ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ದೇಶವನ್ನು ಒಗ್ಗೂಡಿಸಲು ಬಿಜೆಪಿಯಿಂದ ವರ್ಚುವಲ್ ರ್ಯಾಲಿಗಳನ್ನು ಆಯೋಜಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭಾನುವಾರ ಹೇಳಿದ್ದಾರೆ.
'ಇದು ಚುನಾವಣಾ ರ್ಯಾಲಿ ಅಲ್ಲ. ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಸಾರ್ವಜನಿಕರ ಮನೋಸ್ಥೈರ್ಯವನ್ನು ಹೆಚ್ಚಿಸುವ ವರ್ಚುವಲ್ ರ್ಯಾಲಿಯಾಗಿದೆ 'ಎಂದು ಬಿಹಾರ ಜನಸಮ್ವದ್ ರ್ಯಾಲಿಯಲ್ಲಿ ಅವರು ಹೇಳಿದರು.'ವೈರಸ್ ವಿರುದ್ಧ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ಕೋಟ್ಯಾಂತರ ಕರೋನಾ ಯೋಧರಿಗೆ ನಾನು ನಮಸ್ಕರಿಸಲು ಬಯಸುತ್ತೇನೆ. ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ ಮತ್ತು ಇತರರು, ಅವರ ಕೊಡುಗೆಯನ್ನು ಸ್ಮರಿಸಲು ಬಯಸುತ್ತೇನೆ' ಎಂದರು.
ಈ ವರ್ಷದ ಕೊನೆಗೆ ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಮಿತ್ ಶಾ ಈ ಭಾಷಣ ಮಾಡಿದ್ದಾರೆ ಎಂದು ರಾಜಕೀಯ ವಿಶ್ಲೇಷಣೆ ಗಳು ಹೇಳುತ್ತಿವೆ.
ಚುನಾವಣೆಗಳಿವೆ, ಬಿಹಾರ ರಾಜ್ಯದ ಜನರು ನಿತೀಶ್ ಕುಮಾರ್ ಅವರನ್ನು ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರಕ್ಕೆ ತಂದು ಮತ್ತೆ ಸರ್ಕಾರ ರಚಿಸಲು ಸಹಾಯ ಮಾಡುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ, 'ಎಂದು ಶಾ ಅವರು ರಾಜ್ಯದಲ್ಲಿ ಮಾಡಿದ ಕೆಲಸದ ಅಂಕಿ-ಅಂಶಗಳನ್ನು ವಿವರಿಸಿದ ನಂತರ ಹೇಳಿದರು.