ನವದೆಹಲಿ: ನ್ಯಾಷನಲ್ ಹೈವೇಸ್ ಅಥಾರಿಟಿಯಲ್ಲಿ (NHAI) 163 ವ್ಯವಸ್ಥಾಪಕ / ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಜನವರಿ 1,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
Here is your chance to contribute to Nation Building! NHAI invites applications for 163 posts. More details here: https://t.co/BmFG5zSBu5#NHAI #BuildingTheNation #WeAreHiring pic.twitter.com/LIT206Y4AW
— NHAI (@NHAI_Official) November 4, 2020
ವಿದ್ಯಾರ್ಹತೆ:
ಬಿ.ಇ (ಸಿವಿಲ್)/ಕಾಮರ್ಸ್ ಪದವಿ/ಅಕೌಂಟ್ಸ್ ವಿಭಾಗದಲ್ಲಿ ಮಾನ್ಯತೆ ಪಡೆದ ಸಂಸ್ಥೆ/ಬೋರ್ಡ್/ವಿಶ್ವವಿದ್ಯಾಲಯದಿಂದ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
ವಯೋಮಿತಿ:
ಹುದ್ದೆಗಳಿಗನುಸಾರ ಗರಿಷ್ಟ 56 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವೇತನದ ವಿವರ:
ವ್ಯವಸ್ಥಾಪಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 37,400/- ರಿಂದ 2,09,200/-ರೂ.ವರೆಗೆ ವೇತನವನ್ನು ನೀಡಲಾಗುವುದು.
ವಿಶ್ವದ ಅತ್ಯಂತ ಉದ್ದವಾದ ಸುರಂಗ ಮಾರ್ಗ Atal Tunnel ಸಿದ್ಧ, PM Modiಯಿಂದ ಇಂದು ಲೋಕಾರ್ಪಣೆ
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ / ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ: ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಸೇರಬಯಸುವ ಅಭ್ಯರ್ಥಿಗಳು ನ್ಯಾಷನಲ್ ಹೈವೇಸ್ ಅಥಾರಿಟಿಯ ಅಧಿಕೃತ ವೆಬ್ಸೈಟ್ http://www.nhai.gov.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಜನವರಿ 1,2021ರ ಸಂಜೆ 6 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
Indian Railways: ಈ ಏಳು ಮಾರ್ಗಗಳಲ್ಲಿ ಚಲಿಸಲಿದೆ ಹೈಸ್ಪೀಡ್ ರೈಲು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಯು ಆನ್‌ಲೈನ್ ಅರ್ಜಿಯ ಪ್ರಿಂಟೌಟ್ ತೆಗೆದುಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಯ ವಿಳಾಸಕ್ಕೆ ಜನವರಿ 1,2021ರೊಳಗೆ ತಲುಪಿಸಬೇಕಿರುತ್ತದೆ.
ಕಚೇರಿಯ ವಿಳಾಸ:
ಡಿಜಿಎಂ-I ಎ, ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ,
ಪ್ಲಾಟ್ ನಂ: ಜಿ-5 ಮತ್ತು 6, ಸೆಕ್ಟರ್-10,
ದ್ವಾರಕ, ನವದೆಹಲಿ-110075.