Meesho ದಲ್ಲಿ ಡ್ರೋನ್ ಕ್ಯಾಮೆರಾ ಆರ್ಡರ್‌ ಮಾಡಿದವರಿಗೆ ಸಿಕ್ಕಿದ್ದೇನು ನೋಡಿ.!

ಭಾರತದಲ್ಲಿ ಹಬ್ಬದ ಸೀಸನ್ ಬಂದಿದ್ದು, ಆನ್‌ಲೈನ್ ವೆಬ್‌ಸೈಟ್‌ಗಳು ಭರ್ಜರಿ ಆಫರ್‌ಗಳನ್ನು ನೀಡಿವೆ. ದೀಪಾವಳಿ ಸೇಲ್ ಶುರುವಾಗಿದೆ.

Written by - Chetana Devarmani | Last Updated : Sep 28, 2022, 01:16 PM IST
  • ವೆಬ್‌ಸೈಟ್‌ಗಳಲ್ಲಿ ದೀಪಾವಳಿ ಸೇಲ್ ಶುರು
  • ಡ್ರೋನ್ ಕ್ಯಾಮೆರಾ ಆರ್ಡರ್‌ ಮಾಡಿದವರಿಗೆ ಸಿಕ್ತು ಆಲೂಗಡ್ಡೆ
  • ನಳಂದದ ಪರ್ವಾಲ್‌ಪುರದಲ್ಲಿ ಘಟನೆ
Meesho ದಲ್ಲಿ ಡ್ರೋನ್ ಕ್ಯಾಮೆರಾ ಆರ್ಡರ್‌ ಮಾಡಿದವರಿಗೆ ಸಿಕ್ಕಿದ್ದೇನು ನೋಡಿ.! title=
ದೀಪಾವಳಿ ಸೇಲ್

Man Recieve Potato Instead Of Drone: ಭಾರತದಲ್ಲಿ ಹಬ್ಬದ ಸೀಸನ್ ಬಂದಿದ್ದು, ಆನ್‌ಲೈನ್ ವೆಬ್‌ಸೈಟ್‌ಗಳು ಭರ್ಜರಿ ಆಫರ್‌ಗಳನ್ನು ನೀಡಿವೆ. ದೀಪಾವಳಿ ಸೇಲ್ ಶುರುವಾಗಿದೆ. ಮಾರಾಟದ ಋತುವಿನೊಂದಿಗೆ, ಗ್ರಾಹಕರು ಉತ್ತಮ  ಆಫರ್‌ಗಳನ್ನು ಪಡೆಯಲು ಶಾಪಿಂಗ್ ವೆಬ್‌ಸೈಟ್‌ಗಳಲ್ಲಿ ಖರೀದಿಸುತ್ತಿದ್ದಾರೆ. ಆದಾಗ್ಯೂ, ಕೆಲವರು ಮೋಸ ಹೋಗುತ್ತಾರೆ. ದೆಹಲಿಯ ವ್ಯಕ್ತಿಯೊಬ್ಬರಿಗೆ ಲ್ಯಾಪ್‌ಟಾಪ್ ಬದಲಿಗೆ ಡಿಟರ್ಜೆಂಟ್ ಬಾರ್ ಸಿಕ್ಕಿದೆ. ಇದೀಗ ಬಿಹಾರದಿಂದಲೂ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಇತ್ತೀಚೆಗೆ, ನಳಂದದ ಪರ್ವಾಲ್‌ಪುರದಲ್ಲಿ, ಮೀಶೋದಲ್ಲಿ ಆರ್ಡರ್‌ ಮಾಡಿದ ಡ್ರೋನ್ ಕ್ಯಾಮೆರಾಕ್ಕೆ ಬದಲಾಗಿ ವ್ಯಕ್ತಿಯೊಬ್ಬರಿಗೆ ಒಂದು ಕಿಲೋ ಆಲೂಗಡ್ಡೆ ಸಿಕ್ಕಿದೆ.

