ಸಿಎಂ ಆದ ಬಳಿಕ ಮೊದಲ ಬಾರಿಗೆ ಥಾಣೆಗೆ ಆಗಮಿಸಿದ ಏಕನಾಥ್ ಶಿಂಧೆ: ಪತ್ನಿಯಿಂದ ಅದ್ಧೂರಿ ಸ್ವಾಗತ

ಇನ್ನು ಶಿಂಧೆ ಸಿಎಂ ಆಗುತ್ತಾರೆ ಎಂದು ಯಾರಿಬ್ಬರೂ ಊಹಿಸಿರಲಿಲ್ಲ. ಇದೀಗ ಅವರ ಕುಟುಂಬ ಸದಸ್ಯರು ಹಾಗೂ ಬೆಂಬಲಿಗರು ಈ ವಿಶೇಷ ಸಂದರ್ಭವನ್ನು ಸಡಗರದಿಂದ ಆಚರಿಸುತ್ತಿದ್ದಾರೆ. ಈ ಸಂಭ್ರಮದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಏಕನಾಥ್ ಶಿಂಧೆ ಅವರನ್ನು ಸ್ವಾಗತಿಸಲು ಅವರ ಪತ್ನಿ ಬ್ಯಾಂಡ್‌ ಬಾರಿಸುತ್ತಿರುವ ದೃಶ್ಯ ಕಂಡುಬರುತ್ತಿದೆ.

Written by - Bhavishya Shetty | Last Updated : Jul 6, 2022, 01:38 PM IST
  • ಮಹಾರಾಷ್ಟ್ರದ ನೂತನ ಸಿಎಂ ಆಗಿ ಏಕನಾಥ್ ಶಿಂಧೆ ಆಯ್ಕೆ
  • ಮೊದಲ ಬಾರಿಗೆ ಥಾಣೆಗೆ ಆಗಮಿಸಿದ ಏಕನಾಥ್ ಶಿಂಧೆ
  • ಪತ್ನಿ ಲತಾ ಶಿಂಧೆಯಿಂದ ವಿಭಿನ್ನವಾಗಿ ಸ್ವಾಗತ
ಸಿಎಂ ಆದ ಬಳಿಕ ಮೊದಲ ಬಾರಿಗೆ ಥಾಣೆಗೆ ಆಗಮಿಸಿದ ಏಕನಾಥ್ ಶಿಂಧೆ: ಪತ್ನಿಯಿಂದ ಅದ್ಧೂರಿ ಸ್ವಾಗತ title=
Eknath Shinde

ಮಹಾರಾಷ್ಟ್ರದಲ್ಲಿ ಸುಮಾರು 10-12 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಮೇಲಾಟ ಇದೀಗ ಏಕನಾಥ್ ಶಿಂಧೆ ಸಿಎಂ ಆಗುತ್ತಿದ್ದಂತೆಯೇ ಬಹುತೇಕ ಅಂತ್ಯವಾಗಿದೆ. ಮಹಾರಾಷ್ಟ್ರದ ನೂತನ ಸಿಎಂ ಆಗಿ ಏಕನಾಥ್ ಶಿಂಧೆ ಆಯ್ಕೆಯಾದರೆ, ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿದ್ದಾರೆ. ಏಕನಾಥ್ ಶಿಂಧೆ ಅವರಿಗೆ ಇದೊಂದು ದೊಡ್ಡ ಅವಕಾಶ. 

