ಮಗನಿಗೆ ಕಚ್ಚಿದ ನಾಯಿಯನ್ನು ಹೊಡೆದು ಕೊಂದ ವ್ಯಕ್ತಿ.. ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಯ್ತು viral Video

MP man kills dog: ಸುಮಾರು ಒಂದು ತಿಂಗಳ ಹಿಂದೆ ಗ್ವಾಲಿಯರ್ ಜಿಲ್ಲೆಯ ಸಿಮಾರಿಯಾಟಲ್ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಮಗನಿಗೆ ಕಚ್ಚಿದ ಬೀದಿ ನಾಯಿಯನ್ನು (stray dog) ಕ್ರೂರವಾಗಿ ಕೊಂದಿದ್ದಾರೆ. ಭಾನುವಾರದಂದು ಸಾಮಾಜಿಕ ಮಾಧ್ಯಮದಲ್ಲಿ (social media) ಕ್ರೂರ ಹತ್ಯೆಯ ವಿಡಿಯೋ ವೈರಲ್ (Viral Video) ಆಗಿದೆ.  ಇದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. 

Edited by - ZH Kannada Desk | Last Updated : Dec 1, 2021, 03:19 PM IST
  • ಮಗನಿಗೆ ಕಚ್ಚಿದ ನಾಯಿಯನ್ನು ಹೊಡೆದು ಕೊಂದ ವ್ಯಕ್ತಿ
  • ಸಾಮಾಜಿಕ ಮಾಧ್ಯಮದಲ್ಲಿ ಕ್ರೂರ ಹತ್ಯೆಯ ವಿಡಿಯೋ ವೈರಲ್
  • ದೂರು ದಾಖಲಿಸಿದ PETA ಕಾರ್ಯಕರ್ತರು
ಮಗನಿಗೆ ಕಚ್ಚಿದ ನಾಯಿಯನ್ನು ಹೊಡೆದು ಕೊಂದ ವ್ಯಕ್ತಿ.. ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಯ್ತು viral Video

ಭೋಪಾಲ್ (ಮಧ್ಯಪ್ರದೇಶ): ಗ್ವಾಲಿಯರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಮಗನಿಗೆ ಕಚ್ಚಿದ ಬೀದಿ ನಾಯಿಯನ್ನು (stray dog) ಕ್ರೂರವಾಗಿ ಕೊಂದಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. 

ಸುಮಾರು ಒಂದು ತಿಂಗಳ ಹಿಂದೆ ಸಿಮಾರಿಯಾಟಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಭಾನುವಾರದಂದು ಸಾಮಾಜಿಕ ಮಾಧ್ಯಮದಲ್ಲಿ (social media) ಕ್ರೂರ ಹತ್ಯೆಯ ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡ PETA ಕಾರ್ಯಕರ್ತರೊಬ್ಬರು (animal activist) ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ದೇಹತ್ ಪೊಲೀಸ್ ಠಾಣೆಯ ಆನಂದ್ ಕುಮಾರ್ ತಿಳಿಸಿದ್ದಾರೆ.

ದೂರದಿಂದ ಚಿತ್ರೀಕರಿಸಲಾದ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ನಾಯಿಯನ್ನು ಹೊಡೆಯುತ್ತಿರುವ ದೃಶ್ಯ ಸೆರೆಯಾಗಿದೆ. ನಂತರ ಅದರ ಕಾಲನ್ನು ಆ ವ್ಯಕ್ತಿ ಕತ್ತರಿಸುತ್ತಾರೆ. ಈ ವೇಳೆ ನಾಯಿಯು ನೋವಿನಿಂದ ಕಿರುಚುವ ಶಬ್ದ ಮನಕಲಕುವಂತಿದೆ. 

ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ನ ಕಾರ್ಯಕರ್ತರೊಬ್ಬರು ಗ್ವಾಲಿಯರ್ ಪೊಲೀಸರಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ದೂರಿನ ಮೇರೆಗೆ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಂಘಿ ತಿಳಿಸಿದ್ದಾರೆ. 

ಗ್ರಾಮಸ್ಥರ ಪ್ರಕಾರ, ಆರೋಪಿ ಸಾಗರ್ ವಿಶ್ವಾಸ್ ತನ್ನ ಮಗನ ಮೇಲೆ ನಾಯಿ ದಾಳಿ ಮಾಡಿದ್ದರಿಂದ ಕೋಪಗೊಂಡು ಹೀಗೆ ಮಾಡಿದ್ದಾರೆ (MP man kills dog). ಈ ನಾಯಿಯು ಗ್ರಾಮದ ಇತರ ಐದು ಜನರನ್ನು ಕಚ್ಚಿದೆಯಂತೆ.

ಘಟನೆಗೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾದ ಆಧಾರದ ಮೇಲೆ ನ್ಯಾಯಾಲಯ ಮುಂದೆ ಹಾಜರಾಗಲು ನೊಟೀಸ್ ಜಾರಿ ಮಾಡಲಾಗುತ್ತದೆ ಎಂದು ಪೋಲಿಸರು ಹೇಳಿದರು. ಪೀಪಲ್ ಫಾರ್ ಅನಿಮಲ್ಸ್ (PFA) ಎನ್‌ಜಿಒ ಕಾರ್ಯಕರ್ತೆ ಛಾಯಾ ತೋಮರ್ ಅವರ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 429 ಅಡಿಯಲ್ಲಿ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. 

More Stories

Trending News