ಇದನ್ನೂ ಓದಿ : ಬಾಲ್ಯ ವಿವಾಹ: ಮದುವೆ ಮಾಡಿಕೊಂಡ ಕಂಡಕ್ಟರ್, ಮಾಡಿಸಿದ ಅರ್ಚಕರಿಗೆ ಕಠಿಣ ಶಿಕ್ಷೆ

ವಿಡಿಯೋದಲ್ಲಿ, ಗ್ರಾಹಕರು ಅದನ್ನು ರೆಕಾರ್ಡ್ ಮಾಡುವಾಗ ಪಾರ್ಸೆಲ್ ಅನ್ನು ಅನ್‌ಬಾಕ್ಸ್ ಮಾಡಲು ಮೀಶೋ ಡೆಲಿವರಿ ಎಕ್ಸಿಕ್ಯೂಟಿವ್‌ಗೆ ಕೇಳುತ್ತಾರೆ. ಡೆಲಿವರಿ ಬಾಯ್ ಪಾರ್ಸೆಲ್ ತೆರೆದಾಗ ಅದರಲ್ಲಿ ಡ್ರೋನ್ ಕ್ಯಾಮೆರಾ ಬದಲಿಗೆ 10 ಆಲೂಗಡ್ಡೆ ಪತ್ತೆಯಾಗಿದೆ. ಏತನ್ಮಧ್ಯೆ, ಡೆಲಿವರಿ ಎಕ್ಸಿಕ್ಯೂಟಿವ್ ಅದರಲ್ಲಿ ತನ್ನ ಪಾತ್ರವಿಲ್ಲ ಎಂದು ಹೇಳಿಕೊಂಡಿದ್ದಾನೆ.

 

 

ಚೈತನ್ಯ ಕುಮಾರ್ ಎಂದು ಗುರುತಿಸಲಾದ ವ್ಯಕ್ತಿ, ತಾನು ಡಿಜೆಐ ಡ್ರೋನ್ ಕ್ಯಾಮೆರಾವನ್ನು ಮೀಶೋನಿಂದ ರಿಯಾಯಿತಿ ದರದಲ್ಲಿ ಆರ್ಡರ್‌ ಮಾಡಿದ್ದೆ ಎಂದು ಹೇಳಿದರು. ಅವರು ಆರ್ಡರ್ ಮಾಡಿದ ಡ್ರೋನ್ ಕ್ಯಾಮೆರಾ ಮಾರುಕಟ್ಟೆ ಬೆಲೆ 84,999 ರೂ. ಆದರೆ ಮೀಶೋನಲ್ಲಿ 10,212 ರೂ.ಗೆ ಲಭ್ಯವಿತ್ತು. ಅವರು ಸ್ವಲ್ಪ ಅನುಮಾನಗೊಂಡು ಈ ಬಗ್ಗೆ ಕಂಪನಿಗೆ ವಿವರಣೆ ನೀಡಲು ನಿರ್ಧರಿಸಿದರು. ಭಾರಿ ಆಫರ್ ಇದೆ ಹಾಗಾಗಿ ಕಡಿಮೆ ಬೆಲೆಗೆ ಕ್ಯಾಮೆರಾ ಸಿಗುತ್ತಿದೆ ಎಂದು ತಿಳಿಸಿದರು. ಆದರೆ ಸಿಕ್ಕಿದ್ದು ಆಲೂಗಡ್ಡೆ. ಸಂಪೂರ್ಣ ಪಾವತಿಯನ್ನು ಆನ್‌ಲೈನ್‌ನಲ್ಲಿ ಮಾಡಿದ್ದು, ಬಹುದೊಡ್ಡ ಮೋಸ ಹೋಗಿದ್ದಾರೆ. ಈ ಬಗ್ಗೆ ಅವರು ದೂರು ದಾಖಲಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪರ್ವಲಪುರ ಎಸ್‌ಎಚ್‌ಒ ತಿಳಿಸಿದ್ದಾರೆ.

ಇದನ್ನೂ ಓದಿ :  ಅಚ್ಚರಿಯಾದರೂ ಸತ್ಯ.! ಮರದ ಕಡ್ಡಿ ಬದಲು ತಂತಿ ಬಳಸಿ ಗೂಡು ಕಟ್ಟಿದ ಕಾಗೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News