New Population Policy Announced: ಹೊಸ 'ಜನಸಂಖ್ಯಾ ನೀತಿ'ಯನ್ನು ಜಾರಿಗೊಳಿಸಿದ CM Yogi, ಅತಿ ಹೆಚ್ಚು ಜನಸಂಖ್ಯೆ ಬಡತನಕ್ಕೆ ಮೂಲ ಎಂದ Adityanath

New Population Policy Announced In UP - ವಿಶ್ವ ಜನಸಂಖ್ಯಾ ದಿನಾಚರಣೆಯ (Wrold Population Day 2021) ಅಂಗವಾಗಿ  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (UP CM Yogi Adityanath) ಅವರು ರಾಜ್ಯದಲ್ಲಿ 2021-30ರ ಜನಸಂಖ್ಯಾ ನೀತಿಯನ್ನು (New Population Policy) ಭಾನುವಾರ ಪ್ರಕಟಿಸಿದ್ದಾರೆ. 

Written by - Nitin Tabib | Last Updated : Jul 11, 2021, 01:59 PM IST
  • ರಾಜ್ಯದಲ್ಲಿ ನೂತನ ಜನಸಂಖ್ಯಾ ನೀತಿ ಜಾರಿಗೆ ತಂದ ಉತ್ತರ ಪ್ರದೇಶ ಸರ್ಕಾರ,
  • ಮುಖ್ಯಮಂತ್ರಿಗಳ ನಿವಾಸದಲ್ಲಿ ನೀತಿ ಬಿಡುಗಡೆ ಮಾಡಿದ ಸಿಎಂ ಯೋಗಿ ಆದಿತ್ಯನಾಥ್
  • ಕಾರ್ಯಕ್ರಮದಲ್ಲಿ ಸಿಎಂ ಯೋಗಿ Population Stability Fortnight ಉದ್ಘಾಟನೆ ಕೂಡ ಮಾಡಿದ್ದಾರೆ.
New Population Policy Announced: ಹೊಸ 'ಜನಸಂಖ್ಯಾ ನೀತಿ'ಯನ್ನು ಜಾರಿಗೊಳಿಸಿದ CM Yogi, ಅತಿ ಹೆಚ್ಚು ಜನಸಂಖ್ಯೆ ಬಡತನಕ್ಕೆ ಮೂಲ ಎಂದ Adityanath title=
New Population Policy (Photo Courtesy - ANI)

ಲಖನೌ: New Population Policy Announced In UP - ವಿಶ್ವ ಜನಸಂಖ್ಯಾ ದಿನಾಚರಣೆಯ (Wrold Population Day 2021) ಅಂಗವಾಗಿ  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (UP CM Yogi Adityanath) ಅವರು ರಾಜ್ಯದಲ್ಲಿ 2021-30ರ ಜನಸಂಖ್ಯಾ ನೀತಿಯನ್ನು (New Population Policy) ಭಾನುವಾರ ಪ್ರಕಟಿಸಿದ್ದಾರೆ. ಈ ಸಂದರ್ಭದಲ್ಲಿ, ಜನಸಂಖ್ಯೆ ಹೆಚ್ಚಳ  ಅಭಿವೃದ್ಧಿಯ ಹಾದಿಯಲ್ಲಿ ಅಡ್ಡಿಯಾಗಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ಕಾಲಕಾಲಕ್ಕೆ ಕಳವಳ ವ್ಯಕ್ತಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಕಳೆದ ನಾಲ್ಕು ದಶಕಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಯಾವ ದೇಶಗಳಲ್ಲಿ, ರಾಜ್ಯಗಳಲ್ಲಿ ಈ ಕುರಿತು ಪ್ರಯತ್ನ ನಡೆದಿವೆಯೋ ಅಲ್ಲಿ ಸಕಾರಾತ್ಮಕ ಫಲಿತಾಂಶಗಳು ಹೊರಬಂದಿವೆ ಎಂದು ಅವರು ಹೇಳಿದ್ದಾರೆ.

