Maharashtra: ಕೆಂಪು ಉಗ್ರವಾದದ ವಿರುದ್ಧ C-60 ಕಮಾಂಡೋಗಳಿಗೆ ಸಿಕ್ಕ ಭಾರಿ ಯಶಸ್ಸು, 26 ನಕ್ಸಲರ ಹತ್ಯೆ

Gadchiroli Encounter: ಮಹಾರಾಷ್ಟ್ರದ ಗಡ್ಚಿರೋಲಿ  (Gadchiroli) ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಭೀಕರ ಎನ್‌ಕೌಂಟರ್‌ನಲ್ಲಿ 26 ನಕ್ಸಲೀಯರು ಹತರಾಗಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ಮಹಾರಾಷ್ಟ್ರ ಪೊಲೀಸ್‌ನ ಸಿ-60 ಘಟಕದ ಕಮಾಂಡೋಗಳು ಭಾಗವಹಿಸಿದ್ದರು.

Written by - Nitin Tabib | Last Updated : Nov 13, 2021, 08:58 PM IST
  • ಶನಿವಾರ ಬೆಳಗ್ಗೆ ಗಡಚಿರೋಲಿ ಅರಣ್ಯ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆದಿದೆ.
  • ಈ ಎನ್ಕೌಂಟರ್ ನಲ್ಲಿ 26 ನಕ್ಸಲೀಯರನ್ನು ಮಟ್ಟಹಾಕಲಾಗಿದೆ.
  • ಆ್ಯಂಟಿ ನಕ್ಸಲ್ ವಿಶೇಷ ಪಡೆ ಸಿ-60 ಯುನಿಟ್ ಈ ಎನ್ಕೌಂಟರ್ ನಡೆಸಿದೆ.
Maharashtra: ಕೆಂಪು ಉಗ್ರವಾದದ ವಿರುದ್ಧ C-60 ಕಮಾಂಡೋಗಳಿಗೆ ಸಿಕ್ಕ ಭಾರಿ ಯಶಸ್ಸು, 26 ನಕ್ಸಲರ ಹತ್ಯೆ title=
Gadchiroli Encounter (File Photo)

ನಾಗ್ಪುರ: ಮಹಾರಾಷ್ಟ್ರದ  (Maharashtra) ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಭೀಕರ ಎನ್‌ಕೌಂಟರ್‌ನಲ್ಲಿ 26 ನಕ್ಸಲೀಯರು ಹತರಾಗಿದ್ದಾರೆ. ಎನ್‌ಕೌಂಟರ್‌ನಲ್ಲಿ ಭಾಗಿಯಾಗಿರುವ ಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಶನಿವಾರ ಮುಂಜಾನೆ ಪ್ರಾರಂಭವಾದ ಎನ್‌ಕೌಂಟರ್ ಮಧ್ಯಾಹ್ನದವರೆಗೆ ಮುಂದುವರೆದಿದೆ. ಈ ಎನ್‌ಕೌಂಟರ್‌ನಲ್ಲಿ ಕೋಲ್ಗುಟ್-ದನಾತ್ ಅರಣ್ಯಗಳಲ್ಲಿ ತಲೆಮರೆಸಿಕೊಂಡಿದ್ದ 26 ನಕ್ಸಲೀಯರನ್ನು ಹೊಡೆದುರುಳಿಸಲಾಗಿದೆ.

ಶನಿವಾರ ಬೆಳಗ್ಗೆ ಕಾಡಿನಲ್ಲಿ ಎನ್‌ಕೌಂಟರ್ ನಡೆದಿದೆ
ಜಿಲ್ಲೆಯ ಗ್ಯಾರಪಟ್ಟಿ ಪ್ರದೇಶದಲ್ಲಿ ನಕ್ಸಲೀಯರ ಚಲನವಲನದ ಬಗ್ಗೆ ಮಾಹಿತಿ ಲಭಿಸಿತ್ತು ಎಂದು ಗಡ್ಚಿರೋಲಿ ಎಸ್ಪಿ ಅಂಕಿತ್ ಗೋಯೆಲ್ ತಿಳಿಸಿದ್ದಾರೆ. ಇದಾದ ನಂತರ ಮಹಾರಾಷ್ಟ್ರ ಪೊಲೀಸ್ ನ (Maharashtra Police) ನಕ್ಸಲ್ ನಿಗ್ರಹ ವಿಶೇಷ ದಳದ ಸಿ-60 ಘಟಕ(C-60 Commando Unit) ತನ್ನ ಕಾರ್ಯಾಚರಣೆ ಆರಂಭಿಸಿದೆ. ಶೋಧ ಕಾರ್ಯಾಚರಣೆ ವೇಳೆ ಗ್ಯಾರಪಟ್ಟಿ ದಟ್ಟ ಅರಣ್ಯದಲ್ಲಿ ನಕ್ಸಲೀಯರನ್ನು ಸುತ್ತುವರೆಯಲಾಯಿತು, ದೀರ್ಘ ಕಾಲದವರೆಗೆ ನಡೆದ ಈ  ಎನ್‌ಕೌಂಟರ್‌ನಲ್ಲಿ ನಿಷೇಧಿತ ಸಿಪಿಐ (ನಕ್ಸಲ್) ಮತ್ತು ಪೋಲೀಸರ ಮಧ್ಯೆ ಭಾರಿ ಗುಂಡಿನ ಕಾಳಗ ನಡೆದಿದೆ. 

