Government Order! ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ Hello ಹೇಳ್ಬಾರ್ದು, Vande Matram ಹೇಳ್ಬೇಕು!

Government Order ! ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ  ಸರ್ಕಾರವು ಮಹಾರಾಷ್ಟ್ರದ ಸರ್ಕಾರಿ ಕಚೇರಿಗಳಿಗೆ ವಿಶಿಷ್ಟವಾದ ಫರ್ಮಾನು ಹೊರಡಿಸಿದೆ. ಫೋನ್‌ನಲ್ಲಿ ಮಾತನಾಡುವಾಗ ಉದ್ಯೋಗಿಗಳು ಈ ವಿಶೇಷ ಪ್ರೋಟೋಕಾಲ್ ಅನುಸರಿಸಬೇಕಾಗಲಿದೆ.

Written by - Nitin Tabib | Last Updated : Aug 14, 2022, 10:00 PM IST
  • ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಸರ್ಕಾರವು ಮಹಾರಾಷ್ಟ್ರದ ಸರ್ಕಾರಿ ಕಚೇರಿಗಳಿಗೆ ವಿಶಿಷ್ಟವಾದ ಫರ್ಮಾನು ಹೊರಡಿಸಿದೆ.
  • ಫೋನ್‌ನಲ್ಲಿ ಮಾತನಾಡುವಾಗ ಉದ್ಯೋಗಿಗಳು ಈ ವಿಶೇಷ ಪ್ರೋಟೋಕಾಲ್ ಅನುಸರಿಸಬೇಕಾಗಲಿದೆ.
Government Order! ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ Hello ಹೇಳ್ಬಾರ್ದು, Vande Matram ಹೇಳ್ಬೇಕು! title=
Eknath Sindhe Government

Eknath Sindhe Government - ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರ ಇದೀಗ ಸಂಪೂರ್ಣವಾಗಿ ದೇಶಭಕ್ತಿಯ ಬಣ್ಣದಲ್ಲಿ ಮಿಂದೆದ್ದಿದೆ. ಸರ್ಕಾರವು ಅಲ್ಲಿನ ಸರ್ಕಾರಿ ಕಚೇರಿಗಳಿಗೆ ಅಂತಹ ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಿದೆ, ಈ ಫರ್ಮಾನಿನ ಕುರಿತು ಅಲ್ಲಿನ ವಿರೋಧ ಪಕ್ಷಗಳು ಗದ್ದಲವನ್ನು ಸೃಷ್ಟಿಸುವ ಸಾಧ್ಯತೆ ಇದೆ. ಮಹಾರಾಷ್ಟ್ರದ ಮೀನುಗಾರಿಕೆ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುನಗಂಟಿವಾರ್ ಅವರು ಸರ್ಕಾರಿ ಕಚೇರಿಗಳಲ್ಲಿ ಫೋನ್‌ನಲ್ಲಿ ಹಲೋ ಹೇಳುವ ಬದಲು ವಂದೇ ಮಾತರಂ ಹೇಳುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸುಧೀರ್ ಮುನಗಂಟಿವಾರ್, ಹಲೋ ಎಂಬುದು ವಿದೇಶಿ ಪದ, ಆದ್ದರಿಂದ ಅದನ್ನು ತ್ಯಜಿಸುವುದು ಅವಶ್ಯಕ. ವಂದೇ ಮಾತರಂ ಎಂಬುದು ಪ್ರತಿಯೊಬ್ಬ ಭಾರತೀಯನ ಮನದಾಳದ ಭಾವನೆಯೇ ಹೊರತು ಪದವಲ್ಲ. ಇದು ಸಾರ್ವಜನಿಕರ ಭಾವನೆಯಾಗಿದ್ದು, ಇದನ್ನು ಸರ್ಕಾರಿ ಕಚೇರಿಗಳಲ್ಲಿ ಬಳಸುವುದು ಕಡ್ಡಾಯ ಎಂದಿದ್ದಾರೆ.

ಇಲಾಖೆಯ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಂತೆ ಕ್ರಾರ್ಯಪ್ರವೃತ್ತರಾದ ಸಂಸ್ಕೃತಿ ಇಲಾಖೆಯ ಸಚಿವರು
ಮಹಾರಾಷ್ಟ್ರದಲ್ಲಿ ಭಾನುವಾರ ಇಲಾಖೆಗಳ ವಿಭಜನೆ ನಡೆದಿದೆ. ಇದರಲ್ಲಿ ಸುಧೀರ್ ಮುನಗಂಟಿವಾರ್ ಅವರಿಗೆ ಸಾಂಸ್ಕೃತಿಕ ಸಚಿವಾಲಯದ ಜವಾಬ್ದಾರಿಯನ್ನು ನೀಡಿದ ತಕ್ಷಣ, ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಇನ್ನು ಮುಂದೆ ಮಹಾರಾಷ್ಟ್ರದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ನೌಕರರು ವಂದೇ ಮಾತರಂನೊಂದಿಗೆ ದೂರವಾಣಿಯಲ್ಲಿ ಸಂಭಾಷಣೆಯನ್ನು ಪ್ರಾರಂಭಿಸಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-LIC Recruitment 2022 : LIC ಯಲ್ಲಿ 80 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ : ಇಲ್ಲಿದೆ ಡಿಟೈಲ್ಸ್

ಒಟ್ಟಾರೆ ಹೇಳುವುದಾದರೆ ಸರ್ಕಾರಿ ನೌಕರರು ಇನ್ಮುಂದೆ ಹಲೋ ಬದಲು ವಂದೇ ಮಾತರಂ ಹೇಳುವುದು ಕಡ್ಡಾಯವಾಗಿರಲಿದೆ. ವಂದೇ ಮಾತರಂಗೆ ಸಂಬಂಧಿಸಿದ ಸುಗ್ರೀವಾಜ್ಞೆಯ ಅಧಿಕೃತ ಆದೇಶವನ್ನೂ ಹೊರತರಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ITBP Recruitment 2022 : ITBP ಯಲ್ಲಿ 108 ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ : ಇಲ್ಲಿದೆ ಮಾಹಿತಿ 

ವಿರೋಧ ಪಕ್ಷಗಳಿಂದ ಗದ್ದಲ ಸಾಧ್ಯತೆ
ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರದ ಬಗ್ಗೆ ಅಲ್ಲಿನ ಸದನದಲ್ಲಿ ಗದ್ದಲ ಸೃಷ್ಟಿಯಾಗುವ ಸಾಧ್ಯತೆ ಇದೆ. ವಂದೇ ಮಾತರಂ ಹೇಳಲು ಇಷ್ಟಪಡದವರು ಈ ನಿರ್ಧಾರವನ್ನು ವಿರೋಧಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದ ರಾಜಕೀಯದಲ್ಲಿ ಹೊಸ ರಾಜಕೀಯ ಸಂಚಲನ ಸೃಷ್ಟಿಯಾಗುವುದಂತೂ ಗ್ಯಾರಂಟಿ ಎನ್ನಲಾಗುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News