ನವದೆಹಲಿ: ಕೇಂದ್ರದ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮೂಲಕ ಟೀಕಾ ಪ್ರಹಾರ ನಡೆಸಿರುವ ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ' ಮೋದಿ ಸರ್ಕಾರವು ಆರ್ಥಿಕ ಸುಧಾರಣೆಗೆ ಬದಲು ವಿಭಜನೆ ಮತ್ತು ಧ್ರುವೀಕರಣ ನೀತಿ ಅನುಸರಿಸುವುದರಲ್ಲಿ ತಲ್ಲೀನವಾಗಿದೆ ಎಂದು ಕಿಡಿ ಕಾರಿದ್ದಾರೆ.
ಶ್ರೀಮಂತ ಸಾಲಗಾರರ ಪಾವತಿಸದ ಸಾಲಗಳನ್ನು ಕಡಿತಗೊಳಿಸಲು ಮತ್ತು ತೆರಿಗೆ ಕಡಿತಕ್ಕೆ ಸರ್ಕಾರ ಉತ್ಸಾಹ ಹೊಂದಿರುವ ವಿಚಾರವಾಗಿ ಟೀಕಿಸಿದ ಅವರು, ಆದರೆ ಆರ್ಥಿಕ ನಿಧಾನಗತಿಯ ಬಗ್ಗೆ ಯಾವುದೇ ಕಾಳಜಿಯನ್ನು ತೋರುಸುತ್ತಿಲ್ಲ ಎಂದರು. ಕೃಷಿ ಬಿಕ್ಕಟ್ಟು ಮತ್ತು ಗ್ರಾಮೀಣ ಆದಾಯದಲ್ಲಿನ ಕುಸಿತ ಸಂಗತಿಗಳು ಬಹಳ ದಿನಗಳಿಂದಲೂ ಚಾಲ್ತಿಯಲ್ಲಿವೆ. ಆದರೆ, ಮೋದಿ ಸರ್ಕಾರವು ವಿಭಜನೆ ಮತ್ತು ಧ್ರುವೀಕರಣದ ಪ್ರಯತ್ನದಲ್ಲಿ ನಿರತವಾಗಿದೆ ಎಂದು ಯೆಚೂರಿ ಹೇಳಿದರು.
Farmers, landless wage workers, workers in cities, youngsters, women looking for jobs, lakhs of sacked workers in auto, textiles and other sectors, industry workers, small entrepreneurs: its an endless list: Modi govt’s policies have hurt all sections, except rich cronies. https://t.co/lNdPnWjukj
— Sitaram Yechury (@SitaramYechury) October 18, 2019
ಮಾಧ್ಯಮ ವರದಿಯ ಪ್ರಕಾರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ, ಗ್ರಾಮೀಣ ಭಾರತವು ಮೌಲ್ಯವು ಶೇಕಡಾ ರಷ್ಟು ಏರಿಕೆಯಾಗಿದೆ, ಇದು ಈ ಹಿಂದಿನ ವರ್ಷದಲ್ಲಿ ವರದಿಯಾದ ಶೇಕಡಾ 20 ಕ್ಕಿಂತ ತೀವ್ರ ನಿಧಾನವಾಗಿದೆ. ಅದೆ ನಗರ ಭಾರತ ಶೇ 8 ರಷ್ಟು ಏರಿಕೆಯಾಗಿದ್ದು, ಆದರೆ ಇದರ ಹಿಂದಿನ ವರ್ಷ ಇದರ ಬೆಳವಣಿಗೆ 14 ರಷ್ಟಿತ್ತು ಎಂದು ವರದಿಯಾಗಿದೆ.
"ರೈತರು, ಭೂಹೀನ ಕೂಲಿ ಕಾರ್ಮಿಕರು, ನಗರಗಳಲ್ಲಿ ಕೆಲಸ ಮಾಡುವವರು, ಯುವಕರು, ಉದ್ಯೋಗ ಹುಡುಕುತ್ತಿರುವ ಮಹಿಳೆಯರು, ಆಟೋ, ಜವಳಿ ಮತ್ತು ಇತರ ಕ್ಷೇತ್ರಗಳಲ್ಲಿ ಕೆಲಸದಿಂದ ತೆಗೆದು ಹಾಕಿದ ಲಕ್ಷಾಂತರ ಕಾರ್ಮಿಕರು, ಕೈಗಾರಿಕಾ ಕಾರ್ಮಿಕರು, ಸಣ್ಣ ಉದ್ಯಮಿಗಳು: ಇದರ ಅಂತ್ಯವಿಲ್ಲದ ಪಟ್ಟಿ: ಮೋದಿ ಸರ್ಕಾರದ ನೀತಿಗಳು ಎಲ್ಲ ವಿಭಾಗಗಳನ್ನು ನೋಯಿಸಿವೆ, ಆದರೆ ಶ್ರೀಮಂತ ಗೆಳೆಯರನ್ನು ಹೊರತುಪಡಿಸಿ' ಎಂದು ಅವರು ಟ್ವೀಟ್ ಮಾಡಿದ್ದಾರೆ.