Horrible: ಟ್ರ್ಯಾಕ್ಟರ್ ಚಾಲಕನನ್ನು 500 ಮೀಟರ್‌ವರೆಗೆ ಎಳೆದೊಯ್ದ ಟ್ರಕ್‌, ವ್ಯಕ್ತಿಯ ದೇಹ ಛಿದ್ರಛಿದ್ರ..!

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಸುಖದೇವ್ ಅವರ ತಂದೆ ಜಸ್ವಿಂದರ್ ಸಿಂಗ್ ನೇತೃತ್ವದಲ್ಲಿ ಶವವನ್ನು ಅಡ್ಡಾ ಶಹಪುರದಲ್ಲಿ ಇರಿಸಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ 6 ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಯಿತು.

Written by - Puttaraj K Alur | Last Updated : Aug 27, 2023, 01:33 PM IST
  • ಹಿಂಬದಿಯಿಂದ ಟ್ರಾಕ್ಟರ್‍ಗೆ ಟ್ರಕ್ ಡಿಕ್ಕಿ ಹೊಡೆದ 21 ವರ್ಷದ ಯುವಕ ಸಾವು
  • ಪಂಜಾಬ್‍ನ ಹೋಶಿಯಾರ್‌ಪುರದ ಶಹಪುರ್ ಗ್ರಾಮದ ಬಳಿ ದುರ್ಘಟನೆ ನಡೆದಿದೆ
  • ಟೈರ್‍ಗಳ ನಡುವೆ ಸಿಲುಕಿದ ಟ್ರಾಕ್ಟರ್ ಚಾಲಕನನ್ನು 500 ಮೀಟರ್ ಎಳೆದೊಯ್ದ ಟ್ರಕ್‍
Horrible: ಟ್ರ್ಯಾಕ್ಟರ್ ಚಾಲಕನನ್ನು 500 ಮೀಟರ್‌ವರೆಗೆ ಎಳೆದೊಯ್ದ ಟ್ರಕ್‌, ವ್ಯಕ್ತಿಯ ದೇಹ ಛಿದ್ರಛಿದ್ರ..! title=
ಚಾಲಕನನ್ನು 500 ಮೀಟರ್ ಎಳೆದೊಯ್ದ ಟ್ರಕ್‍!

ನವದೆಹಲಿ: ಟ್ರಾಕ್ಟರ್ ಚಾಲಕನೊಬ್ಬ ಹಿಂಬದಿಯಿಂದ ಡಿಕ್ಕಿ ಹೊಡೆದು ಟ್ರಕ್‌ನ ಟೈರ್‌ಗಳ ನಡುವೆ ಸಿಲುಕಿದ್ದಾನೆ. ಇದು ಗೊತ್ತಾಗದೆ ಟ್ರಗಕ್ ಆತನನ್ನು 500 ಮೀಟರ್‌ವರೆಗೆ ಎಳೆದೊಯ್ದಿದ್ದು, ಟ್ರಾಕ್ಟರ್ ಚಾಲಕನ ದೇಹ ಛಿದ್ರಛಿದ್ರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.   

ಶನಿವಾರ ಬೆಳಗ್ಗೆ ಶಹಪುರ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ ಎಂದು ಹೋಶಿಯಾರ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಮೇಜರ್ ಸಿಂಗ್ ಹೇಳಿದ್ದಾರೆ. ಇದರಿಂದ ಕೋಪಗೊಂಡ ಸಂಬಂಧಿಕರು ಮತ್ತು ಸ್ಥಳೀಯರು ಟ್ರಕ್ ಚಾಲಕನನ್ನು ಬಂಧಿಸುವಂತೆ ಒತ್ತಾಯಿಸಿ ಸುಮಾರು 6 ಗಂಟೆಗಳ ಕಾಲ ರಸ್ತೆತಡೆ ನಡೆಸಿದರು. ಮೃತನನ್ನು ಸುಖದೇವ್ ಸಿಂಗ್ (21) ಎಂದು ಗುರುತಿಸಲಾಗಿದೆ. ಸ್ಟೋನ್ ಕ್ರಷರ್ ತುಂಬಿದ್ದ ಟ್ರಕ್ ಮರಳು ತುಂಬಿದ ಟ್ರಾಕ್ಟರ್ ಟ್ರೈಲರ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮುಂದಿನ 48 ಗಂಟೆಯಲ್ಲಿ ಈ ಭಾಗಗಳಲ್ಲಿ ವರುಣಾಘಾತ: ಇಡೀ ವಾರ ಗುಡುಗು, ಸಿಡಿಲು ಸಹಿತ ಜಲಪ್ರವಾಹದ ಮುನ್ನೆಚ್ಚರಿಕೆ

ಟ್ರಕ್ ಡಿಕ್ಕಿಯಿಂದ ರೂಪನಗರ ಜಿಲ್ಲೆಯ ಭಾಂಗ್ಲಾನ್ ಖೇರಾ ಗ್ರಾಮದ ಸುಖದೇವ್ ಸಿಂಗ್, ವಾಹನದ ಟೈರ್‌ಗಳ ನಡುವೆ ಸಿಕ್ಕಿಹಾಕಿಕೊಂಡರು. ವೇಗವಾಗಿ ಚಲಿಸುತ್ತಿದ್ದ ಟ್ರಕ್ ಟ್ರ್ಯಾಕ್ಟರ್ ಅನ್ನು ಸುಮಾರು 500 ಮೀಟರ್‌ವರೆಗೆ ಎಳೆದುಕೊಂಡು ಹೋಗಿದೆ. ಪರಿಣಾಮ ಸುಖದೇವ್ ಸಿಂಗ್ ದೇಹವು ಛಿದ್ರಛಿದ್ರವಾಗಿದೆ. ಘಟನೆ ಬಳಿಕ ಟ್ರಕ್ ಚಾಲಕ ತನ್ನ ವಾಹನ ಸಮೇತ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

‘ಈ ದುರ್ಘಟನೆಯಲ್ಲಿ ಸುಖದೇವ್ ಅವರ ದೇಹದ ಭಾಗಗಳು ವಿವಿಧ ದಿಕ್ಕುಗಳಲ್ಲಿ ಚದುರಿಹೋಗಿದ್ದವು. ಬಳಿಕ ಟ್ರಕ್ ಚಾಲಕನು ತನ್ನ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ನಾವು ಹುಡುಕಾಟ ನಡೆಸುತ್ತಿದ್ದೇವೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಕೃಷ್ಣನಲ್ಲ, ಅರ್ಜುನನಲ್ಲ… ಮಹಾಭಾರತದ ಈ ಪಾತ್ರವೆಂದರೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರಿಗೆ ಅಚ್ಚುಮೆಚ್ಚು!

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಸುಖದೇವ್ ಅವರ ತಂದೆ ಜಸ್ವಿಂದರ್ ಸಿಂಗ್ ನೇತೃತ್ವದಲ್ಲಿ ಶವವನ್ನು ಅಡ್ಡಾ ಶಹಪುರದಲ್ಲಿ ಇರಿಸಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ 6 ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಯಿತು. ಆರೋಪಿಯನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಆರೋಪಿ ಚಾಲಕನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News