ಇದೆಂಥಾ ರಸ್ತೆ ನಿರ್ಮಾಣ..! ಬಹುಷಃ ರೋಡ್‌ ಮೇಲೆ ʼಡಾಂಬರ್‌ ಬೇಡ್‌ ಶೀಟ್‌ʼ ಹಾಕಿದಾರೆ ಅನ್ಸುತ್ತೆ..

ಹೊಸದಾಗಿ ನಿರ್ಮಿಸಿದ ರಸ್ತೆಯನ್ನು ಗ್ರಾಮಸ್ಥರು ಬರಿಗೈಯಲ್ಲಿ ಟಾರ್‌ ಸಮೇತ ಎತ್ತಿ ತೋರಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

Written by - Krishna N K | Last Updated : Jun 1, 2023, 05:51 PM IST
  • ಹೊಸದಾಗಿ ನಿರ್ಮಿಸಿದ ರಸ್ತೆಯನ್ನು ಡಾಂಬರ್‌ ಸಮೇತ ಎತ್ತಿ ತೋರಿಸಿದ ಗ್ರಾಮಸ್ಥರು.
  • ಕಳಪೆ ರಸ್ತೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
  • ಈ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಇದೆಂಥಾ ರಸ್ತೆ ನಿರ್ಮಾಣ..! ಬಹುಷಃ ರೋಡ್‌ ಮೇಲೆ ʼಡಾಂಬರ್‌ ಬೇಡ್‌ ಶೀಟ್‌ʼ ಹಾಕಿದಾರೆ ಅನ್ಸುತ್ತೆ.. title=

Road viral video : ಸೋಷಿಯಲ್‌ ಮೀಡಿಯಾದಲ್ಲಿ 38 ಸೆಕೆಂಡುಗಳ ವೀಡಿಯೊ ಒಂದು ಸಖತ್‌ ವೈರಲ್‌ ಆಗುತ್ತಿದೆ. ಸ್ಥಳೀಯ ಗುತ್ತಿಗೆದಾರರು ನಿರ್ಮಿಸಿದ ರಸ್ತೆಯ ಕೆಳಗೆ ಟಾರ್ಪಾಲಿನ್ ತರಹದ ವಸ್ತುವನ್ನು ಇರಿಸಿ ಮೇಲೆ ಡಾಂಬರ್‌ ಹಾಕಿರುವ ದೃಶ್ಯ ವಿಡಿಯೋದಲ್ಲಿದೆ. ವಿಡಿಯೋದಲ್ಲಿ ರಾಣಾ ಠಾಕೂರ್ ಎಂಬ ಸ್ಥಳೀಯ ಗುತ್ತಿಗೆದಾರನ ಕಳಪೆ ಕಾಮಗಾರಿಯನ್ನು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಟಾರ್ಪಲ್ ಕೆಳಗೆ ಟಾರ್ಪಲ್ ಹಾಕಿ ನಕಲಿ ರಸ್ತೆ ಮಾಡಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.  

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಅಂಬಾದ್ ತಾಲೂಕಿನ ಕರ್ಜತ್-ಹಸ್ತ್ ಪೋಖಾರಿಯಲ್ಲಿ ಈ ಘಟನೆ ನಡೆದಿದೆ. ಈ ರಸ್ತೆಯನ್ನು ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆಯಡಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ಮಾಹಿತಿ ಪ್ರಕಾರ, ರಸ್ತೆ ನಿರ್ಮಿಸಲು ಜರ್ಮನ್ ತಂತ್ರಜ್ಞಾನವನ್ನು ಬಳಸುವುದಾಗಿ ಗುತ್ತಿಗೆದಾರರು ಹೇಳಿದ್ದರಂತೆ. ಆದರೆ, ವೀಡಿಯೋದಲ್ಲಿ ನೋಡಿದಂತೆ ಕಳಪೆ ಡಾಂಬರೀಕರಣ ನಡೆದಿದೆ ಎಂದು ಗ್ರಾಮಸ್ಥರು ಬಹಿರಂಗಪಡಿಸಿದ್ದಾರೆ. ಸ್ಥಳೀಯ ಜನರು ಮಹಾರಾಷ್ಟ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. 

ಇದನ್ನೂ ಓದಿ: ʼಮತ್ತೇರಿಸುತ್ತೆ ನಿರೋಧ.ʼ.! ಮಾದಕ ವಸ್ತುವಾಗಿ ಬಳಕೆಯಾಗುತ್ತಿದೆ ʼಕಾಂಡೋಮ್‌ʼ

ಮೇಕ್ ಇನ್ ಇಂಡಿಯಾ ವೆಬ್‌ಸೈಟ್ ಪ್ರಕಾರ, ಭಾರತವು 63.32 ಲಕ್ಷ ಕಿಲೋಮೀಟರ್ ಉದ್ದದ ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವನ್ನು ಹೊಂದಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ರಸ್ತೆ ನಿರ್ಮಾಣವನ್ನು ಕಾರ್ಯಗತಗೊಳಿಸಲು ವಿವಿಧ ಏಜೆನ್ಸಿಗಳನ್ನು ಹೊಂದಿದೆ. ಇವುಗಳಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೋಕೋಪಯೋಗಿ ಇಲಾಖೆಗಳು, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ, ಗಡಿ ರಸ್ತೆಗಳ ಸಂಸ್ಥೆ ಮತ್ತು ಇಂಡಿಯನ್ ಅಕಾಡೆಮಿ ಆಫ್ ಹೈವೇ ಇಂಜಿನಿಯರ್ಸ್ (IAHE) ಸೇರಿವೆ. ಸಾಂಪ್ರದಾಯಿಕ ರಸ್ತೆ ನಿರ್ಮಾಣದಲ್ಲಿ, ಜಲ್ಲಿ ಮತ್ತು ಮರಳಿನ ಮಿಶ್ರಣವನ್ನು ಬಾಳಿಕೆ ಖಚಿತಪಡಿಸಿಕೊಳ್ಳಲು ಬಳಸಲಾಗುತ್ತದೆ ಎಂದು ವರದಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಎಂಜಿನಿಯರ್‌ಗಳು ರಸ್ತೆಯ ಬಾಳಿಕೆ ಹೆಚ್ಚಿಸಲು ಕಾಂಕ್ರೀಟ್ ಬಳಸಲು ಪ್ರಾರಂಭಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News