ವಿಶ್ವ ಜನಸಖ್ಯಾ ದಿನಾಚರಣೆಯ ಅಂಗವಾಗಿ ಮುಖ್ಯಮಂತ್ರಿಗಳ ನಿಯ್ವಾಸದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಿಎಂ ಯೋಗಿ Population Stability Fortnight ಉದ್ಘಾಟನೆ ಕೂಡ ಮಾಡಿದ್ದಾರೆ. ಹೆಚ್ಚಿನ ಜನಸಂಖ್ಯೆ ಬಡತನಕ್ಕೆ (Poverty) ಒಂದು ಮೂಲ ಕಾರಣ.  ಈ ಹೊಸ ಜನಸಂಖ್ಯಾ (Population) ನೀತಿಯಲ್ಲಿ ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ದೇಶದಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆಯ ಕುರಿತು ನಾವು ಆಲೋಚಿಸಬೇಕಿದೆ ಎಂದು ಯೋಗಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ತಮ್ಮ ರಾಜ್ಯದ ಕುರಿತು ಉಲ್ಲೇಖಿಸಿರುವ ಸಿಎಂ ಯೋಗಿ ಆದಿತ್ಯನಾಥ್ (Yogi Adityanath), ಉತ್ತರ ಪ್ರದೇಶದಲ್ಲಿ ಜನನ ಪ್ರಮಾಣವನ್ನು ನಿಯಂತ್ರಿಸುವ ಅವಶ್ಯಕತೆ ಇದೆ. ಪ್ರಸ್ತುತ ರಾಜ್ಯದಲ್ಲಿ ಇದು ಶೇ.2.9 ರಷ್ಟಿದ್ದು, ಇದನ್ನು ಶೇ.2.1ಕ್ಕೆ ತರುವುದು ಸರ್ಕಾರದ ಗುರಿಯಾಗಿದೆ. ಜೊತೆಗೆ ಎರಡು ಮಕ್ಕಳ ನಡುವೆ ಸೂಕ್ತ ಅಂತರ ಕಾಯುವ ಅವಶ್ಯಕತೆ ಇದೆ. ಇಲ್ಲದೆ ಹೊದಲ್ಲಿ ಇದರಿಂದ ಅಪೌಷ್ಥಿಕತೆಯ ಅಪಾಯ ಎದುರಾಗಲಿದೆ. ಹೀಗಿರುವಾಗ ರಾಜ್ಯದಲ್ಲಿ ಹೊಸ ಜನಸಂಖ್ಯಾ ನೀಡಿ ಜಾರಿಗೆ ಬರುತ್ತಿರುವುದು ತಮಗೆ ಖುಷಿ ತಂದಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.

ಹೊಸ ನೀತಿಯಲ್ಲೆನಿದೆ?
ಹೊಸ ಜನಸಂಖ್ಯಾ ನೀತಿಯಲ್ಲಿ ಕುಟುಂಬ ಯೋಜನೆ ಕಾರ್ಯಕ್ರಮದಡಿಯಲ್ಲಿ ಕೈಗೊಳ್ಳಲಾಗುವ ಗರ್ಭನಿರೋಧಕ ಕ್ರಮಗಳನ್ನು 2021-30ರ (Population Policy 2021- 30) ಅವಧಿಗೆ ಹೆಚ್ಚಿಸಲಾಗುವುದು. ಸುರಕ್ಷಿತ ಗರ್ಭಪಾತಕ್ಕೆ ಸರಿಯಾದ ವ್ಯವಸ್ಥೆ ಇರಲಿದೆ. ನಪುಂಸಕತ್ವ / ಬಂಜೆತನದ ಸಮಸ್ಯೆಗೆ ಪರಿಹಾರಗಳನ್ನು ಒದಗಿಸುವ ಮೂಲಕ ಸುಧಾರಿತ ಆರೋಗ್ಯ ಸೌಲಭ್ಯಗಳು ಮತ್ತು ಜನಸಂಖ್ಯೆಯ ಸ್ಥಿರೀಕರಣದ ಮೂಲಕ ನವಜಾತ ಮತ್ತು ತಾಯಿಯ ಮರಣವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುವುದು ಎನ್ನಲಾಗಿದೆ.

11 ರಿಂದ 19 ವರ್ಷ ವಯಸ್ಸಿನ ಹದಿಹರೆಯದವರ ಪೋಷಣೆ, ಶಿಕ್ಷಣ ಮತ್ತು ಆರೋಗ್ಯದ ಉತ್ತಮ ನಿರ್ವಹಣೆಯ ಜೊತೆಗೆ, ವೃದ್ಧರ ಆರೈಕೆಗಾಗಿ ಸಮಗ್ರ ವ್ಯವಸ್ಥೆಗಳನ್ನು ಸಹ ಮಾಡಬೇಕಾಗಿದೆ ಎಂದು ಹೊಸ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಜನಸಂಖ್ಯೆ ಹೆಚ್ಚಳ ಬಡತನ ಮತ್ತು ಅನಕ್ಷರತೆ ಪ್ರಮುಖ ಅಂಶಗಳಾಗಿವೆ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಹೇಳಿದ್ದಾರೆ. ಪ್ರದೇಶದಲ್ಲಿನ ಈ ಮೊದಲಿನ ಜನಸಂಖ್ಯಾ ನೀತಿಯ ಅವಧಿ 2000-16ರಲ್ಲಿ ಕೊನೆಗೊಂಡಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ- Twitter Grievance Officer: ಭಾರತದಲ್ಲಿ ಕುಂದುಕೊರತೆ ನಿರ್ವಹಣಾ ಅಧಿಕಾರಿಯನ್ನು ನೇಮಕ ಮಾಡಿದ Twitter

