ನವದೆಹಲಿ: ಒಡಿಶಾದ ಮುಕ್ತಿಕಾಂತ್ ಎನ್ನುವ ಮೂವತ್ತು ವರ್ಷದ ಯುವಕನೊಬ್ಬ ಈ ಹಿಂದೆ ಪ್ರಧಾನಿ ಮೋದಿ ಯವರು ನೀಡಿದ್ದ ಭರವಸೆಗಳನ್ನು ಈಡೇರಿಸಬೇಕೆಂದು ಸುಮಾರು 1350 ಕೀಮಿ ಪಾದಯಾತ್ರೆಗೈದಿದ್ದಾನೆ.
ವೃತ್ತಿಯಲ್ಲಿ ಮೂರ್ತಿ ತಯಾರಕನಾಗಿರುವ ಈತ ತಮ್ಮ ಗ್ರಾಮಕ್ಕೆ ವೈದ್ಯಕೀಯ ಮತ್ತು ಮೂಲಭೂತ ಸೌಕರ್ಯಗಳು ನೀರಿಕ್ಷೆಯಲ್ಲಿ ಈ ಕಾರ್ಯವನ್ನು ಕೈಗೊಂಡಿದ್ದಾನೆ.
ಈ ಹಿಂದೆ 2015 ರಲ್ಲಿ ಪ್ರಧಾನಿ ಮೋದಿ ಒಡಿಷಾ ಪ್ರವಾಸಕೈಗೊಂಡಿದ್ದಾಗ ಇಸ್ಪಾಟ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ದರ್ಜೆಗೆ ಏರಿಸುತ್ತೇನೆ ಮತ್ತು ಬ್ರಹಮಣಿ ಸೇತುವೆ ನಿರ್ಮಾಣವನ್ನು ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದರು.
ಆದರೆ ನಾಲ್ಕು ವರ್ಷಗಳು ಕಳೆದರು ಇದ್ಯಾವುದು ಆಗದೆ ಇರುವುದರ ಹಿನ್ನೆಲೆಯಲ್ಲಿ ಮಣಿಕಾಂತ್ ಈಗ ಒಡಿಷಾ ದಿಂದ ದೆಹಲಿವರೆಗೆ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಹಿಂದೆ ನೀಡಿದ್ದ ಭರವಸೆಗಳನ್ನು ಮತ್ತೆ ನೆನಪು ಮಾಡಿಕೊಡುವ ಪ್ರಯತ್ನವನ್ನು ಮಾಡಲಿದ್ದಾರೆ ಎಂದು ತಿಳಿದುಬಂದಿದೆ.