ಇದನ್ನೂ ಓದಿ-ಉಗ್ರದಾಳಿಯಲ್ಲಿ ಅಸ್ಸಾಂ ರೈಫಲ್ಸ್ ನ ಕಮಾಂಡಿಂಗ್ ಆಫಿಸರ್ ಸೇರಿದಂತೆ ಅವರ ಕುಟುಂಬ ಹುತಾತ್ಮ

26 ನಕ್ಸಲೀಯರನ್ನು ಮಟ್ಟಹಾಕಲಾಗಿದೆ (Naxal Encounter)
ಪೊಲೀಸರ ಪ್ರಕಾರ, ಕಮಾಂಡೋ ಯೂನಿಟ್ ನ (C-60 Commando Unit) ಜಬರ್ದಸ್ತ್ ಆಕ್ಷನ್ ಬಳಿಕ ನಕ್ಸಲೀಯರು ಅಲ್ಲಿಂದ ನಿಧಾನಕ್ಕೆ ಕಾಲ್ಕಿತ್ತರು. ಇದಾದ ಬಳಿಕ ಅಲ್ಲಿ ಅಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ  26 ನಕ್ಸಲೀಯರು ಮೃತಪಟ್ಟಿರುವುದು ದೃಢಪಟ್ಟಿದೆ. ಈ ಎನ್‌ಕೌಂಟರ್‌ನಲ್ಲಿ 3 ಯೋಧರೂ ಕೂಡ ಗಾಯಗೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಕ್ಸಲೀಯರ ವಿರುದ್ಧ ನಡೆದ ಅತ್ಯಂತ ಯಶಸ್ವಿ ಎನ್‌ಕೌಂಟರ್ ಇದಾಗಿದೆ. ಇದರಲ್ಲಿ ಯೋಧರು ಯಾವುದೇ ರೀತಿಯ ಹೆಚ್ಚಿನ ನಷ್ಟವನ್ನು ಅನುಭವಿಸದೆಯೇ ಹಲವು ನಕ್ಸಲೀಯರನ್ನು ಮಟ್ಟಹಾಕಿದ್ದಾರೆ. 

ಇದನ್ನೂ ಓದಿ-Kangana Ranaut Challenge: ನನ್ನ ಈ ಪ್ರಶ್ನೆಗೆ ಉತ್ತರ ಕೊಡಿ, 'ಪದ್ಮಶ್ರೀ' ಪ್ರಶಸ್ತಿಯನ್ನು ಹಿಂದಿರುಗಿಸುವೆ

ಆ್ಯಂಟಿ ನಕ್ಸಲ್ ವಿಶೇಷ ಪಡೆ ಸಿ-60 ಯುನಿಟ್
ನಕ್ಸಲೀಯರನ್ನು ಎದುರಿಸಲು ಆಂಧ್ರಪ್ರದೇಶ ಪೊಲೀಸರು ಗ್ರೇಹೌಂಡ್ ಘಟಕವನ್ನು ರಚಿಸಿದ್ದಾರೆ  ಎಂಬುದು ಇಲ್ಲಿ ಉಲ್ಲೇಖನೀಯ. ಈ ಘಟಕದ ಯೋಧರು ನಕ್ಸಲೀಯರ ಬಟ್ಟೆಯಲ್ಲಿ ಕಾಡಿನಲ್ಲಿ ವಾಸಿಸುತ್ತಾರೆ ಮತ್ತು ಅಲ್ಲಿ ಅವರು ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಮಾವೋವಾದಿಗಳನ್ನು ನಿರ್ಮೂಲನೆ ಮಾಡುತ್ತಾರೆ. ಅವರ ಮಾದರಿಯಲ್ಲಿ ಮಹಾರಾಷ್ಟ್ರದಲ್ಲಿ ಆ್ಯಂಟಿ ನಕ್ಸಲ್ ವಿಶೇಷ ಸ್ಕ್ವಾಡ್ ಸಿ-60 ಘಟಕವನ್ನು (C-60 Commando Unit) ಸಿದ್ಧಪಡಿಸಲಾಗಿದೆ. ಈ ಘಟಕದಲ್ಲಿ, ರಾಜ್ಯ ಪೊಲೀಸರಿಂದ 60 ರಾಪಿಡ್ ಸ್ಪೀಡ್ ಯೋಧರನ್ನು ಆಯ್ಕೆ ಮಾಡಿ ತಂಡದಲ್ಲಿ ಶಾಮೀಲುಗೊಳಿಸಲಾಗಿದೆ. ವಿಶೇಷ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೂ ಹೊಂದಿರುವ ಈ ಸೈನಿಕರು ಕೂಡ ನಕ್ಸಲೀಯರಂತೆ ಕಾಡಿನಲ್ಲಿಯೇ ಉಳಿದು ತಮ್ಮ ಕೆಲಸವನ್ನು ಮಾಡುತ್ತಲೇ ಇರುತ್ತಾರೆ.

ಇದನ್ನೂ ಓದಿ-Jeff Bezos Predictions:ಬಾಹ್ಯಾಕಾಶದಲ್ಲಿ ಜನಿಸುವ ಮನುಷ್ಯರು ಭೂಮಿಗೆ ರಜೆ ಕಳೆಯಲು ಬರುತ್ತಾರಂತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News