ಇದು ವಿಶ್ವದ ಅತಿ ದುಬಾರಿ ಮಾವು: ಕೆಜಿ ಬೆಲೆ ಬರೋಬ್ಬರಿ 2.70 ಲಕ್ಷ ರೂ! ಈ ಹಣ್ಣಿನ ವಿಶೇಷತೆ ಕೇಳಿದ್ರೆ ಹುಬ್ಬೇರುತ್ತೆ…

Most Expensive Mango in the World: ವಿಶ್ವದ ಅತ್ಯಂತ ದುಬಾರಿ ಮಾವು ಯಾವುದು ಗೊತ್ತಾ? ಯಾವ ರೀತಿಯ ಮಾವು ಪ್ರಪಂಚದಲ್ಲಿ ಹೆಚ್ಚು ದುಬಾರಿಯಾಗಿದೆ? ಈ ಬಗ್ಗೆ ನಿಮಗೆ ತಿಳಿದಿಲ್ಲದಿದ್ದೆ, ನಾವಿಂದು ಮಾಹಿತಿ ನೀಡಲಿದ್ದೇವೆ. ಇದರ ಬೆಲೆ ಮತ್ತು ಬಣ್ಣ ಎರಡೂ ಕೂಡ ಭಾರೀ ಭಿನ್ನವಾಗಿದೆ. ಮಾವಿನ ಅತ್ಯಂತ ದುಬಾರಿ ವಿಧವೆಂದರೆ ಮಿಯಾಜಾಕಿ ಮಾವು.

Written by - Bhavishya Shetty | Last Updated : Jun 12, 2023, 08:49 AM IST
    • ಅಲ್ಫೋನ್ಸೊ, ಲಾಂಗ್ಡಾ, ಮಾಲ್ಡಾ ಮತ್ತು ಇತರ ಹಲವು ತಳಿಗಳ ಮಾವುಗಳನ್ನು ಭಾರತದಲ್ಲಿ ಬೆಳೆಯಲಾಗುತ್ತದೆ
    • ಭಾರತವು ಪ್ರಪಂಚದಾದ್ಯಂತ ತಾಜಾ ಮಾವಿನಹಣ್ಣನ್ನು ರಫ್ತು ಮಾಡುವ ಪ್ರಮುಖ ದೇಶವಾಗಿದೆ
    • ವಿಶ್ವದ ಅತ್ಯಂತ ದುಬಾರಿ ಮಾವು ಯಾವುದು ಗೊತ್ತಾ? ಯಾವ ರೀತಿಯ ಮಾವು ಪ್ರಪಂಚದಲ್ಲಿ ಹೆಚ್ಚು ದುಬಾರಿಯಾಗಿದೆ?
ಇದು ವಿಶ್ವದ ಅತಿ ದುಬಾರಿ ಮಾವು: ಕೆಜಿ ಬೆಲೆ ಬರೋಬ್ಬರಿ 2.70 ಲಕ್ಷ ರೂ! ಈ ಹಣ್ಣಿನ ವಿಶೇಷತೆ ಕೇಳಿದ್ರೆ ಹುಬ್ಬೇರುತ್ತೆ…  title=
Miyazaki Mango

Most Expensive Mango in the World: ನಮ್ಮ ಭಾರತವನ್ನು ಮಾವಿನ ನಾಡು ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೆ ಮಾವನ್ನು ‘ಹಣ್ಣುಗಳ ರಾಜ’ ಎಂದೂ ಕರೆಯುತ್ತಾರೆ. ಭಾರತದ ಪ್ರಮುಖ ಮಾವು ಉತ್ಪಾದಕ ರಾಜ್ಯಗಳ ಬಗ್ಗೆ ಮಾತನಾಡುವುದಾದರೆ ಉತ್ತರ ಪ್ರದೇಶ, ಬಿಹಾರ, ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡು ಇದರಲ್ಲಿ ಬರುತ್ತದೆ. ಆದರೆ ಉತ್ತರ ಪ್ರದೇಶದಲ್ಲಿ 23.47% ರಷ್ಟು ಪ್ರಮಾಣದಲ್ಲಿ ಮಾವು ಬೆಳೆಯುವ ಕಾರಣ ದೇಶಾದ್ಯಂತ ಮಾವಿನ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ.

ಇದನ್ನೂ ಓದಿ: Health Tipes: ಕೊತ್ತಂಬರಿ ನೀರಿನ ಅದ್ಭುತ ಆರೋಗ್ಯ ಪ್ರಯೋಜನಗಳು !

ಬೈಂಗನಪಲ್ಲಿ, ಹಿಮ್ಸಾಗರ್, ದುಸ್ಸೆಹ್ರಿ, ಅಲ್ಫೋನ್ಸೊ, ಲಾಂಗ್ಡಾ, ಮಾಲ್ಡಾ ಮತ್ತು ಇತರ ಹಲವು ತಳಿಗಳ ಮಾವುಗಳನ್ನು ಭಾರತದಲ್ಲಿ ಬೆಳೆಯಲಾಗುತ್ತದೆ. ಭಾರತವು ಪ್ರಪಂಚದಾದ್ಯಂತ ತಾಜಾ ಮಾವಿನಹಣ್ಣನ್ನು ರಫ್ತು ಮಾಡುವ ಪ್ರಮುಖ ದೇಶವಾಗಿದೆ.