ನೌಕರಿಯಲ್ಲಿ ಪ್ರಮೋಶನ್ ಪ್ರಸ್ತಾವನೆ
ಜನಸಂಖ್ಯಾ ನಿಯಂತ್ರಣದ ಮಾನದಂಡಗಳನ್ನು ಅನುಸರಿಸುವ ಅಥವಾ ಎರಡು ಅಥವಾ ಕಡಿಮೆ ಮಕ್ಕಳನ್ನು ಹೊಂದಿರುವ ಉದ್ಯೋಗಿಗಳಿಗೆ ಉತ್ತರ ಪ್ರದೇಶ ಸರ್ಕಾರವು ನೌಕರಿಯಲ್ಲಿ ಬಡ್ತಿ, ವೇತನ ಹೆಚ್ಚಳ, ವಸತಿ ಯೋಜನೆಗಳಲ್ಲಿ ರಿಯಾಯಿತಿ ಮತ್ತು ಇತರ ಭತ್ಯೆಗಳನ್ನು ನೀಡುವುದಾಗಿ ಹೇಳಿದೆ. ಎರಡು ಮಕ್ಕಳ ಮಾನದಂಡವನ್ನು ಅಳವಡಿಸಿಕೊಳ್ಳುವ ಸರ್ಕಾರಿ ನೌಕರರು ತಮ್ಮ ಇಡೀ ಸೇವಾವಧಿಯಲ್ಲಿ ಎರಡು ಹೆಚ್ಚುವರಿ ಇನ್ಕ್ರಿಮೆಂಟ್ ಪಡೆಯಲಿದ್ದಾರೆ. ಇದರ ಜೊತೆಗೆ ಪೂರ್ಣ ವೇತನ ಮತ್ತು ಭತ್ಯೆಗಳೊಂದಿಗೆ 12 ತಿಂಗಳ ಹೆರಿಗೆ ಅಥವಾ ಪಿತೃತ್ವ ರಜೆ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಉದ್ಯೋಗದಾತರ ಕೊಡುಗೆ ನಿಧಿಯಲ್ಲಿ ಮೂರು ಶೇಕಡಾ ಹೆಚ್ಚಳದಂತಹ ಸೌಲಭ್ಯಗಳು ಅವರಿಗೆ ಸಿಗಲಿವೆ.

ಇದನ್ನೂ ಓದಿ-ಎರಡು ಭುಜಗಳಲ್ಲಿನ BP ಅಂತರ ಅಪಾಯದ ಸಂಕೇತವೇ? ತಜ್ಞರು ಹೇಳುವುದೇನು?

20 ವರ್ಷಗಳವರೆಗೆ ಉಚಿತ ಚಿಕಿತ್ಸೆ
ಇನ್ನೊಂದೆಡೆ ಸರ್ಕಾರಿ ನೌಕರರಲ್ಲದ ನಾಗರಿಕರು ಹಾಗೂ ಜನಸಂಖ್ಯಾ ನಿಯಂತ್ರಣಕ್ಕೆ ಕೊಡುಗೆ ನೀಡುವವರಿಗೆ ನೀರು, ವಸತಿ, ಗೃಹ ಸಾಲ ಇತ್ಯಾದಿಗಳ ಮೇಲೆ ತೆರಿಗೆ ವಿನಾಯ್ತಿಯ ಲಾಭ ಸಿಗಲಿದೆ. ಒಂದು ವೇಳೆ ಯಾವುದೇ ಒಂದು ಮಗುವಿನ ಪೋಷಕರು ಗರ್ಭ ನಿಯಂತ್ರಣದ ಆಯ್ಕೆಯನ್ನು ಅನುಸರಿಸುತ್ತಾರೋ ಅವರಿಗೆ ಮಗುವಿನ 20 ವರ್ಷದವರೆಗೆ ಉಚಿತ ಚಿಕಿತ್ಸೆಯ ಲಾಭ ಸಿಗಲಿದೆ.

ಇದನ್ನೂ ಓದಿ-Cheap Gold - ಅಗ್ಗದ ದರದಲ್ಲಿ ಚಿನ್ನ ಖರೀದಿಸುವ ಅವಕಾಶ ಮತ್ತೆ ಸಿಗುತ್ತಿದೆ, ಇಲ್ಲಿದೆ ಡೀಟೇಲ್ಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News