ಇದನ್ನೂ ಓದಿ: ಸಲಿಂಗಿ ಜೋಡಿಯ ಅದ್ಧೂರಿ ವಿವಾಹ : ಇಲ್ಲಿದೆ ಮದುವೆಯ ಫೋಟೋಗಳು

ಇನ್ನು ಶಿಂಧೆ ಸಿಎಂ ಆಗುತ್ತಾರೆ ಎಂದು ಯಾರಿಬ್ಬರೂ ಊಹಿಸಿರಲಿಲ್ಲ. ಇದೀಗ ಅವರ ಕುಟುಂಬ ಸದಸ್ಯರು ಹಾಗೂ ಬೆಂಬಲಿಗರು ಈ ವಿಶೇಷ ಸಂದರ್ಭವನ್ನು ಸಡಗರದಿಂದ ಆಚರಿಸುತ್ತಿದ್ದಾರೆ. ಈ ಸಂಭ್ರಮದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಏಕನಾಥ್ ಶಿಂಧೆ ಅವರನ್ನು ಸ್ವಾಗತಿಸಲು ಅವರ ಪತ್ನಿ ಬ್ಯಾಂಡ್‌ ಬಾರಿಸುತ್ತಿರುವ ದೃಶ್ಯ ಕಂಡುಬರುತ್ತಿದೆ.

ವರದಿಯ ಪ್ರಕಾರ, ಮಹಾರಾಷ್ಟ್ರದ ಹೊಸ ಸಿಎಂ ಏಕನಾಥ್ ಶಿಂಧೆ ಅವರು ಜುಲೈ 5ರಂದು ಮಂಗಳವಾರ ಥಾಣೆ ತಲುಪಿದ್ದಾರೆ. ಸಿಎಂ ಆದ ಬಳಿಕ ಇದು ಅವರ ಮೊದಲ ಭೇಟಿಯಾಗಿದ್ದು, ಈ ಸಂದರ್ಭವನ್ನು ಅವರ ಕುಟುಂಬ ವಿಶೇಷವಾಗಿ ಪರಿಗಣಿಸಿದೆ. ಶಿಂಧೆ ಪತ್ನಿ ಲತಾ ಶಿಂಧೆ ಅವರು ಡ್ರಮ್ಸ್‌ ಬಾರಿಸುವ ಮೂಲಕ ವಿಭಿನ್ನವಾಗಿ ಪತಿಯನ್ನು ಸ್ವಾಗತಿಸಿದ್ದಾರೆ. 

ಇದನ್ನೂ ಓದಿ: ಒಂದು ರೂ.ನಾಣ್ಯದಿಂದ ಹೀಗೆ ಮಾಡಿ: ಆರ್ಥಿಕ ಸಮಸ್ಯೆ ದೂರವಾಗುತ್ತೆ!

ಆಟೋ ಚಾಲಕನಿಂದ ಸಿಎಂ ಸ್ಥಾನದವರೆಗೆ ಪಯಣ:
ಏಕನಾಥ್ ಶಿಂಧೆ ಅವರ ಯಶಸ್ಸಿನ ಕಥೆಯು ಸಿನಿಮಾ ಕಥೆಯಂತಿದೆ. ಥಾಣೆಯ ರಸ್ತೆಗಳಲ್ಲಿ ಆಟೋ ಓಡಿಸುತ್ತಿದ್ದ ಶಿಂಧೆ ಇಂದು ರಾಜ್ಯದ ನಾಯಕನಾಗಿ ಸ್ಥಾನ ಪಡೆದಿದ್ದಾರೆ. ಮೊದಲಿನಿಂದಲೂ ನಾಯಕತ್ವ ಗುಣ ಹೊಂದಿದ್ದ ಅವರು ಶಿವಸೇನೆಯಲ್ಲಿ ಉದ್ಧವ್ ಠಾಕ್ರೆ ವಿರುದ್ಧ ಕಣಕ್ಕಿಳಿದರು. ಬಂಡಾಯ ಶಾಸಕರ ದೊಡ್ಡ ಸೈನ್ಯವು ಅವರೊಂದಿಗೆ ಇತ್ತು. ಏಕಾಏಕಿ 45ಕ್ಕೂ ಹೆಚ್ಚು ಶಾಸಕರು ಅವರ ಜೊತೆ ಗುವಾಹಟಿಗೆ ತೆರಳಿದರು. ಇದೀಗ ಮಹಾ ರಾಜಕೀಯ ಕಲಹ ಅಂತ್ಯಗೊಂಡಿದ್ದು, ಬಿಜೆಪಿ ಪಕ್ಷ ಶಿಂಧೆಗೆ ಬೆಂಬಲ ನೀಡಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News