ಮಹಾರಾಷ್ಟ್ರ-ಹರಿಯಾಣ ವಿಧಾನಸಭಾ ಚುನಾವಣೆ: ಬೆಳಿಗ್ಗೆ 8ರಿಂದ ಮತಎಣಿಕೆ ಆರಂಭ

ಹರಿಯಾಣ ವಿಧಾನಸಭಾ ಚುನಾವಣೆ 2019 (Haryana Assembly Elections 2019)  ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2019 (Maharashtra Assembly Elections 2019)ರ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಅಕ್ಟೋಬರ್ 21ರಂದು ಎರಡೂ ರಾಜ್ಯಗಳಲ್ಲಿ ನಡೆದಿದ್ದ ಚುನಾವಣೆಯ ಮತಎಣಿಕೆ ಇಂದು ಬೆಳಿಗ್ಗೆ ಎಂಟು ಗಂಟೆಗೆ ಪ್ರಾರಂಭವಾಗಲಿದೆ.

Last Updated : Oct 24, 2019, 07:49 AM IST
ಮಹಾರಾಷ್ಟ್ರ-ಹರಿಯಾಣ ವಿಧಾನಸಭಾ ಚುನಾವಣೆ: ಬೆಳಿಗ್ಗೆ 8ರಿಂದ ಮತಎಣಿಕೆ ಆರಂಭ title=

ಚಂಡೀಗಢ / ಮುಂಬೈ / ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆ 2019 (Haryana Assembly Elections 2019)  ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2019 (Maharashtra Assembly Elections 2019)ರ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಅಕ್ಟೋಬರ್ 21ರಂದು ಎರಡೂ ರಾಜ್ಯಗಳಲ್ಲಿ ನಡೆದಿದ್ದ ಚುನಾವಣೆಯ ಮತಎಣಿಕೆ ಇಂದು ಬೆಳಿಗ್ಗೆ ಎಂಟು ಗಂಟೆಗೆ ಪ್ರಾರಂಭವಾಗಲಿದೆ.

ಹರಿಯಾಣದಲ್ಲಿ, ಕೆಲವು ಸ್ಥಳಗಳಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ(ಇವಿಎಂ) ಸಣ್ಣಪುಟ್ಟ ತೊಂದರೆ ನಡುವೆ 90 ಸದಸ್ಯರ ವಿಧಾನಸಭೆಯ ಚುನಾವಣೆಗೆ 1.83 ಕೋಟಿಗೂ ಹೆಚ್ಚು ಮತದಾರರಲ್ಲಿ 62 ಪ್ರತಿಶತದಷ್ಟು ಜನರು ಮತ ಚಲಾಯಿಸಿದ್ದಾರೆ. ಅದೇ ಸಮಯದಲ್ಲಿ, ಮಹಾರಾಷ್ಟ್ರದ ಎಲ್ಲಾ 288 ವಿಧಾನಸಭಾ ಸ್ಥಾನಗಳಲ್ಲಿ ಸುಮಾರು 58.61 ರಷ್ಟು ಮತದಾನವಾಗಿದೆ.

- ಈ ರಾಜ್ಯಗಳ ವಿಧಾನಸಭಾ ಚುನಾವಣೆಯೊಂದಿಗೆ ಉತ್ತರಪ್ರದೇಶ ಸೇರಿದಂತೆ 18 ರಾಜ್ಯಗಳ 51 ವಿಧಾನಸಭಾ ಸ್ಥಾನಗಳಲ್ಲಿ ಉಪಚುನಾವಣೆ ನಡೆಯಿತು. ಅವುಗಳ ಫಲಿತಾಂಶವೂ ಇಂದೇ ಹೊರಬರಲಿದೆ.

- ಹರಿಯಾಣ-ಮಹಾರಾಷ್ಟ್ರ ವಿಧಾನಸಭೆ ಫಲಿತಾಂಶಗಳ ಜೊತೆಗೆ, ಇಂದು ಯುಪಿಯ 11 ವಿಧಾನಸಭಾ ಸ್ಥಾನಗಳಲ್ಲಿನ ಉಪಚುನಾವಣೆಯ ಫಲಿತಾಂಶವೂ ಬರಲಿದೆ.

- ನಾಗ್ಪುರದಲ್ಲಿ ಮತ ಎಣಿಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.

ಹರಿಯಾಣದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ: ನಿರ್ಗಮನ ಸಮೀಕ್ಷೆ
ಹರಿಯಾಣ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಸುದ್ದಿ ವಾಹಿನಿಗಳು ಮತ್ತು ಸಮೀಕ್ಷಾ ಸಂಸ್ಥೆಗಳು ಬಿಡುಗಡೆ ಮಾಡಿದ ನಿರ್ಗಮನ ಸಮೀಕ್ಷೆಗಳು ವಿಭಿನ್ನ ಫಲಿತಾಂಶಗಳನ್ನು ಊಹಿಸಿವೆ. ಹೆಚ್ಚಿನ ಸಮೀಕ್ಷಾ ಸಂಸ್ಥೆಗಳು ಬಿಜೆಪಿ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಊಹಿಸಿವೆ. ಆದರೆ ಆಜ್ ತಕ್ ಮತ್ತು ಆಕ್ಸಿಸ್ ಮೈ ಇಂಡಿಯಾ ಹೊರಡಿಸಿದ ನಿರ್ಗಮನ ಸಮೀಕ್ಷೆಯು ಹರಿಯಾಣದ ಮನೋಹರ್ ಲಾಲ್ ಖಟ್ಟರ್ ಸರ್ಕಾರ ಬಹುಮತದಿಂದ ಸ್ವಲ್ಪ ದೂರವಿರಬಹುದು ಎಂದು ತಿಳಿಸಿದೆ. ಆಜ್ ತಕ್-ಆಕ್ಸಿಸ್ ಮೈ ಇಂಡಿಯಾದ ಎಕ್ಸಿಟ್ ಪೋಲ್ ಒಟ್ಟು 90 ರಲ್ಲಿ ಬಿಜೆಪಿಗೆ 32-44 ಸ್ಥಾನಗಳನ್ನು ನೀಡಿದ್ದರೆ, ಕಾಂಗ್ರೆಸ್ 30 ರಿಂದ 42 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

ವಿಶೇಷವೆಂದರೆ, 2014 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗರಿಷ್ಠ 47 ಸ್ಥಾನಗಳು ದೊರೆತಿದ್ದು, ಕಾಂಗ್ರೆಸ್ 15 ಸ್ಥಾನಗಳನ್ನು ಪಡೆದಿತ್ತು. ಐಎನ್‌ಎಲ್‌ಡಿಗೆ 19 ಸ್ಥಾನಗಳು, ಹರಿಯಾಣ ಜನ್‌ಹಿತ್ ಕಾಂಗ್ರೆಸ್ ಎರಡು ಸ್ಥಾನಗಳು, ಸ್ವತಂತ್ರರು ಮತ್ತು ಇತರರು ಏಳು ಸ್ಥಾನಗಳನ್ನು ಪಡೆದರು. ಮನೋಹರ್ ಲಾಲ್ ಖಟ್ಟರ್ ನೇತೃತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ಬಹುಮತ ಸರ್ಕಾರವನ್ನು ರಚಿಸಿತು.

ಮಹಾರಾಷ್ಟ್ರದಲ್ಲಿ ಎನ್‌ಡಿಎಯ ವಿಜಯದ ಮುನ್ಸೂಚನೆ:
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಡುಗಡೆಯಾದ ನಿರ್ಗಮನ ಸಮೀಕ್ಷೆಯು ಬಿಜೆಪಿ + ಶಿವಸೇನೆ ಮೈತ್ರಿಕೂಟದ ಎನ್‌ಡಿಎ ಗೆಲ್ಲುತ್ತದೆ ಎಂದು ಅಂದಾಜಿಸಿದೆ. ವಿಭಿನ್ನ ಸಮೀಕ್ಷೆಗಳಲ್ಲಿ, ಎನ್‌ಡಿಎಯ ಗೆಲುವಿನ ಅಂಚು ಕಡಿಮೆಯಾಗಲಿದೆ ಎಂದು ತಿಳಿಸಿದೆ. ಮಹಾರಾಷ್ಟ್ರ ವಿಧಾನಸಭೆಯ 288 ವಿಧಾನಸಭಾ ಸ್ಥಾನಗಳಿಗೆ 2014 ರ ಚುನಾವಣೆಯಲ್ಲಿ ಬಿಜೆಪಿ 123 ಸ್ಥಾನಗಳನ್ನು ಗಳಿಸುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಮಹಾರಾಷ್ಟ್ರದಲ್ಲಿ ಬಿಜೆಪಿ ಮೊದಲ ಬಾರಿಗೆ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. ಅದೇ ಸಮಯದಲ್ಲಿ ಕಾಂಗ್ರೆಸ್ 42 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಶಿವಸೇನೆ 63 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಶರದ್ ಪವಾರ್ ಅವರ ಆರ್‌ಎನ್‌ಪಿಗೆ 41 ಸ್ಥಾನಗಳು ಸಿಕ್ಕಿದ್ದವು.

Trending News