ಬಿಲ್‌ ಗೇಟ್ಸ್‌ ತಯಾರಿಸಿದ ರೊಟ್ಟಿ ನೋಡಿ ʼಸೂಪರ್‌ʼ ಎಂದ ಪಿಎಂ ಮೋದಿ..!

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಹೊಸ ವೀಡಿಯೋ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆಯಿತು. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪಿಎಂ ಮೋದಿ ಬಿಲ್‌ ಗೇಟ್ಸ್‌ ವೀಡಿಯೊದ ಕುರಿತು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ, ಬಿಲ್‌ ಗೇಟ್ಸ್‌ ತಯಾರಿಸಿದ ರೊಟ್ಟಿ ನೋಡಿ ʼಸೂಪರ್‌ʼ ಅಂತ ಶೀರ್ಷಿಕೆ ನೀಡಿದ್ದಾರೆ.

Written by - Krishna N K | Last Updated : Feb 4, 2023, 07:55 PM IST
  • ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಹೊಸ ವೀಡಿಯೋ ಒಂದು ವೈರಲ್‌ ಆಗಿದೆ.
  • ಈ ವೈರಲ್‌ ವಿಡಿಯೋದಲ್ಲಿ ಬಿಲ್‌ ಗೇಟ್ಸ್‌ ಅವರು ರೊಟ್ಟಿ ಮಾಡುತ್ತಿರುವುದನ್ನು ಕಾಣಬಹುದು.
  • ಇದೀಗ ಈ ವಿಡಿಯೋವನ್ನು ಪಿಎಂ ಮೋದಿ ಹಂಚಿಕೊಂಡು ʼಸೂಪರ್‌ʼ ಅಂತ ಶೀರ್ಷಿಕೆ ಕೊಟ್ಟಿದ್ದಾರೆ.
ಬಿಲ್‌ ಗೇಟ್ಸ್‌ ತಯಾರಿಸಿದ ರೊಟ್ಟಿ ನೋಡಿ ʼಸೂಪರ್‌ʼ ಎಂದ ಪಿಎಂ ಮೋದಿ..! title=

Bill Gates cooks Roti : ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಹೊಸ ವೀಡಿಯೋ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆಯಿತು. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪಿಎಂ ಮೋದಿ ಬಿಲ್‌ ಗೇಟ್ಸ್‌ ವೀಡಿಯೊದ ಕುರಿತು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ, ಬಿಲ್‌ ಗೇಟ್ಸ್‌ ತಯಾರಿಸಿದ ರೊಟ್ಟಿ ನೋಡಿ ʼಸೂಪರ್‌ʼ ಅಂತ ಶೀರ್ಷಿಕೆ ನೀಡಿದ್ದಾರೆ.

ಹೌದು..  ಸೋಷಿಯಲ್‌ ಮೀಡಿಯಾ ಸ್ಟಾರ್‌ ಐಟಾನ್ ಬರ್ನಾಥ್ ಅವರು ವೀಡಿಯೊವನ್ನು ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಹಾಗೂ ಟ್ಟಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಬಿಲ್ ಗೇಟ್ಸ್ ಭಾರತೀಯ ಖಾದ್ಯಗಳನ್ನು ಬೇಯಿಸಲು ಪ್ರಯತ್ನಿಸುತ್ತಿರುವುದನ್ನು ನೋಡಿದ ನೆಟಿಜನ್ಸ್‌ ಖುಷಿಪಟ್ಟಿದ್ದಾರೆ. ವೀಡಿಯೊದಲ್ಲಿ, ಐಟಾನ್‌ ಬಿಹಾರ ಪ್ರವಾಸದ ಸಮಯದಲ್ಲಿ ರೌಂಡ್ ರೊಟ್ಟಿ ಮಾಡುವ ಕಲೆಯನ್ನು ಕಲಿತಿದ್ದೇನೆ ಎಂದು ಬಹಿರಂಗಪಡಿಸಿದರು.

ಇದನ್ನೂ ಓದಿ: ಅದಾನಿ ಷೇರು ಕುಸಿತ ಪ್ರಕರಣ: ಕೇಂದ್ರ ಸಚಿವ ಪಿಯೂಷ್ ಗೊಯಲ್ ಹೇಳಿದ್ದೇನು?

ಇನ್ನು ಇದೇ ವೇಲೆ ಬಿಲ್‌ ಗೇಟ್ಸ್ ಅವರ ಅಡುಗೆ ಕೌಶಲ್ಯವನ್ನು ಪರೀಕ್ಷೆಗೆ ಒಳಪಡಿಸಲಾಯಿತು, ಅವರು ಹಿಟ್ಟನ್ನು ತಯಾರಿಸುವುದು, ಒತ್ತುವುದು, ತಟ್ಟಿದ ನಂತರ ಬಿಸಿ ಪ್ಯಾನ್ ರೊಟ್ಟಿಯನ್ನು ಹಾಕಿ ಬೆಯಿಸುವುದನ್ನು ಕಾಣಬಹುದು. ಈ ವಿಡಿಯೋವನ್ನುಹಂಚಿಕೊಂಡಿರುವ ಐಟಾನ್‌, "ಬಿಲ್‌ಗೇಟ್ಸ್ ಮತ್ತು ನಾನು ಒಟ್ಟಿಗೆ ಭಾರತೀಯ ರೋಟಿಯನ್ನು ತಯಾರಿಸಿದೆವು. ನಾನು ಭಾರತದ ಬಿಹಾರದಿಂದ ಹಿಂತಿರುಗಿದೆ, ಅಲ್ಲಿ ಗೋಧಿ ಬೆಳೆಯುವ ರೈತರನ್ನು ಭೇಟಿಯಾದೆ, ಅವರ ಇಳುವರಿಯು ಹೊಸ ಆರಂಭಿಕ ಬಿತ್ತನೆ ತಂತ್ರಜ್ಞಾನಗಳಿಗೆ ಧನ್ಯವಾದಗಳು ಮತ್ತು "ದೀದಿ ಕಿ ರಸೋಯಿ" ಕ್ಯಾಂಟೀನ್‌ಗಳ ಮಹಿಳೆಯರು ರೊಟ್ಟಿ ಮಾಡುವ ವಿಧಾನವನ್ನು ಹಂಚಿಕೊಂಡರು ಎಂದು ಬರ್ನಾಥ್ ಟ್ವೀಟ್ ಮಾಡಿದ್ದರು.

modi

ಇನ್ನು ಇದೇ ವಿಡಿಯೋವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಂಚಿಕೊಂಡಿದ್ದಾರೆ. ಅಲ್ಲದೆ, ʼಅದ್ಭುತ. ಭಾರತದಲ್ಲಿ ಇತ್ತೀಚಿನ ರಾಗಿಯನ್ನು ಹೆಚ್ಚು ಬಳಸಲಾಗುತ್ತಿದೆ. ಇದು ಆರೋಗ್ಯಕರಕ್ಕೆ ಹೆಸರುವಾಸಿಯಾಗಿದೆ. ನೀವು ಮಾಡಲು ಪ್ರಯತ್ನಿಸಬಹುದಾದ ಹಲವಾರು ರಾಗಿ ಭಕ್ಷ್ಯಗಳಿವೆ.ʼ ಅಂತ ಸಲಹೆ ನೀಡಿದ್ದಾರೆ. ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News