವಿಲ್ಲ.
    - 1856 ರಿಂದ 1857ರವರೆಗೆ ನಮಾಜ್ ಮಾಡಲಾಗುತ್ತಿತ್ತು ಅನ್ನೋದಕ್ಕೆ ಸಾಕ್ಷಿ ಇಲ್ಲ.
    - ಬ್ರಿಟಿಷರು ಆ ಜಾಗವನ್ನು ಪ್ರತ್ಯೇಕವಾಗಿ ವಿಭಾಗಿಸಿ ಬೇಲಿ ಹಾಕಿದ್ದರು.
    - ಮಸೀದಿಯ ಒಳಬಾಗದಲ್ಲಿ ಹಿಂದೂಗಳೂ ಕೂಡ ಪೂಜೆ ಮಾಡುತ್ತಿದ್ದರು.
    - ಮಸೀದಿಯ ಮುಖ್ಯ ಗುಂಬಜ್ ನ ಕೆಳಭಾಗದಲ್ಲಿ ಗರ್ಭಗುಡಿ ಇತ್ತೆಂದು ನಂಬಲಾಗ್ತಿದೆ.

  • 10:50 AM

    - ಮಸೀದಿಯ ಪ್ರಮುಖ ಗುಂಬಜ್ ಅನ್ನು ರಾಮಜನ್ಮ ಭೂಮಿಯ ಸ್ಥಳ ಎಂದು ಜನರು ನಂಬುತ್ತಾರೆ.
    - ಚಬೂತರ್, ಸೀತಾ ರಸೋಯಿ, ಭಂಡಾರಗಳೆಲ್ಲಾ ರಾಮನ ಹುಟ್ಟಿಗೆ ಪುಷ್ಠಿ
    - ಪುರಾಣಗಳಲ್ಲೂ ರಾಮಲಲ್ಲಾ ಬಗ್ಗೆ ಉಲ್ಲೇಖವಿದೆ. ಈ ಪ್ರದೇಶದಲ್ಲಿ ಹಿಂದೂಗಳು ಪರಿಕ್ರಮವನ್ನೂ ಮಾಡುತ್ತಿದ್ದರು.
    - ಕೇವಲ ನಂಬಿಕೆಯಿಂದ ಹಕ್ಕನ್ನು ಸಾಬೀತು ಮಾಡಲು ಸಾಧ್ಯವಿಲ್ಲ. ಕಾನೂನಿಂದ ಆಧಾರದ ಮೇಲೆ ಭೂಮಿಯ ಹಕ್ಕನ್ನು ನಿರ್ಧರಿಸಲಾಗುತ್ತೆ.
    - ಆದರೆ ಸ್ವಾಧೀನದ ಆಧಾರದ ಮೇಲೆ ಭೂಮಿಯ ಹಕ್ಕನ್ನು ಕೇಳುವಂತಿಲ್ಲ.

  • 10:48 AM

    - ಹಿಂದೂಗಳು ಅಯೋಧ್ಯೆಯನ್ನು ರಾಮ ಜನ್ಮಭೂಮಿ ಎಂದು ನಂಬುತ್ತಾರೆ.
    - ರಾಮ ಅಯೋಧ್ಯೆಯಲ್ಲೇ ಹುಟ್ಟಿದ್ದ ಅನ್ನೋ ಬಗ್ಗೆ ಯಾವುದೇ ವಿವಾದವಿಲ್ಲ.
    - ವಿವಾದಿತ ಜಾಗದಲ್ಲೇ ಹಿಂದೂಗಳು ಪೂಜೆ ಮಾಡುತ್ತಾ ಬಂದಿದ್ದಾರೆ.

  • 10:45 AM

    - ಕಂದಾಯ ದಾಖಲೆಯ ಪ್ರಕಾರ ವಿವಾದಿತ ಜಮೀನು ಸರ್ಕಾರಿ ಜಮೀನು.
    - ಮಸೀದಿ ಅಡಿಪಾಯದ ಕೆಳಗೆ ವಿಶಾಲ ರಚನೆ ಇತ್ತು.
    - ಕಲಾಕೃತಿಗಳು ಇಸ್ಲಾಮಿಕ್ ರಚನೆಯಾಗಿರಲಿಲ್ಲ.
    - ಉತ್ಖನನ ವೇಳೆ ಸಿಕ್ಕ ಕಲಾಕೃತಿಗಳು ಇಸ್ಲಾಮಿಕ್ ಆಗಿರಲಿಲ್ಲ.

