ಮುಸ್ಲಿಮರನ್ನು ನಾಯಿಮರಿಗಳಿಗೆ ಹೋಲಿಸುವಾತ ಪ್ರಧಾನಿ ಆದಾನೆಂದು ಭಾವಿಸಿರಲಿಲ್ಲ

2002 ರ ಗುಜರಾತ್ ಗಲಭೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆ ಪ್ರಸ್ತಾಪಿಸಿದ ಮಣಿಶಂಕರ್ ಅಯ್ಯರ್.

Last Updated : Aug 11, 2018, 06:45 PM IST
ಮುಸ್ಲಿಮರನ್ನು ನಾಯಿಮರಿಗಳಿಗೆ ಹೋಲಿಸುವಾತ ಪ್ರಧಾನಿ ಆದಾನೆಂದು ಭಾವಿಸಿರಲಿಲ್ಲ title=
Pic: ANI

ನವದೆಹಲಿ: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಚರ್ಚೆಯಾಗುವ ಮಣಿಶಂಕರ್ ಅಯ್ಯರ್ ಈಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. 'ಮುಸ್ಲಿಮರನ್ನು ನಾಯಿಮರಿಗಳಿಗೆ ಹೋಲಿಸುವಾತ ಪ್ರಧಾನಿ ಆದಾನೆಂದು ಭಾವಿಸಿರಲಿಲ್ಲ' ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಡಿಯಾ ಇಂಟರ್‌ನ್ಯಾಶನಲ್‌ ಸೆಂಟರ್‌ನಲ್ಲಿ ಅಸಹಿಷ್ಣುತೆ ಹಾಗೂ ರಾಷ್ಟ್ರೀಯ ಅಭಿಯಾನದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡುತ್ತಿದ್ದ ಅವರು, 2002ರಲ್ಲಿ ನಡೆದಿದ್ದ ಗುಜರಾತ್‌ ಗುಜರಾತ್ ಹತ್ಯಾಕಾಂಡದಲ್ಲಿ ಮುಸ್ಲಿಮರು ಜೀವಕಳೆದುಕೊಂಡಿದ್ದರ ಬಗ್ಗೆ ನೋವಿದೆಯಾ ಎಂದು ನರೇಂದ್ರ ಮೋದಿ ಅವರನ್ನು ಪ್ರಶ್ನಿಸಲಾಗಿತ್ತು, ಅದಕ್ಕೆ ಕಾರಿನಡಿ ಒಂದು ನಾಯಿಮರಿ ಸಿಲುಕಿದರೂ ಸಹ ನನಗೆ ನೋವಾಗುತ್ತದೆ ಎಂದಿದ್ದರು. ಮುಸ್ಲಿಮರನ್ನು ನಾಯಿಮರಿಗೆ ಹೋಲಿಕೆ ಮಾಡಿದ್ದ ವ್ಯಕ್ತಿ ದೇಶದ ಪ್ರಧಾನಿಯಾಗುತ್ತಾರೆ ಎಂದುಕೊಂಡಿರಲಿಲ್ಲ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. 

ಗುಜರಾತ್ ಹತ್ಯಾಕಾಂಡವಾದಾಗ 24 ದಿನಗಳ ಅವಧಿಯಲ್ಲಿ ಒಮ್ಮೆಯೂ ಮುಸ್ಲಿಂ ನಿರಾಶ್ರಿತರ ಶಿಬಿರಗಳಿಗೆ ಮೋದಿ ಭೇಟಿ ನೀಡಿರಲಿಲ್ಲ. ಅಂದಿನ ಪ್ರಧಾನಿ ವಾಜಪೇಯಿ ಅವರು ಆಗಮಿಸಿದಾಗಷ್ಟೇ ಅಹ್ಮದಾಬಾದಿನ ಶಾ ಅಲಂ ಮಸೀದಿಗೆ ಭೇಟಿ ನೀಡಿದ್ದರು. ಪ್ರಧಾನಿ ಜತೆಗೆ ಹೋಗುವುದು ಅವರಿಗೆ ಶಿಷ್ಟಾಚಾರದ ಅನಿವಾರ್ಯತೆಯಾಗಿತ್ತು. ಇಂತಹ ವ್ಯಕ್ತಿ ದೇಶದ ಪ್ರಧಾನಿಯಾಗುತ್ತಾರೆ ಎಂದುಕೊಂಡಿರಲಿಲ್ಲ ಎಂದು ಅಯ್ಯರ್ ಹೇಳಿದ್ದಾರೆ. 

ಮಣಿಶಂಕರ್ ಅಯ್ಯರ್ ಪ್ರಧಾನಿ ಮೋದಿ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹಲವು ಬಾರಿ ಅವರು ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಪ್ರಧಾನ ಮಂತ್ರಿ ವಿರುದ್ಧ ನಿಂದನೀಯ ಹೇಳಿಕೆ ಕಾರಣಗಳಿಂದಾಗಿ ಕಾಂಗ್ರೆಸ್ ನಿಂದ ಮಣಿಶಂಕರ್ ಅಯ್ಯರ್ ಅವರನ್ನು ಅಮಾನತ್ತುಗೊಳಿಸಲಾಗಿದೆ.

ಪ್ರಧಾನಿ ಮೋದಿ ವಿರುದ್ಧ ಮಣಿ ಶಂಕರ್ ಅಯ್ಯರ್ ನೀಡಿರುವ 5 ವಿವಾದಾತ್ಮ ಹೇಳಿಕೆಗಳು

Trending News