ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೂ ಈಗ ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಈಗ ಬ್ಲಾಗ್ ಸಂದೇಶವನ್ನು ರವಾನಿಸಿದ್ದಾರೆ.
ಇತ್ತೀಚಿಗೆ ಗಾಂಧಿನಗರದಿಂದ ಸ್ಪರ್ಧಿಸುವ ವಿಚಾರವಾಗಿ ಅಡ್ವಾಣಿಯವರಿಗೆ ಟಿಕೆಟ್ ನಿರಾಕರಿಸಿ ಅಮಿತ್ ಷಾ ಅವರಿಗೆ ನೀಡಲಾಗಿತ್ತು. ಇದರಿಂದ ಬಿಜೆಪಿಗೆ ಹಲವರು ಹಿರಿಯ ನಾಯಕರನ್ನು ನೋಡಿಕೊಳ್ಳುವ ನೀತಿಗೆ ಆಕ್ರೋಶ ವ್ಯಕ್ತಪಡಿಸಿದ್ದರು.
Veteran BJP leader LK Advani writes a blog ahead of BJP's Foundation Day on April 6. He writes "Right from its inception, BJP has never regarded those who disagree with us politically as our “enemies”, but only as our adversaries." pic.twitter.com/47zCyYCSPN
— ANI (@ANI) April 4, 2019
ಈಗ ಈ ಆರೋಪ ಸರಿಪಡಿಸುವ ನಿಟ್ಟಿನಲ್ಲಿ ಈಗ ಅಡ್ವಾಣಿ ಅವರು ಬ್ಲಾಗ್ ಬರೆದಿದ್ದಾರೆ. ರಾಷ್ಟ್ರ ಮೊದಲು,ಪಕ್ಷ ಅನಂತರ ಸ್ವಂತಿಕೆ ಕೊನೆಗೆ ಎನ್ನುವ ಶೀರ್ಷಿಕೆ ಬರೆದಿರುವ ಅವರು ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವದ ಕುರಿತಾಗಿ ಪ್ರಸ್ತಾಪಿಸಿದ್ದಾರೆ.
"ಸತ್ಯ, ರಾಷ್ಟ್ರ ನಿಷ್ಠೆ, ಮತ್ತು ಪಕ್ಷದ ಒಳಗೆ ಹಾಗೂ ಹೊರಗಡೆ ಇರುವ ಪ್ರಜಾಪ್ರಭುತ್ವ ನೀತಿಗಳು ನಮ್ಮ ಪಕ್ಷದ ಉಗಮದ ಹೋರಾಟಕ್ಕೆ ಮಾರ್ಗದರ್ಶನ ನೀಡಿವೆ. ಸಾಂಸ್ಕೃತಿಕ ರಾಷ್ಟ್ರೀಯತೆ,ಸುರಾಜ್ (ಉತ್ತಮ ಆಡಳಿತ )ಇವೆಲ್ಲ ಅಂಶಗಳಿಗೆ ಪಕ್ಷ ಯಾವಾಗಲೂ ಬದ್ಧವಾಗಿದೆ " ಎಂದು ಬರೆದುಕೊಂಡಿದ್ದಾರೆ.
ಇನ್ನು ಮುಂದುವರೆದು " ನಮ್ಮ ರಾಷ್ಟ್ರೀಯತೆಯಲ್ಲಿ ಯಾರು ರಾಜಕೀಯವಾಗಿ ನಮ್ಮ ವಿಚಾರಗಳನ್ನು ಒಪ್ಪುವುದಿಲ್ಲವೋ ಅವರನ್ನು ನಾವೆಂದಿಗೂ ಕೂಡ ದೇಶ ದ್ರೋಹಿಗಳೆಂದು ಬಿಂಬಿಸಿಲ್ಲ.ನಮ್ಮ ಪಕ್ಷ ಪ್ರತಿಯೊಬ್ಬ ವ್ಯಕ್ತಿ ಆಯ್ಕೆ ಸ್ವಾತಂತ್ರಕ್ಕೆ ಬದ್ದವಾಗಿದೆ ಎಂದು ಅಡ್ವಾಣಿ ಹೇಳಿದ್ದಾರೆ.