  • 10:37 AM

    ಪ್ರಕರಣದ ಇತಿಹಾಸ ಹೇಳುತ್ತಿರುವ ನ್ಯಾಯಮೂರ್ತಿಗಳು:

    - 1949ರಲ್ಲಿ 2 ಮೂರ್ತಿಗಳನ್ನು ಇಡಲಾಗಿತ್ತು ಎಂದು ವಾದಿಸಿದ್ದಾರೆ.

    - ಮಸೀದಿ ಯಾವಾಗ ನಿರ್ಮಾಣ ಆಗಿದೆ ಎಂಬುದು ಮುಖ್ಯವಲ್ಲ

    - ಕೋರ್ಟ್ ಜನರ ನಂಬಿಕೆಯನ್ನು ಒಪ್ಪಿಕೊಳ್ಳುತ್ತದೆ. ಭಾವನೆಗಳಿಗೆ ಬೆಲೆಯಿದೆ.

    - ನಿರ್ಮೋಹಿ ಅಖಾಡದ ಅರ್ಜಿ ವಜಾ. ನಿರ್ಮೋಹಿ ಅಖಾಡದ ವಾದಕ್ಕೆ ಇತಿಮಿತಿ ಇದೆ. ಆರ್ಟಿಕಲ್​ 120ರ ಅಡಿ ಇತಿಮಿತಿ ಎಂದ ನ್ಯಾಯಪೀಠ  ನಿರ್ಮೋಹಿ ಅಖಾಡಕ್ಕೆ ಪೂಜೆಯ ಅಧಿಕಾರವಿಲ್ಲ.

    - ರಾಮಲಲ್ಲಾ ಮುಖ್ಯ ಅರ್ಜಿದಾರ ಎಂದು ಕೋರ್ಟ್ ಮಾನ್ಯತೆ ಮಾಡಿದೆ.

    - ಪುರಾತತ್ವ ಇಲಾಖೆ ಸಾಕ್ಷ್ಯಗಳನ್ನು ಪರಿಗಣಿಸಲಾಗಿದೆ.

    - ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ವಜಾಗೊಳಿಸುವ ಬೇಡಿಕೆ ಸರಿಯಲ್ಲ.

    - ಬಾಬರಿ ಮಸೀದಿ ಖಾಲಿ ಸ್ಥಳದಲ್ಲಿ ನಿರ್ಮಾನವಾಗಿರಲಿಲ್ಲ.

     

     

  • 10:34 AM

    ಇದು ಸರ್ವಾನುಮತದ ತೀರ್ಪು:
    ಇದು ಐವರು ನ್ಯಾಯಮೂರ್ತಿಗಳ ಸರ್ವಾನುಮತದ ತೀರ್ಪು. ತೀರ್ಪು ಓದಲು ಅರ್ಧಗಂಟೆ ಸಮಯ ತೆಗೆದುಕೊಳ್ಳುವುದಾಗಿ ತಿಳಿಸಿದ ಸಿಜೆಐ ರಂಜನ್ ಗೊಗೊಯ್

    ಶಿಯಾ ವಕ್ಫ್ ಬೋರ್ಡ್ ನ ಅರ್ಜಿ ವಜಾ
    ಶಿಯಾ ವಕ್ಫ್ ಬೋರ್ಡ್ ನ ಅರ್ಜಿ ವಿಚಾರದಲ್ಲಿ ಸರ್ವಾನುಮತ. 

  • 10:31 AM

     

     

     

  • 10:31 AM

    ಇದು ಸರ್ವಾನುಮತದ ತೀರ್ಪು:
    ಇದು ಐವರು ನ್ಯಾಯಮೂರ್ತಿಗಳ ಸರ್ವಾನುಮತದ ತೀರ್ಪು. ಅರ್ಧಗಂಟೆ ಸಮಯ ತೆಗೆದುಕೊಳ್ಳುವುದಾಗಿ ತಿಳಿಸಿದ ಸಿಜೆಐ ರಂಜನ್ ಗೊಗೊಯ್