ಆದರೆ ವಿಶ್ವದ ಅತ್ಯಂತ ದುಬಾರಿ ಮಾವು ಯಾವುದು ಗೊತ್ತಾ? ಯಾವ ರೀತಿಯ ಮಾವು ಪ್ರಪಂಚದಲ್ಲಿ ಹೆಚ್ಚು ದುಬಾರಿಯಾಗಿದೆ? ಈ ಬಗ್ಗೆ ನಿಮಗೆ ತಿಳಿದಿಲ್ಲದಿದ್ದೆ, ನಾವಿಂದು ಮಾಹಿತಿ ನೀಡಲಿದ್ದೇವೆ. ಇದರ ಬೆಲೆ ಮತ್ತು ಬಣ್ಣ ಎರಡೂ ಕೂಡ ಭಾರೀ ಭಿನ್ನವಾಗಿದೆ. ಮಾವಿನ ಅತ್ಯಂತ ದುಬಾರಿ ವಿಧವೆಂದರೆ ಮಿಯಾಜಾಕಿ ಮಾವು.

ನೇರಳೆ ಬಣ್ಣದ ಮಾವಿನ ಹಣ್ಣುಗಳು ಅಥವಾ ಮಿಯಾಝಾಕಿ ಮಾವಿನ ಹಣ್ಣುಗಳು ಜಪಾನ್‌ ನ ಮಿಯಾಜಾಕಿ ನಗರದಲ್ಲಿ ಬೆಳೆಯುವ ವಿಶ್ವದ ಅತ್ಯಂತ ದುಬಾರಿ ಮಾವುಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಈ ಮಾವನ್ನು ಭಾರತ ಮತ್ತು ಬಾಂಗ್ಲಾದೇಶದಲ್ಲಿ ಸಹ ಬೆಳೆಸಲಾಗುತ್ತದೆ. ಇದು ಥೈಲ್ಯಾಂಡ್ ಮತ್ತು ಫಿಲಿಪೈನ್ ನಲ್ಲಿಯೂ ಕಂಡುಬರುತ್ತದೆ.

ಮಧ್ಯಪ್ರದೇಶದ ಜಬಲ್‌ಪುರದಲ್ಲೂ ಈ ತಳಿಯ ಎರಡು ಮಾವಿನ ಮರಗಳನ್ನು ಬೆಳೆಸಲಾಗುತ್ತಿದ್ದು, ಅವುಗಳಿಗೆ ರಕ್ಷಣೆ ಒದಗಿಸಲು ವಿಶೇಷ ತರಬೇತಿ ಪಡೆದ ನಾಯಿಗಳನ್ನು ನಿಯೋಜಿಸಲಾಗಿದೆ ಎಂದು ಕೆಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಿಯಾಜಾಕಿ ಮಾವಿನ ಬೆಲೆ ಕೆಜಿಗೆ 2.70 ಲಕ್ಷ ರೂ. ಇದೆ.

ಮಿಯಾಜಾಕಿ ಮಾವಿನ ವಿಶೇಷತೆ ಏನು ಗೊತ್ತಾ?

ಈ ರೀತಿಯ ಮಾವಿನ ಕೃಷಿಗೆ ಬಿಸಿ ವಾತಾವರಣ ಮತ್ತು ದೀರ್ಘ ಗಂಟೆಗಳ ಸೂರ್ಯನ ಬೆಳಕು ಬೇಕಾಗುತ್ತದೆ. ಈ ಮಾವಿನಹಣ್ಣುಗಳ ತೂಕವು ಸುಮಾರು 350 ಗ್ರಾಂಗಳಷ್ಟಿರುತ್ತದೆ. ಅವುಗಳ ಗಾತ್ರ ಮತ್ತು ಬಣ್ಣದಿಂದಾಗಿ ಅವುಗಳನ್ನು ಸನ್ಶೈನ್ ಮೊಟ್ಟೆಗಳು ಎಂದೂ ಕರೆಯುತ್ತಾರೆ.

ಇದನ್ನೂ ಓದಿ: 21 ದಿನಗಳ ಕಾಲ ಈ ರಾಶಿಯವರ ಜಾತಕದಲ್ಲಿ ಅದ್ಭುತವೋ ಅದ್ಭುತ! ಸಾಮಾಜಿಕ ಗೌರವ-ಅಪಾರ ಧನಸಂಪತ್ತು ಪ್ರಾಪ್ತಿ

ಮಿಯಾಜಾಕಿ ಮಾವು ಜಪಾನ್‌ ನ ಮಿಯಾಜಾಕಿಯಲ್ಲಿ ತೈಯೊ-ನೋ-ಟೊಮಾಗೊ ಎಂದೂ ಕರೆಯಲ್ಪಡುತ್ತದೆ. ಈ ಮಾವಿನಹಣ್ಣುಗಳು ಹಣ್ಣಾದಾಗ ನೇರಳೆ ಬಣ್ಣಕ್ಕೆ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಆಕಾರದಲ್ಲಿ ಡೈನೋಸಾರ್ ಮೊಟ್ಟೆಗಳಂತೆ ಕಾಣುತ್ತವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News