  • 10:29 AM

    ಕೋರ್ಟ್ ಹಾಲ್ ಗೆ ಆಗಮಿಸಿದ ಮುಖ್ಯ ನ್ಯಾಯಮೂರ್ತಿ ಆಗಮನ

    ಎಲ್ಲರೂ ಮೌನವಾಗಿರಿ, ಶಾಂತಿ ಕಾಪಾಡುವಂತೆ ಮುಖ್ಯನ್ಯಾಯಮೂರ್ತಿಗಳ ಸೂಚನೆ

  • 10:27 AM

    ಕೋರ್ಟ್ ಹಾಲ್ ಗೆ ತೀರ್ಪಿನ ಪ್ರತಿಯನ್ನು ತಂದಿಟ್ಟ ರಿಜಿಸ್ಟಾರ್

  • 10:21 AM

    ನ್ಯಾಯಾಲಯದ ಆವರಣದಲ್ಲಿ ಜನರ ಪ್ರವೇಶವನ್ನು ಸುಪ್ರೀಂ ಕೋರ್ಟ್ ನಿರ್ಬಂಧಿಸಿದೆ. ಅಯೋಧ್ಯೆ ಪ್ರಕರಣದಲ್ಲಿ ತೀರ್ಪಿನ ಘೋಷಣೆಗೆ ಸಾಕ್ಷಿಯಾಗಲು ಜನರು ನ್ಯಾಯಾಲಯಕ್ಕೆ ಪ್ರವೇಶಿಸಲು ಯಾವುದೇ ಹೊಸ ಪಾಸ್ ನೀಡಲಾಗುವುದಿಲ್ಲ ಎಂದು ಹೇಳಲಾಗಿದೆ.

  • 10:19 AM

    ಅಯೋಧ್ಯೆಯ ತೀರ್ಪಿನ ಹಿನ್ನೆಲೆಯಲ್ಲಿ ವಾಟ್ಸಾಪ್, ಫೇಸ್ಬುಕ್ ಮತ್ತು ಟ್ವಿಟರ್‌ಗಳನ್ನು ಮೇಲ್ವಿಚಾರಣೆ ಮಾಡಲು ಗೌತಮ್ ಬುದ್ಧ ನಗರದಲ್ಲಿ ಸೈಬರ್ ಮತ್ತು ಮಾಧ್ಯಮ ಕೋಶವನ್ನು ಸ್ಥಾಪಿಸಲಾಗಿದೆ.

  • 10:19 AM

    ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ ಕರೆಯಲಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್, ಗುಪ್ತಚರ ಬ್ಯೂರೋ (ಐಬಿ) ಮುಖ್ಯಸ್ಥ ಅರವಿಂದ್ ಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

  • 10:16 AM

    ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ತೀರ್ಪು ನೀಡಲು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಸುಪ್ರೀಂ ಕೋರ್ಟ್ ತಲುಪಿದ್ದಾರೆ.

  • 10:15 AM

    ಅಯೋಧ್ಯೆ ವಿವಾದದ ತೀರ್ಪಿನ ಮೊದಲು ಆಗ್ರಾ ಮತ್ತು ಅಲಿಗಢದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

    ಹರಿಯಾಣ, ಜಮ್ಮು ಮತ್ತು ಕಾಶ್ಮೀರ ಮತ್ತು ಮುಂಬೈಗಳಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ.

  • 10:08 AM

    ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 

  • 10:04 AM

    ಅಯೋಧ್ಯೆ ತೀರ್ಪು: ಸೋಲೂ ಅಲ್ಲ, ಗೆಲುವೂ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್
    ಇಂದು ಸುಪ್ರೀಂ ಕೋರ್ಟ್ ನಲ್ಲಿ ಪ್ರಕಟಗೊಳ್ಳಲಿರುವ ಐತಿಹಾಸಿಕ  ಅಯೋಧ್ಯೆ ವಿವಾದದ ತೀರ್ಪಿನ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ದೇಶದಾದ್ಯಂತ ಶಾಂತಿ, ಸುವ್ಯವಸ್ಥೆ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ.

    ಈ ಕುರಿತು ಶುಕ್ರವಾರ ರಾತ್ರಿ ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, "ಹಲವು ದಶಕಗಳಷ್ಟು ಹಳೆಯ ರಾಮಜನ್ಮಭೂಮಿ-ಅಯೋಧ್ಯೆ ಭೂವಿವಾದದ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ಶನಿವಾರ ಪ್ರಕಟಿಸಲಿದೆ. ಇದು ಯಾರ ಗೆಲವೂ ಅಲ್ಲ, ಸೋಲೂ ಅಲ್ಲ. ಆದ್ದರಿಂದ ಎಲ್ಲರೂ ಶಾಂತಿ ಸುವ್ಯಸವ್ಥೆ ಕಾಯ್ದುಕೊಳ್ಳಬೇಕು" ಎಂದು ಮನವಿ ಮಾಡಿದ್ದಾರೆ.

Trending News